ಶಹಾಪುರ: ‘ಆರ್ಥಿಕತೆಯ ಬೆಳವಣಿಗೆಯಲ್ಲಿ ಸಹಕಾರ ವಲಯದ ಪಾತ್ರ ಮಹತ್ವ ಹೊಂದಿದೆ. ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಸಹಕಾರ ಸಂಸ್ಥೆಗಳು ದೊಡ್ಡ ಕೊಡುಗೆ ನೀಡುತ್ತಲಿವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು.

ನಗರದ ಎನ್.ಜಿ.ಒ ಕಾಲೊನಿಯ ಗೃಹ ನಿರ್ಮಾಣ ನೌಕರರ ಸಹಕಾರ ಸಂಘದ ಭವನದಲ್ಲಿ ಗುರುವಾರ ನಡೆದ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಬೆಂಗಳೂರ, ಯಾದಗಿರಿ ಜಿಲ್ಲಾ ಸಹಕಾರ ಒಕ್ಕೂಟ (ಯೂನಿಯನ್) ಸಹಕಾರ ಇಲಾಖೆ, ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಸಂಯುಕ್ತ ಆಶ್ರಯದಲ್ಲಿ ತಾಲ್ಲೂಕಿನ ಸಹಕಾರ ಸಂಘಗಳ ನೆರವಿನ ಅಡಿಯಲ್ಲಿ ಹಮ್ಮಿಕೊಂಡ ಅಖಿಲ ಭಾರತ ಸಹಕಾರದ 72ನೇ ಸಪ್ತಾಹ ಕಾರ್ಯಕ್ರಮದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಗ್ರಾಮೀಣ ಭಾಗದ ಆರ್ಥಿಕ ಚಟುವಟಿಕೆಗಳಿಗೆ ಸಹಕಾರ ವಲಯವೇ ಮೂಲ ಆಧಾರವಾಗಿದೆ, ಸಹಕಾರ ಸಂಸ್ಥೆಗಳು ಪಾರದರ್ಶಕವಾಗಿ, ಸುವ್ಯವಸ್ಥಿತ ಕಾನೂನು, ಮತ್ತು ನಿಯಮಗಳ ಪಾಲನೆ ಮೂಲಕ, ಉತ್ತಮ ಆಡಳಿತ ನೀಡಿ ಸಂಘಗಳು ವಿಶ್ವಾಸಾರ್ಹತೆ ಹೆಚ್ಚಿಸಿಕೊಳ್ಳಬೇಕು. ಇತರೆ ಆರ್ಥಿಕ ಸಂಸ್ಥೆಗಳಂತೆಯೇ ಸುಲಭವಾಗಿ ಮತ್ತು ಕೈಗೆಟುಕುವ ಹಣಕಾಸಿನ ಅವಕಾಶಗಳನ್ನು ಒದಗಿಸಬೇಕು. ಗ್ರಾಮೀಣ ಮತ್ತು ಪಟ್ಟಣಗಳ ರೈತರು, ಯುವಜನರು, ಸಹಕಾರಿ ವಲಯದ ಮೂಲಕ ಉತ್ತಮ ಬದುಕು ಕಟ್ಟಿಕೊಳ್ಳಲು ಸಂಘಗಳು ಸಹಕಾರ ನೀಡಬೇಕು’ ಎಂದರು.

ಇದೇ ಸಂದರ್ಭದಲ್ಲಿ ಕಲಬುರಗಿ ಹಾಗೂ ಯಾದಗಿರಿ ಸಹಕಾರ ಸಂಘಗಳ ನೂತನ ನಿರ್ದೇಶಕರಾಗಿ ಆಯ್ಕೆಗೊಂಡಿರುವ ಸುರೇಶ ಸಜ್ಜನ, ಗುರುನಾಥರಡ್ಡಿ ಪಾಟೀಲ ಹಳಿಸಗರ, ವಿಠ್ಠಲ ಯಾದವ, ಸಿದ್ರಾಮರಡ್ಡಿ ಮಾ.ಪಾ.ಕೌಳೂರ, ಬಸವರಾಜಪ್ಪಗೌಡ ಚಿಂಚೋಳಿ, ಬಸವರಾಜ ಹಿರೇಮಠ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ ಪತ್ರಕರ್ತರನ್ನು ಗೌರವಿಸಲಾಯಿತು. ಅಲ್ಲದೇ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಒಕ್ಕೂಟದ ಅಧ್ಯಕ್ಷ ವಿಶ್ವನಾಥರಡ್ಡಿ ದರ್ಶನಾಪುರ ಅವರನ್ನು ಸನ್ಮಾನಿಸಿದರು.

ಸಹಕಾರ ಯೂನಿಯನ್ ಒಕ್ಕೂಟದ ಉಪಾಧ್ಯಕ್ಷ ಎಂ.ನಾರಾಯಣ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಯಪ್ಪಗೌಡ ಹುಡೇದ, ಕೆಂಚಪ್ಪ ನಗನೂರ, ದೇವಿಂದ್ರಪ್ಪ ವಿಶ್ವಕರ್ಮ, ಮಲ್ಲಣ್ಣಗೌಡ ಚಾಮನಾಳ, ಶಾಂತಗೌಡ ಸಾದ್ಯಾಪುರ, ವಿಶ್ವರಾಧ್ಯ ಸತ್ಯಂಪೇಟ, ರಾಯಪ್ಪಗೌಡ ದರ್ಶನಾಪುರ, ವಿಶ್ವನಾಥರೆಡ್ಡಿ, ಎನ್.ಸಿ.ಪಾಟೀಲ್, ಶರಣಬಸವ ಮಾಡ್ಯಾಳ, ಸೀಮಾ ಫಾರೋಜಿ, ಗುರುನಾಥ ಬಾಣತಿಹಾಳ, ರೇಖಾ, ಫಜಿಲುದ್ದಿನ, ಪ್ರಕಾಶ ಅಂಗಡಿ ಕನ್ನಳ್ಳಿ, ಸುಜಾತ ಮಠ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.