ಶಹಾಪುರ: ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಫೆ.4 ರಿಂದ 6ರವರೆಗೆ ನಡೆಯಲಿರುವ 77ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳದಲ್ಲಿ ತಾಲ್ಲೂಕಿನ ನಾಲ್ವರು ವಿವಿಧ ಕ್ಷೇತ್ರದಲ್ಲಿ ತಮ್ಮದೆ ಆದ ಛಾಪು ಮೂಡಿಸಿದ್ದಾರೆ.

ತಾಲ್ಲೂಕಿನ ಡಾ.ರಂಗರಾಜ ವನ ದುರ್ಗ, ಡಾ.ಎಸ್.ಕೆ.ಅರುಣಿ, ಪತ್ರಕರ್ತ ದೇವು ಪತ್ತಾರ ಹಾಗೂ ಸಾಹಿತಿ ಸಿದ್ದರಾಮ ಹೊನ್ಕಲ್ ಅವರು ವಿವಿಧ ಗೋಷ್ಠಿಯಲ್ಲಿ ಅಧ್ಯಯನ ವಿಚಾರ ಮಂಡಿಸಲಿದ್ದಾರೆ ಎಂಬುವುದು ಜನತೆಗೆ ಹೆಮ್ಮೆ ಮೂಡಿಸಿದೆ.

ತಾಲ್ಲೂಕಿನ ವನದುರ್ಗ ಗ್ರಾಮದ ಡಾ.ರಂಗರಾಜ ಅವರು ಪ್ರಸ್ತುತವಾಗಿ ಬಳ್ಳಾರಿಯ ಕೃಷ್ಣದೇವರಾಯ ವಿಶ್ವ ವಿದ್ಯಾಲಯದಲ್ಲಿ ಕುಲಸಚಿವರಾಗಿ ಕರ್ತವ್ಯ ನಿರ್ವಹಿಸುತ್ತಲಿದ್ದಾರೆ. ಸುರ ಪುರ ಸಂಸ್ಥಾನದ ಕುರಿತು ಅಧ್ಯಯನ ಮಾಡಿ ಪ್ರಬಂಧ ಮಂಡಿಸಿ ಗಮನ ಸೆಳೆದ ವನದುರ್ಗ ಅವರು ಇಂದು ನಾಡಿನ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಕೃಷಿ ಮಾಡಿದ ಹೆಗ್ಗಳಿಕೆ ಅವ ರದು. ಫೆ. 4ರಂದು ನಡೆಯಲಿರುವ 77ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ‘ಕನ್ನಡ ಸಮುದಾ ಯದ ಆತಂಕಗಳು’ ಎಂಬ ಗೋಷ್ಠಿ ಯಲ್ಲಿ ಸಮುದಾಯಗಳು ಮತ್ತು ಕನ್ನಡ ಕುರಿತು ವಿಚಾರ ಮಂಡಿಸ ಲಿದ್ದಾರೆ.

ಪಟ್ಟಣದ ನಿವಾಸಿಯಾಗಿರುವ ಡಾ.ಶಿವಶರಣ ಕೆ.ಅರುಣಿಯವರು ಸದ್ಯ ಬೆಂಗಳೂರಿನ ಐಸಿಎಚ್‌ಆರ್ ಕೇಂದ್ರದಲ್ಲಿ ಉಪ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸುರಪುರ ಸಂಸ್ಥಾನದ ಇತಿಹಾಸ ಹಾಗೂ ಸಂಸ್ಕೃತಿ ಕುರಿತು ಆಳವಾಗಿ ಅಧ್ಯಯನ ಮಾಡಿ ಡಾಕ್ಟರೇಟ್ ಪದವಿ ಪಡೆದು ಕೊಂಡಿದ್ದಾರೆ. ಬಹುಮನಿ ಹಾಗೂ ಆದಿಲ್‌ಶಾಹಿ ಸುಲ್ತಾನರು, ವಿಜಯ ನಗರ ಮತ್ತು ಯಲಹಂಕ ನಾಡಪ್ರಭು ಗಳ ಚರಿತ್ರೆ ಅಲ್ಲದೆ ಬೆಂಗಳೂರಿನ ಸ್ಮಾರಕಗಳ ಬಗ್ಗೆ ವಿಶೇಷ ಸಂಶೋಧನ ಅಧ್ಯಯನ ಮಾಡಿ ಇತಿಹಾಸ ಕ್ಷೇತ್ರದಲ್ಲಿ ತಮ್ಮದೆ ಆದ ಹೆಜ್ಜೆಗುರುತುಗಳನ್ನು ಮೂಡಿಸಿದ್ದಾರೆ .ಫೆ.5ರಂದು ‘ಬೆಂಗಳೂರು’ ಗೋಷ್ಠಿಯಲ್ಲಿ ‘ಐತಿ ಹಾಸಿಕ ನೋಟ’ ಕುರಿತು ಉಪನ್ಯಾಸ ನೀಡಲಿದ್ದಾರೆ. ಪಟ್ಟಣದ ಗುತ್ತಿಪೇಟ ನಿವಾಸಿಯಾಗಿರುವ ದೇವು ಪತ್ತಾರ ದಶಕದಿಂದ ‘ಪ್ರಜಾವಾಣಿ’ಯಲ್ಲಿ ಹಿರಿಯ ವರದಿಗಾರನಾಗಿ ಸೇವೆ ಸಲ್ಲಿಸು ತ್ತಿದ್ದಾರೆ. ಸದ್ಯ ಬೀದರನಲ್ಲಿ ‘ಪ್ರಜಾ ವಾಣಿ’ಯ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪತ್ತಾರ ಸಾಹಿತ್ಯದ ಚಿಂತಕ ಹಾಗೂ ಅತ್ಯುತ್ತಮ ವಿಮರ್ಶಕರಾ ಗಿದ್ದಾರೆ. ನಾಡಿನ ಇತಿಹಾಸ, ಸಾಹಿತ್ಯ ಸಂಗೀತ, ಸಾಂಸ್ಕೃತಿ ವಿಷಯಗಳ ಬಗ್ಗೆ ನೂರಾರು ಲೇಖನಗಳನ್ನು ಬರೆ ದಿದ್ದಾರೆ.

ಫೆ.4ರಂದು ಸಮ್ಮೇಳನದಲ್ಲಿ ‘ಕನ್ನಡ ಸಾಹಿತ್ಯದ ಇತ್ತೀಚಿನ ಒಲವುಗಳು’ ಎಂಬ ಗೋಷ್ಠಿಯಲ್ಲಿ ‘ಕಾವ್ಯವನ್ನು ಕುರಿತು’ ವಿಷಯ ಮಂಡಿಸಲಿದ್ದಾರೆ.ತಾಲ್ಲೂಕಿನ ಸಗರ ಗ್ರಾಮದ ನಿವಾಸಿ ಸದ್ಯ ಶಹಾಪುರ ಪಟ್ಟಣದ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಿದ್ದರಾಮ ಹೊನ್ಕಲ್ ಅವರದು ವಿಶಿಷ್ಟ ಶೈಲಿಯ ‘ಪ್ರವಾಸ ಕಥನ’ದಿಂದ ನಾಡಿನ ಗಮನ ಸೆಳೆದ ಸಾಹಿತಿ ಯಾಗಿದ್ದಾರೆ. ವಿವಿಧ ಪ್ರವಾಸ ಸಾಹಿತ್ಯ ಕೃತಿಗಳು ವಿಶ್ವವಿದ್ಯಾಲಯದ ಸ್ನಾತಕ ಪದವಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಗಳಾಗಿ ಅಯ್ಕೆಗೊಂಡಿರುವುದು ಮೆಚ್ಚುಗೆಯ ಸಂಗತಿ. ಫೆ. 5ರಂದು ನಡೆಲಿರುವ ಸಮ್ಮೇಳನದ ಕವಿಗೋಷ್ಠಿ ಯಲ್ಲಿ ತಮ್ಮ ಸ್ವರಚಿತ ಕವನ ವಾಚನ ಮಾಡಲಿದ್ದಾರೆ. ಹೀಗೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ನಾಲ್ವರು ಸಮ್ಮೇಳನ ದಲ್ಲಿ ಭಾಗವಹಿಸುತ್ತಿರು ವುದು ತಾಲ್ಲೂಕಿನ ಜನತೆಗೆ ಅಪಾರ ಸಂತಸ ಉಂಟು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.