ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರದ ಮಾರುಕಟ್ಟೆ ನೋಟ; ಮತ್ತಷ್ಟು ಅಗ್ಗವಾದ ತರಕಾರಿ, ಸೊಪ್ಪು

ಕಳೆದ ವಾರಕ್ಕಿಂತ ಇಳಿಕೆಯಾದ ತರಕಾರಿ ದರ
Last Updated 6 ಡಿಸೆಂಬರ್ 2020, 5:49 IST
ಅಕ್ಷರ ಗಾತ್ರ

ಯಾದಗಿರಿ: ನಗರದ ರೈಲ್ವೆ ಸ್ಟೇಷನ್ ರಸ್ತೆಯ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ, ಸೊಪ್ಪುಗಳ ದರ ಕಳೆದ ವಾರಕ್ಕಿಂತ ಅಗ್ಗವಾಗಿದೆ.

ನಗರದಲ್ಲಿ ಶನಿವಾರ ಬೆಳಿಗ್ಗೆ ಬಂದ್‌ ಅನಿಶ್ಚತೆಯಿದ್ದರೂ ವ್ಯಾಪಾರ–ವಾಹಿವಾಟು ಎಂದಿನಂತೆ ಸಾಗಿತ್ತು. ತರಕಾರಿ ವ್ಯಾಪಾರಿಗಳು ಆಟೊ, ಟಂಟಂ ಮೂಲಕ ಹಳ್ಳಿಗಳಿಂದ ತರಕಾರಿ ತಂದು ಹಾಕುತ್ತಿದ್ದರು. ಬೆಳಿಗ್ಗೆ 9–10 ಗಂಟೆ ನಂತರ ವ್ಯಾಪಾರದಲ್ಲಿ ಯಾವುದೇ ವ್ಯಾತ್ಯಾಸ ಕಾಣಲಿಲ್ಲ. ಎಲ್ಲವೂ ಎಂದಿನಂತೆ ನಡೆಯಿತು.

ಈ ಬಾರಿ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದ್ದು, ಗ್ರಾಹಕರಿಗೆ ಹೊರೆ ಕಡಿಮೆಯಾದಂತೆ ಆಗಿದೆ. ಇನ್ನುಳಿದಂತೆ ಬೇರೆ ತರಕಾರಿಗಳ ದರವೂ ಯಥಾಸ್ಥಿತಿಯಲ್ಲಿದೆ. ಸೊಪ್ಪುಗಳ ದರದಲ್ಲಿಯೂ ಏರಿಳಿಕೆಯಾಗಿಲ್ಲ.

ಟೊಮೆಟೊ ಕಳೆದ ವಾರ ಕೆ.ಜಿಗೆ ₹30 ಇತ್ತು. ಈ ವಾರ ₹20ಕ್ಕೆ ಮಾರಾಟವಾಗುತ್ತಿದೆ. ಬದನೆಕಾಯಿ ಬೆಲೆ ಕೆಜಿಗೆ ₹40 ಇದ್ದು ಕಳೆದ ವಾರದಂತೆ ಈ ವಾರವೂ ಸ್ಥಿರವಾಗಿದೆ.

ಬೆಂಡೆಕಾಯಿ ದರ ₹60, ದೊಣ್ಣೆಮೆಣಸಿನಕಾಯಿ ₹40, ಆಲೂಗಡ್ಡೆ ₹50 ದರವಿದೆ. ಈರುಳ್ಳಿ ಬೆಲೆ ಇಳಿಕೆಯಾಗಿದ್ದು, ಕೆ.ಜಿಗೆ ₹60 ದರವಿದೆ. ಹೂಕೋಸು ಕಳೆದ ವಾರಕ್ಕಿಂತ ₹30 ಇಳಿಕೆಯಾಗಿದೆ. ಕಳೆದ ವಾರ ಎಲೆಕೋಸು ₹60 ಕೆಜಿ ಮಾರಾಟವಾಗುತ್ತಿತ್ತು.

ಚವಳೆಕಾಯಿ ₹80 ಕೆಜಿ ಇದ್ದು, ಕಳೆದ ವಾರವೂ ಇದೇ ದರವಿತ್ತು. ಕೆಲ ಕಡೆ ಚವಳೆಕಾಯಿ ಸಿಗುತ್ತಿಲ್ಲ. ‌ಬೀನ್ಸ್ ದರವೂ ₹60 ಕೇಜಿ ಇದೆ. ಗಜ್ಜರಿ ಕೆಜಿಗೆ ₹100 ದರವಿತ್ತು. ಈ ವಾರ ₹80 ಇದೆ. ಸೌತೆಕಾಯಿ ಕಳೆದ ವಾರಕ್ಕಿಂತ ₹10 ಕಡಿಮೆಯಾಗಿದೆ. ಮೂಲಂಗಿ ₹40 ಕೆಜಿ ಇದ್ದು, ಕಳೆದ ವಾರ ₹60 ಇತ್ತು. ಮೆಣಸಿನಕಾಯಿ ಕಳೆದ ವಾರದಂತೆ ದರ ಸ್ಥಿರವಾಗಿದೆ.

