ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ವಿವಿಧೆಡೆ ಕರ್ನಾಟಕ ರಾಜ್ಯೋತ್ಸವ

ವರ್ಷದ 365 ದಿನವೂ ಕನ್ನಡತನ ಮೆರೆಯಬೇಕು: ಗಣ್ಯರ ಸಲಹೆ
Last Updated 1 ನವೆಂಬರ್ 2021, 16:29 IST
ಅಕ್ಷರ ಗಾತ್ರ

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಲ್ಲಿ 66ನೇ ಕರ್ನಾಟಕ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಯಿತು.

ಕನ್ನಡ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಹಾರ ಹಾಕಿ ಭಕ್ತಿಯಿಂದ ನಮಿಸಲಾಯಿತು. ನಂತರ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಕನ್ನಡ, ಉಳಿಸಿ, ಬೆಳೆಸುವ ಬಗ್ಗೆ ಗಣ್ಯರು ಕರೆ ನೀಡಿದರು.

ಬಿಜೆಪಿ ಕಾರ್ಯಾಲಯ:ನಗರದ ಬಿಜೆಪಿ ಕಾರ್ಯಾಲಯದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು.

ಈ ವೇಳೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶರಣಭೂಪಾಲರಡ್ಡಿ ಮಾತನಾಡಿ, ಕೇವಲ ನವೆಂಬರ್ 1 ರಂದು ಕನ್ನಡತನ ತೋರಿಸಿದರೆ ಸಾಲದು, ವರ್ಷದ 365 ದಿನವೂ ಕನ್ನಡತನ ಮೆರೆಯಬೇಕು ಎಂದು ತಿಳಿಸಿದರು.

ಭಾಷೆಗಳ ಜೊತೆ ಮಿಶ್ರಿತ ಕನ್ನಡ ಬಳಕೆಯಾಗುತ್ತಿದೆ. ಸ್ವಚ್ಛಗನ್ನಡ ಬಳೆಸಲು ನಾವು ಮುಂದಾಗಬೇಕು.ಕನ್ನಡ ನಾಡು ಶ್ರೀಗಂಧದ ನಾಡು, ಚಿನ್ನದ ಬೀಡು ಎಂಬ ಹೆಮ್ಮೆ ಪಡೆದಿದೆ. ಕವಿ ವರ್ಣನೆಗಿಂತ ಮಿಗಿಲಾದ ಸ್ವರ್ಗ ಇಲ್ಲಿದೆ ಎಂದರು.

ಶಾಸಕ ವೆಂಕಟರಡ್ಡಿ ಮುದ್ನಾಳ, ಮಾಜಿ ಶಾಸಕ ಡಾ.ವೀರಬಸವಂತರಡ್ಡಿ ಮುದ್ನಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವಿಂದ್ರನಾಥ ನಾದ, ವೆಂಕಟರಡ್ಡಿ ಅಬ್ಬೆತುಮಕೂರ, ಖಂಡಪ್ಪ ದಾಸನ್, ಚನ್ನಾರೆಡ್ಡಿಗೌಡ ಬಿಳ್ಹಾರ, ರವಿ ಮಾಲಿಪಾಟೀಲ, ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ, ಯುಡಾ ಅಧ್ಯಕ್ಷ ಬಸವರಾಜ ಚಂಡ್ರಕಿ, ನಗರಸಭೆ ಉಪಾಧ್ಯಕ್ಷೆ ಪ್ರಭಾವತಿ ಮಾರುತಿ ಕಲಾಲ್‌, ಪರಶುರಾಮ ಕುರಕುಂದ, ನಗರಸಭೆ ಸದಸ್ಯ ಸುರೇಶ್ ಅಂಬಿಗೇರ, ಸ್ವಾಮಿದೇವ ದಾಸನಕೇರಿ, ಅಂಬಯ್ಯ ಶಾಬಾದಿ, ಸುನಿತಾ ಚವಾಣ್, ಮಹೇಶ್ ಕುರಕುಂಬಳ, ಮೊಹಮ್ಮದ್ ವಹಾಬ್, ಸಾಬಣ್ಣ ಪರಸನಾಯಕ, ಶಂಕರ್ ಸೋನಾರ್, ಶಕುಂತಲಾ ಜಿ, ಯುಡಾ ಸದಸ್ಯರಾದ ರುದ್ರಗೌಡ ಪಾಟೀಲ, ಮಂಜುನಾಥ ಜಡಿ, ಸುಭಾಸ್ ಮ್ಯಾಳಿಕೇರಿ, ಶಿವಕಾಂತಮ್ಮ ವಡ್ನಳಿ, ರಿಯಾಜ್ ಕೊಲ್ಲೂರು, ಪರ್ವೀನ್ ಬೇಗಂ, ದೇವೀಂದ್ರಪ್ಪ ಯರಗೋಳ, ವಿರೂಪಾಕ್ಷಯ್ಯ ಸ್ವಾಮಿ ಹೆಡಗಿಮದ್ರಾ, ಚಂದ್ರಶೇಖರ್ ಕಡೇಚೂರ, ಇಮಾನ್ವೆಲ್ ಜಿಮ್ಮಿ ಇದ್ದರು.

ಜೆಡಿಎಸ್‌ ಕಾರ್ಯಾಲಯ: ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ 66ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ ಮಾಡಲಾಯಿತು.

ಜೆಡಿಎಸ್ ನಗರ ಘಟಕ ಅಧ್ಯಕ್ಷ ವಿಶ್ವನಾಥ ಸಿರವಾರ ಮಾತನಾಡಿ, ನಮ್ಮ ಭಾಷೆ ನಮ್ಮ ಸಂಸ್ಕೃತಿ ದೇಶದಲ್ಲಿಯೇ ಮಾದರಿಯಾಗಿದೆ. ಹಲವು ಪ್ರದೇಶಗಳ ಜನರು ನಮ್ಮ ಭಾಷೆಯನ್ನು ಅತ್ಯಂತ ಸುಲಭವಾಗಿ ಕಲಿತು ನಮ್ಮಲ್ಲಿ ಬೆರೆತು ಜೀವನ ಸಾಗಿಸುತ್ತಿದ್ದಾರೆ ಎಂದು ಹೇಳಿದರು.

ಈ ವೇಳೆ ಭೋಜನಗೌಡ, ಶಿವಪ್ಪ ಮುಷ್ಟೂರು, ಶರಣಪ್ಪ ಗುಳಗಿ, ಶಫಿ ತುನ್ನೂರು, ಶರಣಪ್ಪ ಪಡಶೆಟ್ಟಿ, ಮಹ್ಮದ್ ಯಾಕೂಬ, ಬಸವರಾಜ ಗಿರೆಪ್ಪನೋರ, ರಾಜಶೇಖರ ದೊರೆ, ಯಂಕಪ್ಪ ಗೋಸಿ, ವೀರಭದ್ರಪ್ಪ, ಅಬ್ದುಲ್ ವಾಹಿದ್, ಸಾಬು ನಾಯಕ, ಹಣಮಂತ ದೊರೆ, ರಾಮಣ್ಣ ಕೊಟಗೇರಿ ಇದ್ದರು.

ಜಯ ಕರ್ನಾಟಕ ಸಂಘಟನೆ: ನಗರದ ಜಯ ಕರ್ನಾಟಕ ಸಂಘಟನೆ ಜಿಲ್ಲಾ ಕಾರ್ಯಾಲಯದಲ್ಲಿ 66ನೇ ರಾಜ್ಯೋತ್ಸವ ಅಂಗವಾಗಿ ಸರಳವಾಗಿ ಧ್ವಜಾರೋಹಣ ಮಾಡುವ ಮೂಲಕ ಆಚರಣೆ ಮಾಡಲಾಯಿತು.

ಧ್ವಜಾರೋಹಣ ನೆರವೇರಿಸಿದ ವಿಶ್ವನಾಥ ನಾಯಕ ಮಾತನಾಡಿ, ಕನ್ನಡ ರಾಜ್ಯ ಒಗ್ಗೂಡಿ ರಾಜ್ಯವಾಗಲು ಅನೇಕ ಮಹನೀಯರು ಶ್ರಮಿಸಿದ್ದಾರೆ. ಅವರೆಲ್ಲರನ್ನು ನೆನಪಿಸಿಕೊಳ್ಳುವ ಕೆಲಸ ಆಗಬೇಕೆಂದು ಹೇಳಿದರು.

ರಾಜ್ಯ ಕಾರ್ಯದರ್ಶಿ ವಿಜಯಕುಮಾರ ಮೊಗದಂಪುರ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿವರಾಜ ಗುತ್ತೇದಾರ, ಹಣಮಂತ ಪೂಜಾರಿ, ನಾಗೇಂದ್ರ ಮಾಸ್ಟರ್, ರಿಯಾಜ್ ಪಟೇಲ್, ಬಸವರಾಜ ಮುಂಡರಗಿ, ಮಲ್ಲಿಕಾರ್ಜುನ ಯಾದಗಿರಿ, ಬಸವರಾಜ ಪೂಜಾರಿ, ವಿಶ್ವಾರಾಧ್ಯ ಹುಲಕಲ್, ಕಾಶಿನಾಥ ಯಾದಗಿರಿ, ಮಲ್ಲಿಕಾರ್ಜುನ ನಾಯಕ ಸೇರಿದಂತೆ ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT