ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಎಪಿಎಂಸಿ ಅಧ್ಯಕ್ಷರಾಗಿ ಬಸಲಿಂಗಪ್ಪ ನಾಯಕ ಬೆಳಗುಂದಿ ಆಯ್ಕೆ

Last Updated 6 ಜೂನ್ 2020, 10:06 IST
ಅಕ್ಷರ ಗಾತ್ರ

ಯಾದಗಿರಿ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸೈದಾಪುರ ಮತಕ್ಷೇತ್ರದ ಸದಸ್ಯ ಬಸಲಿಂಗಪ್ಪ ನಾಯಕ ಬೆಳಗುಂದಿ ಹಾಗೂ ಉಪಾಧ್ಯಕ್ಷರಾಗಿ ಯಾದಗಿರಿ ಬಿ ಸದಸ್ಯ ಭೀಮರಡ್ಡಿ ಮುದ್ನಾಳ ಆಯ್ಕೆಯಾದರು.

ಶನಿವಾರ ಸಮಿತಿಯ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಸಲಿಂಗಪ್ಪ ನಾಯಕ ಬೆಳಗುಂದಿ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಅನಂತಪ್ಪ ಯದ್ಲಾಪೂರ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಭೀಮರಡ್ಡಿ ಮುದ್ನಾಳ ಹಾಗೂ ರಂಜನಾದೇವಿ ನಾಮಪತ್ರ ಸಲ್ಲಿಸಿದ್ದರು.

ಸಭೆಯಲ್ಲಿ 16 ಸದಸ್ಯರು ಉಪಸ್ಥಿತರಿದ್ದು, ಮತ ಚಲಾಯಿಸಿದರು. ಬಸಲಿಂಗಪ್ಪ ನಾಯಕ ಬೆಳಗುಂದಿ ಅವರಿಗೆ 9 ಮತಗಳು ಲಭಿಸಿದರೆ, ಅವರ ಪ್ರತಿಸ್ಪರ್ಧಿ ಅನಂತಪ್ಪ ಯದ್ಲಾಪೂರ ಅವರಿಗೆ 7 ಮತಗಳು ಪಡೆದರು. 2 ಮತಗಳ ಅಂತರದಿಂದ ಬೆಳಗುಂದಿ ಅಧ್ಯಕ್ಷರಾಗಿ ಆಯ್ಕೆಯಾದರು.

ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಭೀಮರಡ್ಡಿ ಮುದ್ನಾಳ 10 ಮತಗಳು ಪಡೆದರು. ರಂಜನಾದೇವಿ 6 ಮತ ಪಡೆದರು.

ಚುನಾವಣೆ ಅಧಿಕಾರಿಯಾಗಿ ತಹಶೀಲ್ದಾರ್‌ ಚನ್ನಮಲ್ಲಪ್ಪ ಘಂಟಿ ಕಾರ್ಯನಿರ್ವಹಿಸಿ, ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಘೋಷಿಸಿದರು.

ನಂತರ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಬಿಜೆಪಿ ಮುಖಂಡರು, ಕಾರ್ಯಕರ್ತರು ಸಂಭ್ರಮದಿಂದ ಸ್ಥಳೀಯ ಶಾಸಕ ವೆಂಕಟರಡ್ಡಿ ಮುದ್ನಾಳ ಅವರ ಜನಸಂಪರ್ಕ ಕಚೇರಿಗೆ ಆಗಮಿಸಿ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ಈ ವೇಳೆ ಶಾಸಕ ವೆಂಕಟರೆಡ್ಡಿ ಮುದ್ನಾಳ, ಮಾಜಿ ಶಾಸಕ ಡಾ.ವೀರಬಸವಂತರಡ್ಡಿ ಮುದ್ನಾಳ, ಸಿದ್ದಪ್ಪ ಹೊಟ್ಟಿ, ಬಸಪ್ಪಗೌಡ ಬೆಳಗುಂದಿ, ಭೀಮಣ್ಣಗೌಡ ಕ್ಯಾತನಾಳ, ಮಹಾದೇವಪ್ಪ ಯಲಸತ್ತಿ, ಶರಣಗೌಡ ಕಾಳೆಬೆಳಗುಂದಿ, ಖಂಡಪ್ಪ ದಾಸನ್, ಶರಣಗೌಡ ಬಾಡಿಯಾಳ, ಸಿದ್ದಲಿಂಗಪ್ಪ ನಾಯಕ, ಸೋಮನಾಥ ಜೈನ್, ಬಸವರಾಜ ಚಂಡ್ರಿಕಿ, ರುದ್ರಗೌಡ ಪಾಟೀಲ, ಸೋಮು ರಾಠೋಡ, ಸೋಮು ಮುದ್ನಾಳ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT