ಚಿತ್ರದುರ್ಗ:ನಗರ ಮತ್ತು ಜಿಲ್ಲೆಯ ವಿವಿಧೆಡೆ ಶನಿವಾರ ಸಂಜೆ ಗುಡುಗು ಸಿಡಿಲಿನಿಂದ ಕೂಡಿದ ಮಳೆಯಾಗಿದೆ. ಸಿಡಿಲು ಬಡಿದು ನಾಯಕನಹಟ್ಟಿ ಸಮೀಪದ ಗ್ಯಾಗನಾರಹಟ್ಟಿ ಬಳಿ ಎರಡು ಎತ್ತುಗಳು ಮೃತಪಟ್ಟಿವೆ.
ತಾ.ಪಂ. ಮಾಜಿ ಸದಸ್ಯ ಎಸ್. ಓಬಯ್ಯ ಈ ಎತ್ತುಗಳನ್ನು ಕಳೆದ ತಿಂಗಳಷ್ಟೇ ಖರೀದಿಸಿದ್ದರು.

ಹೊಳಲ್ಕೆರೆ ತಾಲ್ಲೂಕಿನ ಎನ್.ಜಿ.ಹಳ್ಳಿ, ಸಾಂತೇನಹಳ್ಳಿ ಮತ್ತಿತರ ಸ್ಥಳಗಳಲ್ಲಿ ಮಳೆಯಾಗಿದೆ. ಗಾಳಿಗೆ ಆವಿನಹಟ್ಟಿ ಸಮೀಪ ಮೂರು ವಿದ್ಯುತ್ ಕಂಬಗಳು ಬಿದ್ದಿವೆ.ದಾವಣಗೆರೆ ವರದಿ: ಜಿಲ್ಲೆಯಲ್ಲಿ ಶುಕ್ರವಾರ ಬೀಸಿದ ಗಾಳಿ-ಮಳೆಯಿಂದಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆ ನಷ್ಟವಾಗಿದೆ.

ಕಂದಾಯ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಶನಿವಾರ ನಡೆಸಿದ ಸಮೀಕ್ಷೆ ಪ್ರಕಾರ ದಾವಣಗೆರೆ ತಾಲ್ಲೂಕಿನ ಆನಗೋಡು ಹೋಬಳಿಯ ಹೆಮ್ಮನಬೇತೂರು, ದ್ಯಾಮವ್ವನಹಳ್ಳಿ, ಚಿಕ್ಕವ್ವನಾಗ್ತಿಹಳ್ಳಿ ಗ್ರಾಮಗಳಲ್ಲಿ ಬಾಳೆ ನೆಲಕಚ್ಚಿದ್ದು ರೂ 90 ಲಕ್ಷದಷ್ಟು ನಷ್ಟ ಉಂಟಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.