ಶನಿವಾರ, ಡಿಸೆಂಬರ್ 5, 2020
19 °C
ಹಬ್ಬದ ಸಂದರ್ಭದಲ್ಲಿ ಏರಿಕೆಯಾಗಿದ್ದ ತರಕಾರಿ ಕೊಂಚ ಇಳಿಕೆ

ಯಾದಗಿರಿ | ವಾರದ ಮಾರುಕಟ್ಟೆ ನೋಟ: ಈರುಳ್ಳಿ ದರ ಇಳಿಕೆ, ಬೀನ್ಸ್ ಏರಿಕೆ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಕಳೆದ ವಾರ ದಸರಾ ಹಬ್ಬದ ಸಂದರ್ಭದಲ್ಲಿ ತರಕಾರಿ ಬೆಲೆ ಗಗನಕ್ಕೆ ಏರಿಕೆಯಾಗಿತ್ತು. ಈ ವಾರ ತರಕಾರಿ ಬೆಲೆ ಕೊಂಚ ಇಳಿಕೆಯಾಗಿದ್ದು, ಗ್ರಾಹಕರಿಗೆ ಕೊಂಚ ಸಮಾಧಾನ ಮೂಡಿಸಿದೆ.

ಹಬ್ಬದ ಸಂದರ್ಭದಲ್ಲಿ ತರಕಾರಿ, ಹೂ, ಹಣ್ಣುಗಳ ಬೆಲೆ ಏರಿಕೆಯಿಂದ ಗ್ರಾಹಕರು ತತ್ತರಿಸಿದ್ದರು. ಕಡಿಮೆ ಪ್ರಮಾಣದಲ್ಲಿ ಖರೀದಿಸಿರುವುದು ಕಂಡುಬಂದಿತು.

ನಗರದ ಮಹಾತ್ಮ ಗಾಂಧಿ ತರಕಾರಿ ಮಾರುಕಟ್ಟೆಯಲ್ಲಿ ಕಳೆದ ಎರಡು ವಾರಗಳಿಂದ ಗ್ರಾಹಕರಿಗೆ ಕಣ್ಣೀರು ತರಿಸಿದ್ದ ಈರುಳ್ಳಿ ಬೆಲೆ ಕೆ.ಜಿಗೆ ₹30 ಇಳಿಕೆಯಾಗಿ ಈಗ ₹70 ಕೆ.ಜಿ ಮಾರಾಟವಾಗುತ್ತಿದೆ. ಕಳೆದ ವಾರಕ್ಕಿಂತ ಬೀನ್ಸ್ ಕೆ.ಜಿಗೆ ₹20 ಹೆಚ್ಚಳವಾಗಿ ₹100 ದರವಿದೆ.

ಗೋಬಿ ಕಳೆದ ವಾರ ₹100 ಕೆ.ಜಿ ಇತ್ತು. ಈ ವಾರ ₹80ಗೆ ಇಳಿಕೆಯಾಗಿದೆ. ಚವಳೆಕಾಯಿ ಕಳೆದ ವಾರಕ್ಕಿಂತ ₹40 ಇಳಿಕೆಯಾಗಿ ₹80 ಕೆ.ಜಿಗೆ ಮಾರಾಟವಾಗುತ್ತಿದೆ.

ಮೆಣಸಿನಕಾಯಿ ₹30 ಕೆ.ಜಿ, ಸೋರೆಕಾಯಿ ₹80 ಇದ್ದಿದ್ದು, ₹40ಗೆ ಇಳಿಕೆಯಾಗಿದೆ.

ದರ ಏರಿಕೆ: ದೊಣ್ಣೆಮೆಣಸಿನಕಾಯಿ ಕಳೆದ ವಾರ ₹60 ಕೆ.ಜಿ ಇದ್ದಿದ್ದು, ಈ ವಾರ ₹80ಗೆ ಏರಿಕೆಯಾಗಿದೆ. ಬಿಟ್‌ರೂಟ್‌ ಕಳೆದ ವಾರಕ್ಕಿಂತ ಕೆ.ಜಿಗೆ ₹20 ಹೆಚ್ಚಳವಾಗಿದೆ. ಸದ್ಯ ₹80ಗೆ ಕೆಜಿ ಇದೆ. ಹಾಗಲಕಾಯಿ ಕೆ.ಜಿಗೆ ₹80, ತೊಂಡೆಕಾಯಿ ₹80 ಇದ್ದು, ಕೆ.ಜಿಗೆ ₹20 ಹೆಚ್ಚಳವಾಗಿದೆ.

ಟೊಮೆಟೊ, ಬದನೆಕಾಯಿ, ಬೆಂಡೆಕಾಯಿ, ಆಲೂಗಡ್ಡೆ, ಕ್ಯಾಬೇಜ್, ಗಜ್ಜರಿ, ಸೌತೆಕಾಯಿ, ಹೀರೆಕಾಯಿ, ಹಾಗಲಕಾಯಿ, ತೊಂಡೆಕಾಯಿ ಕಳೆದ ವಾರದಂತೆ ಈ ವಾರವೂ ದರ ಸ್ಥಿರವಾಗಿದೆ.

ಸೊಪ್ಪುಗಳ ದರ:
ಕೊತಂಬರಿ ಸೊಪ್ಪು ಒಂದು ಕಟ್ಟುಗೆ ₹30, ಪುದೀನಾ ₹30 ಗೆ ಒಂದು ಕಟ್ಟು ಮಾರಾಟವಾಗುತ್ತಿದೆ. ಮೆಂತೆ ₹20ಗೆ 3 ಕಟ್ಟು, ಪಲಾಕ್‌ ಒಂದು ಕಟ್ಟು ಖರೀದಿಸಿದರೆ ₹10,ಎರಡು ಕಟ್ಟು ಖರೀದಿಸಿದರೆ ₹15ಗೆ ಸಿಗುತ್ತಿದೆ. ಪುಂಡಿಪಲ್ಯೆ, ರಾಜಗಿರಿ ಸೊಪ್ಪು ₹5ಗೆ ಒಂದು ಕಟ್ಟು ಮಾರಾವಾಗುತ್ತಿದೆ.

***

ಕಳೆದ ವಾರದ ಹಬ್ಬದ ಸೀಸನ್‌ ಇರುವ ಕಾರಣ ತರಕಾರಿ ಬೆಲೆ ಹೆಚ್ಚಳವಾಗಿತ್ತು. ಈ ವಾರ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದ್ದು, ಗ್ರಾಹಕರಿಗೆ ಸಮಾಧಾನ ಮೂಡಿಸಿದೆ

ದೇವಿಂದ್ರ, ಗ್ರಾಹಕ

***

ತರಕಾರಿ ಬೆಲೆ ಇಳಿಕೆಯಾಗಿದ್ದರೂ ಕೆಲ ತರಕಾರಿಗಳು ಮಾರುಕಟ್ಟೆಗೆ ಬರುತ್ತಿಲ್ಲ. ಆವಕ ಜಾಸ್ತಿ ಬರುತ್ತಿಲ್ಲ. ಇದರಿಂದ ದರಗಳಲ್ಲಿ ಏರಿಳಿಕೆ ಆಗುತ್ತಿದೆ

ಶೇಖ ಹೈಮದ್, ವ್ಯಾಪಾರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.