ಸೋರೆಕಾಯಿ ಅಗ್ಗವಾಗಿದ್ದು,₹10ರಿಂದ ₹15ಗೆ ಒಂದು ಸಿಗುತ್ತಿದೆ. ಕೆಜಿ ಲೆಕ್ಕದಲ್ಲಿ ₹40 ದರವಿದೆ. ಬಿಟ್ ರೂಟ್, ಹೀರೆಕಾಯಿ, ಹಾಗಲಕಾಯಿ ಕಳೆದ ವಾರದಂತೆ ಒಂದೇ ದರವಿದೆ. ತೊಂಡೆಕಾಯಿ ಕಳೆದ ವಾರ ₹60 ದರವಿತ್ತು. ಈ ಬಾರಿ ಕೆ.ಜಿಗೆ ₹80 ಇದೆ.

ಸೊಪ್ಪುಗಳ ಅಗ್ಗ: ಈ ವಾರ ಸೊಪ್ಪು ದರದಲ್ಲಿ ಇಳಿಕೆಯಾಗಿದೆ. ಮೆಂತ್ಯೆ ಸೊಪ್ಪು ₹20ಗೆ ನಾಲ್ಕು ಕಟ್ಟು ಸಿಗುತ್ತಿದೆ. ರಾಜಗಿರಿಯೂ ₹20ಗೆ 4 ಕಟ್ಟು ಸಿಗುತ್ತಿದೆ. ಸಬ್ಬಸಗಿ ₹10ಗೆ ಒಂದು ಕಟ್ಟು, ಪುಂಡಿಪಲ್ಯೆ ₹20ಗೆ 4 ಕಟ್ಟು, ಪಾಲಕ್‌ ₹20 ಗೆ 4 ಕಟ್ಟು ಮಾರಾಟವಾಗುತ್ತಿದೆ.

ಶುಂಠಿ ₹50–60 ಕೆಜಿ ಇದೆ. ಬೆಳ್ಳೊಳ್ಳಿ ₹120 ಕೆಜಿ ಇದೆ. ಕೊತಂಬರಿ ಸೊಪ್ಪು ₹10, ಪುದೀನಾ ₹10ರಿಂದ ₹15 ಒಂದು ಕಟ್ಟು ಇದೆ.

***

ತರಕಾರಿ ದರ (₹ ಕೆೆ.ಜಿಗಳಲ್ಲಿ)

ಕಳೆದ ವಾರ;ಈ ವಾರ
ಟೊಮೆಟೊ;30;20
ಬದನೆಕಾಯಿ;40;40
ಬೆಂಡೆಕಾಯಿ;60;60
ದೊಣ್ಣೆಮೆಣಸಿನಕಾಯಿ;40;40
ಆಲೂಗಡ್ಡೆ;50;50
ಈರುಳ್ಳಿ;70;60
ಗೋಬಿ;80;50
ಕ್ಯಾಬೇಜ್;60;30
ಚವಳೆಕಾಯಿ;80;80
ಬೀನ್ಸ್;80;60
ಗಜ್ಜರಿ;100;80
ಸೌತೆಕಾಯಿ;50;40
ಮೂಲಂಗಿ;60;60
ಮೆಣಸಿನಕಾಯಿ;40;40
ಸೋರೆಕಾಯಿ;40;40
ಬಿಟ್ ರೂಟ್;80;80
ಹೀರೆಕಾಯಿ;80;80
ಹಾಗಲಕಾಯಿ;60;60
ತೊಂಡೆಕಾಯಿ;60;80

***

ಈ ಬಾರಿ ತರಕಾರಿಗಳ ದರ ಸ್ಥಿರವಾಗಿದ್ದು, ಕೆಲ ತರಕಾರಿ ದರ ಕಡಿಮೆ ಇದೆ. ದರ ಹೆಚ್ಚಿಲ್ಲದಿದ್ದರಿಂದ ಖರೀದಿಯೂ ಹೆಚ್ಚು ಮಾಡಿದ್ದೇನೆ
ಮಲ್ಲೇಶ ಎಲ್ಹೇರಿ, ಗ್ರಾಹಕ

***

ಈಬಾರಿ ಚವಳೆಕಾಯಿ ದರ ಮಾರುಕಟ್ಟೆಯಲ್ಲಿ ಏರಿಕೆಯಾಗಿದ್ದು, ನಮಗೆ ಬೆಳಿಗ್ಗೆ ಸಿಗಲಿಲ್ಲ. ಉಳಿದಂತೆ ಬೇರೆ ತರಕಾರಿಗಳು ಹೆಚ್ಚಿನ ಬೆಲೆ ಇಲ್ಲ. ಅಗ್ಗವಾಗಿವೆ
ಮಹಮ್ಮದ್‌ ಅಕ್ಬರ್, ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT