ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಣಸಗಿ: ಬೊಲೆರೊ ವಾಹನ ಪಲ್ಟಿ– ಒಬ್ಬ ಮಹಿಳೆ ಸಾವು, 34 ಜನರಿಗೆ ಗಾಯ

Published 11 ಫೆಬ್ರುವರಿ 2024, 11:22 IST
Last Updated 11 ಫೆಬ್ರುವರಿ 2024, 11:22 IST
ಅಕ್ಷರ ಗಾತ್ರ

ಹುಣಸಗಿ (ಯಾದಗಿರಿ ಜಿಲ್ಲೆ): ಹುಣಸಗಿ ತಾಲ್ಲೂಕಿನ ಸದಬ ಗ್ರಾಮದ ಬಳಿ ಕೂಲಿಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬೊಲೆರೊ ವಾಹನ ಪಲ್ಟಿಯಾದ ಪರಿಣಾಮವಾಗಿ ಒಬ್ಬ ಮಹಿಳೆ ಸ್ಥಳದಲ್ಲಿ ಮೃತಪಟ್ಟಿದ್ದು, 34 ಕ್ಕೂ ಹೆಚ್ಚು ಜನರಿಗೆ ಗಾಯವಾದ ದುರ್ಘಟನೆ ಭಾನುವಾರ ನಡೆದಿದೆ‌‌.

ಮೃತರನ್ನು ಕಲ್ಲದೇವನಹಳ್ಳಿ ಗ್ರಾಮದ ಲಕ್ಷ್ಮಿ (30) ಎಂದು ಗುರುತಿಸಲಾಗಿದೆ.

ಎಲ್ಲರೂ ಒಂದೇ ವಾಹನದಲ್ಲಿ ಒಣ ಮೆಣಸಿನಕಾಯಿ ಬಿಡಿಸಲು ಕಲ್ಲದೇವನಹಳ್ಳಿ ಗ್ರಾಮದಿಂದ ಹೊರಟಿದ್ದರು ಎಂದು ತಿಳಿದುಬಂದಿದೆ.

ಗಾಯಗೊಂಡಿದ್ದ 34 ಜನರನ್ನು ಹುಣಸಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು. ಗಂಭೀರ ಗಾಯಗೊಂಡಿರುವ 8 ಜನರನ್ನು ವಿಜಯಪುರ, ಯಾದಗಿರಿ ಹಾಗೂ ಕಲಬುರಗಿ ಆಸ್ಪತ್ರೆಗೆ ಕಳಿಸಿಕೊಡಲಾಗಿದೆ ಎಂದು ಹುಣಸಗಿ ಸಮುದಾಯ ಆರೋಗ್ಯ ಕೇಂದ್ರದ ಡಾ.ರಶೀದ್ ಹಾಗೂ ಡಾ. ಉಮಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT