ಶುಕ್ರವಾರ, 11 ಜುಲೈ 2025
×
ADVERTISEMENT
ನೀರಿನ ಸಮಸ್ಯೆಗೆ ಬೇಕು ಶಾಶ್ವತ ಪರಿಹಾರ: ಮರುಕಳಿಸುತ್ತಿವೆ ವಾಂತಿ ಭೇದಿ ಪ್ರಕರಣಗಳು
ನೀರಿನ ಸಮಸ್ಯೆಗೆ ಬೇಕು ಶಾಶ್ವತ ಪರಿಹಾರ: ಮರುಕಳಿಸುತ್ತಿವೆ ವಾಂತಿ ಭೇದಿ ಪ್ರಕರಣಗಳು
ಮರುಕಳಿಸುತ್ತಿವೆ ವಾಂತಿ ಭೇದಿ ಪ್ರಕರಣಗಳು; ಸ್ವಚ್ಛತೆಗೆ ಜನರೂ ಕೈಜೋಡಿಸಲಿ ಎಂದ ಆಡಳಿತ
ಫಾಲೋ ಮಾಡಿ
Published 3 ಜುಲೈ 2023, 7:20 IST
Last Updated 3 ಜುಲೈ 2023, 7:20 IST
Comments
ಗುರುಮಠಕಲ್ ತಾಲ್ಲೂಕಿನ ಅನಪುರ ಗ್ರಾಮದಲ್ಲಿ ನೀರಿನ ತೊಟ್ಟಿಯಲ್ಲಿ ಪಾಚಿಗಟ್ಟಿರುವುದು
ಗುರುಮಠಕಲ್ ತಾಲ್ಲೂಕಿನ ಅನಪುರ ಗ್ರಾಮದಲ್ಲಿ ನೀರಿನ ತೊಟ್ಟಿಯಲ್ಲಿ ಪಾಚಿಗಟ್ಟಿರುವುದು
ಗುರುಮಠಕಲ್ ತಾಲ್ಲೂಕಿನ ಅನಪುರ ಗ್ರಾಮದಲ್ಲಿ ಮನೆಗಳಿಗೆ ನಳದ ಸಂಪರ್ಕದ ಪೈಪ್ ಲೈನ್ ಇರುವ ಚರಂಡಿ ಸ್ವಚ್ಛಗೊಳಿಸಿಲ್ಲ
ಗುರುಮಠಕಲ್ ತಾಲ್ಲೂಕಿನ ಅನಪುರ ಗ್ರಾಮದಲ್ಲಿ ಮನೆಗಳಿಗೆ ನಳದ ಸಂಪರ್ಕದ ಪೈಪ್ ಲೈನ್ ಇರುವ ಚರಂಡಿ ಸ್ವಚ್ಛಗೊಳಿಸಿಲ್ಲ
ಗುರುಮಠಕಲ್ ತಾಲ್ಲೂಕಿನ ಗುಂಜನೂರು ಗ್ರಾಮದ ನೀರಿನ ನಳದ ಸುತ್ತಲೂ ಚರಂಡಿ ನಿರು ನಿಂತು ಗಬ್ಬೆದ್ದಿದೆ
ಗುರುಮಠಕಲ್ ತಾಲ್ಲೂಕಿನ ಗುಂಜನೂರು ಗ್ರಾಮದ ನೀರಿನ ನಳದ ಸುತ್ತಲೂ ಚರಂಡಿ ನಿರು ನಿಂತು ಗಬ್ಬೆದ್ದಿದೆ
ಗುರುಮಠಕಲ್ ತಾಲ್ಲೂಕಿನ ಗಾಜರಕೋಟ ಗ್ರಾಮದಲ್ಲಿ ನೀರಿನ ಟ್ಯಾಂಕ್ ಕೆಳಗಿನ ವಾಲ್ವ್ ಗುಂಡಿಯಲ್ಲಿ ಚರಂಡಿ ನೀರು ಸಂಗ್ರಹವಾಗಿದೆ
ಗುರುಮಠಕಲ್ ತಾಲ್ಲೂಕಿನ ಗಾಜರಕೋಟ ಗ್ರಾಮದಲ್ಲಿ ನೀರಿನ ಟ್ಯಾಂಕ್ ಕೆಳಗಿನ ವಾಲ್ವ್ ಗುಂಡಿಯಲ್ಲಿ ಚರಂಡಿ ನೀರು ಸಂಗ್ರಹವಾಗಿದೆ
ತಾಲ್ಲೂಕು ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲೂ ಪ್ರತಿ ಹದಿನೈದು ದಿನಗಳಿಗೊಮ್ಮೆ ನೀರಿನ ಟ್ಯಾಂಕ್ ಹಾಗೂ ಚರಂಡಿ ಸ್ವಚ್ಛತೆ ಕಡ್ಡಾಯವೆಂದು ಪಿಡಿಒಗಳಿಗೆ ಸೂಚನೆ ನೀಡಲಾಗಿದೆ. ಅಂತೆಯೇ ಪ್ರತಿ ಗ್ರಾಮದ ಜಲ ಮೂಲಗಳಿಂದ ನೀರಿನ ಮಾದರಿ ಪರೀಕ್ಷೆಯನ್ನೂ ಸತತ ಮಾಡಿಸಲಾಗುತ್ತಿದೆ
– ಎಸ್.ಎಸ್.ಖಾದ್ರೋಳಿ, ಗುರುಮಠಕಲ್‌ ತಾಲ್ಲೂಕು ಪಂಚಾಯಿತಿ ಇಒ
ಅನಪುರ ಗ್ರಾಮದಲ್ಲಿ ವಾಂತಿ ಭೇದಿಗೆ ಮೃತಪಟ್ಟವರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಒದಗಿಸಲು ಈಗಾಗಲೇ ಕಡತ ಸರ್ಕಾರದ ಹಂತದಲ್ಲಿದೆ. ಶೀಘ್ರ ಪರಿಹಾರ ದೊರುಕುವ ಭರವಸೆಯಿದೆ
– ಮಹ್ಮದ್ ಮೋಸಿನ್ ಅಹ್ಮದ್, ಗುರುಮಠಕಲ್ ತಹಶೀಲ್ದಾರ್
ಫೆಬ್ರುವರಿ ತಿಂಗಳ ಕೊನೆಯಲ್ಲಿ ನನ್ನ ಪತ್ನಿ ವಾಂತಿ ಭೇದಿಗೆ ಮೃತಪಟ್ಟಳು. ಸರ್ಕಾರ ಪರಿಹಾರ ನೀಡುವ ಭರವಸೆ ನೀಡಿತ್ತು. ವಿಧಾನಸಭಾ ಚುನಾವಣೆಗಳ ನಂತರ ಕೊಡಬಹುದೆಂದು ಭಾವಿಸಿದ್ದೆವು. ಆದರೆ ಈವರೆಗೂ ಇನ್ನೂ ಪರಿಹಾರಧನ ಬಂದಿಲ್ಲ
– ವೆಂಕಟಪ್ಪ ನಕ್ಕ, ಮೃತ ಸಾವಿತ್ರಮ್ಮಳ ಪತಿ
ಗ್ರಾಮದಲ್ಲಿ ಸ್ವಚ್ಛತೆಯೆಂಬುದು ಗಗನ ಕುಸುಮ. ರಸ್ತೆಯಲ್ಲಿ ನಳಗಳಿರುವಲ್ಲಿ ಪೈಪ್‌ಲೈನ್ ಇರುವಲ್ಲಿ ಚರಂಡಿ ನೀರು ಗಲೀಜು ತುಂಬಿರುತ್ತದೆ. ನಮ್ಮ ಅಳಲು ಕೇಳಲು ಅಧಿಕಾರಿಗಳಿಗೆ ಪುರುಸೊತ್ತೇ ಸಿಗುತ್ತಿಲ್ಲ
– ಅಂಜಪ್ಪ ಗುಂಜನೂರು, ಗ್ರಾಮಸ್ಥ
ಪೈಪ್‌ನಲ್ಲಿ ಕಲುಷಿತ ನೀರು ಸಂಗ್ರಹ
ಶಹಾಪುರ ತಾಲ್ಲೂಕು ವ್ಯಾಪ್ತಿಯಲ್ಲಿ ಜೆಜೆಎಂ ಕಾಮಗಾರಿಗೆ ಹೊಸ ಪೈಪ್‌ ಅಳವಡಿಸುವ ಭರದಲ್ಲಿ ಹಳೆ ಪೈಪ್‌ ಒಡೆದಿರುವುದು ಅಲ್ಲಿ ಕಲುಷಿತ ನೀರು ಸಂಗ್ರಹವಾಗಿ ವಿವಿಧ ರೋಗಗಳಿಗೆ ಕಾರಣವಾಗುತ್ತಿದೆ. ಅಲ್ಲದೆ ಸದ್ಯ ಸರಬರಾಜು ಮಾಡುವ ಜಲಮೂಲದಲ್ಲಿ ಯಾವುದೇ ಸ್ವಚ್ಛತೆ ಹಾಗೂ ಸುರಕ್ಷತೆ ಇಲ್ಲವಾಗಿದೆ. ಜಾಲಿಗಿಡ ಬೆಳೆದಿರುವುದು ಹಾಗೂ ನೀರು ಸೋರಿಕೆಯಿಂದ ಅಲ್ಲಿನ ಪ್ರದೇಶ ದುರ್ವಾಸನೆಯಿಂದ ಕೂಡಿದೆ. ಸಮೃದ್ಧ ನೀರು ಇರುವ ಕಡೆ ನಿರ್ವಹಣೆ ಇಲ್ಲ. ನಿರ್ವಹಣೆ ಇರುವ ಕಡೆ ನೀರಿನ ಲಭ್ಯತೆ ಇಲ್ಲದೆ ಪರದಾಡುವಂತೆ ಆಗಿದೆ. ‘ಸರಿಯಾದ ಟ್ಯಾಂಕ್ ನಿರ್ಮಿಸಿಲ್ಲ. ಹಳೆ ಟ್ಯಾಂಕಿಗೆ ಪೈಪ್‌ ಜೋಡಣೆ ಸಮೃದ್ಧಿಯ ನೀರಿನ ಮೂಲವನ್ನು ಅರೆಯದೆ ಕೊಳವೆ ಬಾವಿ ಕೊರೆಯಿಸಿದ್ದಾರೆ. ಅಂತರ್ಜಲಮಟ್ಟ ಕುಸಿತದಿಂದ ಕೊಳವೆ ಬಾವಿ ಒಣಗಿವೆ. ಮನೆ ಮನೆಗೆ ಸರಿಯಾದ ಪೈಪ್‌ ಜೊಡಣೆ ಮಾಡಿಲ್ಲ. ಹೀಗೆ ಹಲವು ಸಮಸ್ಯೆಗಳನ್ನು ಜೆಜೆಎಂ ಯೋಜನೆ ಹುಟ್ಟು ಹಾಕಿದೆ' ಎನ್ನುವುದು ಗ್ರಾಮಸ್ಥರ ಆರೋಪ. ಇವೆಲ್ಲದರ ನಡುವೆ ಗ್ರಾಮ ಪಂಚಾಯಿತಿ ಹಾಗೂ ಜೆಜೆಎಂ ಕೆಲಸ ಪೂರ್ಣಗೊಳಿಸಿದ ಗುತ್ತೆದಾರರ ನಡುವೆ ಶಿಥಿಲ ಸಮರ ಶುರುವಾಗಿದೆ. ‘ಗ್ರಾಪಂ ಅಧೀನಕ್ಕೆ ತೆಗೆದುಕೊಳ್ಳುವಂತೆ ಗುತ್ತಿಗೆದಾರರು ದುಂಬಾಲು ಬಿದ್ದಿದ್ದಾರೆ. ಕಳಪೆ ಕಾಮಗಾರಿ ಅಪೂರ್ಣ ಕೆಲಸ ಹೀಗೆ ವಿವಿಧ ನೆಪ ಹೇಳಿ ಇಂತಿಷ್ಟು ಹಣ ನೀಡಿದರೆ ಚಾರ್ಚ್ ತೆಗೆದುಕೊಳ್ಳುವ ಅಲಿಖಿತ ಒಪ್ಪಂದ ಶುರವಾಗಿದೆ. ಆದರೆ ಶುದ್ಧ ನೀರು ಸರಬರಾಜು ಮಾತ್ರ ಮರೀಚಿಕೆಯಾಗಿದೆ’ ಎನ್ನುತ್ತಾರೆ ಶಿರವಾಳ ಗ್ರಾಮದ ಶಿವಪ್ಪ.
ನಮ್ಮೂರಿನ ನೀರಿನ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವೇ ಇಲ್ಲದ ಸಮಸ್ಯೆಯೇನೋ? ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ನಮ್ಮ ಸಮಸ್ಯೆಯನ್ನು ಬಗೆಹರಿಸುವ ಮನಸ್ಸಿಲ್ಲವೇನೊ?
