ಶಿವಮೊಗ್ಗ: ಇಲ್ಲಿನ ತ್ಯಾವರೆಕೊಪ್ಪ ಹುಲಿ-ಸಿಂಹಧಾಮಕ್ಕೆ ಜೋಡಿ ಸಿಂಹ ಜತೆಗೊಂದು ಮರಿ ಸಿಂಹ ಕೂಡ ಬುಧವಾರ ಆಗಮಿಸಿವೆ.ಪ್ರಾಣಿಗಳ ವಿನಿಮಯದಡಿ ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಮೃಗಾಲಯದಿಂದ ಆಫ್ರೋ-ಏಷಿಯನ್ ತಳಿಯ ಒಂದು ಗಂಡು, ಒಂದು ಹೆಣ್ಣು ಜತೆಗೊಂದು ಹೆಣ್ಣು ಮರಿ ತರಲಾಗಿದೆ. 17ವರ್ಷದ ಹೆಣ್ಣು ಸಿಂಹ ಮಾನಿನಿ, 5 ವರ್ಷದ ಆರ್ಯ ಹಾಗೂ ಮಾನಿನಿಯ 45 ದಿವಸದ ಇನ್ನೂ ಹೆಸರಿಡದ ಹೆಣ್ಣು ಮರಿ ಮಂಗಳವಾರ ತಡರಾತ್ರಿ ಶಿವಮೊಗ್ಗಕ್ಕೆ ಆಗಮಿಸಿವೆ.

‘ಮೂರೂ ಆರೋಗ್ಯವಾಗಿವೆ. ಇವುಗಳನ್ನು ಪ್ರತ್ಯೇಕ ಬೋನಿನಲ್ಲಿ ಇಡಲಾಗಿದೆ. ಆರು ವಾರಗಳ ಕಾಲ ಇವುಗಳ ನಡೆಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತದೆ. ಇಲ್ಲಿನ ಪರಿಸರಕ್ಕೆ ಹೊಂದಿಕೊಳ್ಳುವ ದೃಷ್ಟಿಯಿಂದ ಸದ್ಯಕ್ಕೆ ಸಾರ್ವಜನಿಕ ದರ್ಶನಕ್ಕೆ ಅವು ಲಭ್ಯವಿಲ್ಲ. ಮರಿಗೆ 3 ತಿಂಗಳ ನಂತರ ಹೆಸರಿಡಲಾಗುವುದು’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಟಿ.ಜೆ. ರವಿಕುಮಾರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.