ಯಾದಗಿರಿ ತಾಲ್ಲೂಕಿನ ಹತ್ತಿಕುಣಿ ಗ್ರಾಮದಲ್ಲಿ ಬಸ್‌ಗಾಗಿ ಕಾದು ಕುಳಿತ ಶಾಲಾ ಮಕ್ಕಳು
ಶಾಲಾ ವಿದ್ಯಾರ್ಥಿಗಳು ಯಾವ ಸಮಯಕ್ಕೆ ಬಸ್‌ಗಳ ಸೇವೆ ಬೇಕು ಎಂಬುದನ್ನು ಮನವಿ ಪತ್ರ ನೀಡಿದರೆ ಶಾಲೆಗೆ ಡಿಟಿಒ ಕಳುಹಿಸಿ ವ್ಯವಸ್ಥೆ ಮಾಡಲಾಗುವುದು
ಜಿ.ಬಿ.ಮಂಜುನಾಥ ಕೆಕೆಆರ್‌ಟಿಸಿ ಯಾದಗಿರಿ ವಿಭಾಗದ ನಿಯಂತ್ರಣಾಧಿಕಾರಿ
ಕೆಕೆಆರ್‌ಟಿಸಿ ಅಧಿಕಾರಿಗಳು ರಸ್ತೆ ಸರಿಯಿಲ್ಲ ಸಾಕಷ್ಟು ತಿರುವುಗಳಿವೆ ಡೀಸೆಲ್ ಖರ್ಚು ಭರಿಸಿದಷ್ಟು ಟಿಕೆಟ್ ದುಡ್ಡು ಕಲೆಕ್ಟ್ ಆಗುತ್ತಿಲ್ಲ ಎಂದು ನೆಪ ಹೇಳಿ ಹಿಂದೇಟು ಹಾಕುತ್ತಿದ್ದಾರೆ
ಮಹಿಪಾಲರೆಡ್ಡಿ ಪೊಲೀಸ್ ಪಾಟೀಲ ಕಟಗಿ ಶಹಾಪುರ ನಿವಾಸಿ
ವಿಶೇಷ ತರಗತಿಗಳಿಂದ ವಂಚಿತ
ಫಲಿತಾಂಶ ಸುಧಾರಣೆಗಾಗಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಸಂಜೆ ಹೆಚ್ಚುವರಿ ವಿಶೇಷ ತರಗತಿಗಳು ನಡೆಸಲಾಗುತ್ತಿದೆ. ಬಸ್ ಸಂಪರ್ಕವಿಲ್ಲದ 5.30ರ ಬಳಿಕ ಬಸ್ ಬಾರದ ಗ್ರಾಮಗಳ ವಿದ್ಯಾರ್ಥಿಗಳು ವಿಶೇಷ ತರಗತಿಗಳಿಂದ ವಂಚಿತರಾಗುತ್ತಿದ್ದಾರೆ. ‘ವಿಶೇಷ ತರಗತಿಗಳಿಂದ ವಿನಾಯಿತಿ ನೀಡಿ ಸಂಜೆ 4.30ಕ್ಕೆ ಶಾಲೆಯಿಂದ ಮನೆಗೆ ಹೊರಡಲು ಅನುಮತಿಸಬೇಕು. ನಮ್ಮ ಊರುಗಳು ಬೆಟ್ಟ ಗುಡ್ಡಗಳ ನಡುವೆ ಇವೆ. ಸಂಜೆ ನಡೆದುಕೊಂಡು ಹೋಗಲು ಭಯವಾಗುತ್ತದೆ. ಚಿರತೆಯಂತಹ ಪ್ರಾಣಿಗಳು ಸಹ ಇವೆ ಎಂದು ಸೌದಗಾರ ತಾಂಡಾ ಬಾಚವಾರ ತಾಂಡಾ ಬಾಚವಾರ ಗ್ರಾಮ ಸೇರಿ ಇತರೆ ಗ್ರಾಮಗಳ 30ಕ್ಕೂ ಅಧಿಕ ವಿದ್ಯಾರ್ಥಿಗಳು ಮನವಿ ಪತ್ರ ಬರೆದಿದ್ದಾರೆ’ ಎಂದು ಶಾಲೆಯ ಮುಖ್ಯಶಿಕ್ಷಕ ಬಸಣ್ಣ ಸೋಮಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.