ಶಹಾಪುರ ತಾಲ್ಲೂಕಿನ ಗ್ರಾಮವೊಂದರ ಹತ್ತಿ ಜಮೀನಿನಲ್ಲಿ ನಿಂತ ಮಳೆ ನೀರು
ಶಹಾಪುರ ತಾಲ್ಲೂಕಿನ ಹತ್ತಿ ಬೆಳೆಯಲ್ಲಿ ಕಾಣಿಸಿಕೊಂಡ ರಬ್ಬರ ಹುಳು
ಯಾದಗಿರಿ ತಾಲ್ಲೂಕಿನ ಗ್ರಾಮವೊಂದರ ಜಮೀನಿಗೆ ಜಂಟಿ ಕೃಷಿ ನಿರ್ದೇಶಕ ರತೇಂದ್ರನಾಥ ಸೂಗುರ ಭೇಟಿ ನೀಡಿದರು
2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯ ಬಿತ್ತನೆಯಾಗಿದ್ದು ಇದುವರೆಗಿನ ಹಾನಿಯ ಸಮೀಕ್ಷೆಯಲ್ಲಿ ಹತ್ತಿ ಬೆಳೆಯ ಪ್ರಮಾಣವೇ ಅಧಿಕವಾಗಿದ್ದು ಕೆಲ ದಿನಗಳಲ್ಲಿ ನಿಖರ ಮಾಹಿತಿ ಬರಲಿದೆ
ರತೇಂದ್ರನಾಥ ಸೂಗುರ ಜಂಟಿ ಕೃಷಿ ನಿರ್ದೇಶಕ
ಮೊಡ ಕವಿದ ವಾತಾವರಣದಿಂದ ಹತ್ತಿ ಬೆಳೆಗೆ ರಬ್ಬರ ಕೀಟ ಬಾಧೆ ಕಾಣಿಸಿಕೊಂಡಿದೆ. ಕೀಟಗಳ ನಿಯಂತ್ರಣಕ್ಕೆ ಸಮೀಪದ ರೈತ ಸಂಪರ್ಕ ಕೇಂದ್ರಗಳಿಗೆ ತೆರಳಿ ಸಲಹೆ ಪಡೆಯಬೇಕು
ಸುನಿಲಕುಮಾರ ಯರಗೋಳ ಸಹಾಯಕ ಕೃಷಿ ನಿರ್ದೇಶಕ
ಶಹಾಪುರ ತಾಲ್ಲೂಕಿನಲ್ಲಿ ಶೇ 80ರಷ್ಟು ಮಳೆ ಹಾನಿ ಸರ್ವೆ ಮುಗಿದಿದೆ. ಕೆಲ ದಿನಗಳಿಂದ ಹೆಚ್ಚಿನ ಮಳೆಯಾಗಿದ್ದರಿಂದ ಮತ್ತೊಮ್ಮೆ ಸಮೀಕ್ಷೆ ಮಾಡಲಾಗುವುದು
ಸಿದ್ಧರೂಢ ಬನ್ನಿಕೊಪ್ಪ ಶಹಾಪುರ ತಹಶೀಲ್ದಾರ್
ಮಳೆಯಿಂದ ಬೆಳೆ ಹಾನಿಯಾದ ಬಗ್ಗೆ ರೈತರು 91489 24377ಗೆ ಸಂಪರ್ಕಿಸಬಹುದು. ಎಲ್ಲ ರೈತರು ತಪ್ಪದೇ ಬೆಳೆ ವಿಮೆ ಮಾಡಿಸಬೇಕು
ರಾಮನಗೌಡ ಪಾಟೀಲ ಸುರಪುರ ಸಹಾಯಕ ಕೃಷಿ ನಿರ್ದೇಶಕ
ನಾಲ್ಕು ಎಕರೆ ಪ್ರದೇಶದಲ್ಲಿ ಬಿತ್ತನೆಯಾದ ಹತ್ತಿ ಬೆಳೆ ಮಳೆಯಿಂದಾಗಿ ಕಂದು ಬಣ್ಣಕ್ಕೆ ತಿರುಗಿನಾಶವಾಗಿದೆ. ಸಮೀಕ್ಷೆ ಮಾಡಲು ನಮ್ಮ ಜಮೀನಿಗೆ ಯಾರೂ ಬಂದಿಲ್ಲ