ವಡಗೇರಾ (ಯಾದಗಿರಿ ಜಿಲ್ಲೆ): ಜಮೀನು ದಾರಿ ವಿಚಾರವಾಗಿ ಎಸ್ಸಿ ಸಮುದಾಯದವರು ಅಟ್ರಾಸಿಟಿ ಕೇಸ್ ಮಾಡುತ್ತೇವೆ ಎಂದು ಜೀವ ಬೆದರಿಕೆ ಹಾಕಿದ್ದರಿಂದ ಪಟ್ಟಣದ ಯುವಕ ಭಯಗೊಂಡು ಬೇವಿನ ಗಿಡಕ್ಕೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ವಿಷಯ ತಿಳಿದ ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಕೋನಹಳ್ಳಿ ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿರುವ ಬೇವಿನ ಗಿಡಕ್ಕೆ ಮಹೆಬೂಬ್ (21) ನೇಣು ಬಿಗಿದುಕೊಂಡು ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮಗನ ಸಾವಿನ ಸುದ್ದಿ ಕೇಳಿ ತಂದೆ ಸೈಯದ್ಗೆ(50)ಹೃದಯಾಘಾತವಾಗಿದೆ.

ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯಲ್ಲಿ ಕರೆದೊಯ್ದಾಗ ಗುರುವಾರ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ.

ಘಟನೆ ವಿವರ:

ಕೆಲವು ದಿನಗಳ ಹಿಂದೆ ಜಮೀನಿಗೆ ತೆರಳುವ ರಸ್ತೆಗಾಗಿ ಎಸ್ಸಿ ಹಾಗೂ ಮುಸ್ಲಿಂ ಸಮುದಾಯದ ನಡುವೆ ಜಗಳವಾಗಿತ್ತು. ಯುವಕನ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸುತ್ತೇವೆ ಎಂದು ಎಸ್ಸಿ ಸಮುದಾಯದವರು ಹೇಳಿದ್ದಾರೆ. ಇದಕ್ಕೆ ಯುವಕ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಸಂಬಂಧ 8 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಇದರಲ್ಲಿ ಈಶಪ್ಪ ನಾಯ್ಕಲ್ ಎಂಬುವರನ್ನು ಬಂಧಿಸಲಾಗಿದೆ ಎಂದು ವಡಗೇರಾ ಠಾಣೆಯ ಪಿಎಸ್ಐ ಮಹೆಬೂಬ್ ಅಲಿ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.