ಯಾದಗಿರಿ: ಜಿಲ್ಲೆಯ ಕೃಷ್ಣಾ ಮತ್ತು ಭೀಮಾ ಎರಡು ನದಿಗಳಿಗೆ ಒಳಹರಿವು ಹೆಚ್ಚಿದೆ. ಎರಡು ನದಿಗಳ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿದ್ದು, ಇದರಿಂದ ಒಳಹರಿವು ಹೆಚ್ಚಿದೆ.

ಕೃಷ್ಣಾ ನದಿಗೆ ನೀರಾವರಿಗಾಗಿ ಆಲಮಟ್ಟಿ ಅಣೆಕಟ್ಟಿನಿಂದ 18ಸಾವಿರ ಕ್ಯೂಸೆಕ್, 1,503 ಕ್ಯೂಸೆಕ್ ಜಲಾನಯನ ಮಳೆಯಿಂದ ಹುಣಸಗಿ ತಾಲ್ಲೂಕಿನ ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ಬರುತ್ತಿದೆ. ಇದರಿಂದ 9,503 ಕ್ಯೂಸೆಕ್ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ.
490.91 ಮೀಟರ್ ನೀರು ಸಂಗ್ರಹ ಇಟ್ಟುಕೊಂಡು ನೀರನ್ನು ಕಾಲುವೆಗಳಿಗೆ ಹರಿಸಲಾಗುತ್ತಿದೆ.

ಜಲಾನಯನ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ವ್ಯಾಪಕ ಮಳೆಯಿಂದಾಗಿ ಭೀಮಾ ನದಿ ಮೈದುಂಬಿ ಹರಿಯುತ್ತಿದೆ. ಯಾದಗಿರಿ–ಗುರುಸಣಿಗಿ ಬಳಿಯ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ರಿಜ್ ಕಂ ಬ್ಯಾರೇಜ್ ಸಂಪೂರ್ಣ ಭರ್ತಿಯಾಗಿದೆ.

ಇನ್ನೂ ಭೀಮಾ ನದಿ ವ್ಯಾಪ್ತಿಯಲ್ಲಿ ಮೂರು ಬ್ರಿಜ್ ಕಂ ಬ್ಯಾರೇಜ್‌ಗಳಿದ್ದು, ಸನ್ನತಿ ಬ್ಯಾರೇಜ್‌ನಿಂದ ಭೀಮಾ ನದಿಗೆ 15,000 ಕ್ಯೂಸೆಕ್ ನೀರು ಹರಿಸಲಾಗುತ್ತಿದ್ದು, ಯಾದಗಿರಿ–ಗುರುಸಣಗಿ, ಜೋಳದಡಗಿ–ಗೌಡೂರು ಬ್ಯಾರೇಜ್‌ನಿಂದ 12,000 ಕ್ಯೂಸೆಕ್ ನೀರು ಹೊರ ಹರಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.