– ಆನಂದ ಇಟ್ಕಾಲ್ ಗಾಜರಕೋಟ ಗ್ರಾಮಸ್ಥ
ಗ್ರಾಮದ ನೀರು ಸರಬರಾಜು ಪೈಪ್‌ಲೈನ್ ಜಾಲವು ಸಂಪೂರ್ಣ ಚರಂಡಿ ಪಕ್ಕದಲ್ಲೇ ಇದೆ. ಚರಂಡಿಗಳೂ ಸ್ವಚ್ಛಗೊಳಿಸಿಲ್ಲ. ವಾಂತಿ ಭೇದಿಗೆ ವರ್ಷಾರಂಭದಲ್ಲಿ ಮೂರು ಪ್ರಾಣಗಳು ಹೋದರೂ ತಿದ್ದಿಕೊಳ್ಳದಿದ್ದರೆ ಹೇಗೆ?
– ಚಂದ್ರು ಅನಪುರ, ಕರವೇ ಗ್ರಾಮ ಘಟಕದ ಅಧ್ಯಕ್ಷ
ಬಗೆಹರಿಯದ ನೀರಿನ ಸಮಸ್ಯೆ
ಹುಣಸಗಿ: ತಾಲ್ಲೂಕು ವ್ಯಾಪ್ತಿಯಲ್ಲಿ 18 ಗ್ರಾಮ ಪಂಚಾಯಿತಿಗಳು 36 ತಾಂಡಾಗಳಿದ್ದು ಇತ್ತಿಚೆಗೆ ತಾಲ್ಲೂಕಿನ ಮಾರನಾಳ ಬೈಲಾಪುರ ತಾಂಡಾದಲ್ಲಿ ಕಲುಷಿತ ನೀರು ಸೇವಿಸಿ 10 ಜನರು ವಾಂತಿ ಭೇದಿಯಿಂದ ಅಸ್ವಸ್ಥರಾಗಿದ್ದರು. ಶುದ್ಧ ಕುಡಿಯುವ ನೀರು ಪೂರೈಸುವ ಸಮಸ್ಯೆ ಈವರೆಗೂ ಬಗೆಹರಿದಿಲ್ಲ. ‘ಮಾರನಾಳ ತಾಂಡಾದಲ್ಲಿ ಮತ್ತೆ ಐದು ಜನರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ನಮ್ಮ ಸಿಬ್ಬಂದಿ ಸೂಕ್ತ ಚಿಕಿತ್ಸೆ ನೀಡಿದ್ದರಿಂದಾಗಿ ಸದ್ಯ ಎಲ್ಲರೂ ಆರೋಗ್ಯದಿಂದ ಇದ್ದಾರೆ. ಗ್ರಾಮದಲ್ಲಿ ಆರೋಗ್ಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ಕೊಡೇಕಲ್ಲ ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಡಾ. ಪವನ್ ರಾವ್ ತಿಳಿಸಿದರು. ‘ತಾಲ್ಲೂಕಿನ ಬೈಲಾಪುರ ತಾಂಡಾದಲ್ಲಿ ಒಂದೇ ಕೊಳವೆ ಬಾವಿಯಿಂದ ನೀರು ಲಭ್ಯವಾಗಿದ್ದು ನೀರಿನ ತೊಂದರೆ ಇದೆ' ಎಂದು ಗ್ರಾಮ ಪಂಚಾಯಿತಿ ಸದಸ್ಯ ತಾರಾನಾಥ್ ಚವಾಣ್ ಹೇಳಿದರು. ‘ಇನ್ನೂ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಜಲಮೂಲಗಳನ್ನು ಸ್ವಚ್ಛಗೊಳಿಸಲಾಗಿದ್ದು ಯಾವುದೇ ತೊಂದರೆ ಇಲ್ಲ’ ಎಂದು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ತಿಳಿಸಿದರು. ‘ಹುಣಸಗಿ ಪಟ್ಟಣಕ್ಕೆ ನೀರು ಸರಬರಾಜು ಆಗುತ್ತಿರುವ ದೇವಾಪುರ ( ಜೆ) ಬಳಿ ಇರುವ ಜಲಮೂಲ ಹಾಗೂ ಟ್ಯಾಂಕ್ ಅನ್ನು ಈಗಾಗಲೇ ಸ್ವಚ್ಛಗೊಳಿಸಲಾಗಿದ್ದು ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ' ಎಂದು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಚಂದ್ರಶೇಖರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT