ಶಿವಮೊಗ್ಗ: ತಂತ್ರಜ್ಞಾನದ ಮೂಲಕ ಇಡೀ ವಿಶ್ವವನ್ನೇ ಕೈಬೆರಳುಗಳಲ್ಲಿ ಹಿಡಿದಿಡುವಂತಹ ಪ್ರಯತ್ನ ಯಶಸ್ವಿಯಾಗಿದೆ. ಆದರೆ, ಅದರ ಜೊತೆಯಲ್ಲಿಯೇ ಮಾಹಿತಿ ತಂತ್ರಜ್ಞಾನದ ದುರ್ಬಳಕೆಯೂ ಹೆಚ್ಚಿರುವುದು ವಿಷಾದನೀಯ ಎಂದು ಬೆಂಗಳೂರಿನ ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜು ಪ್ರಾಧ್ಯಾಪಕ ಡಾ.ಕೆ.ಎನ್. ಹರಿಭಟ್ ಹೇಳಿದರು.

ನಗರದ ಜವಾಹರಲಾಲ್ ನೆಹರೂ ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯದ ಎಂಬಿಎ ಸಭಾಂಗಣದಲ್ಲಿ ಎಲೆಕ್ಟ್ರಾನಿಕ್ ಮತ್ತು ಕಮ್ಯೂನಿಕೇಷನ್ ಹಾಗೂ ಟೆಲಿ ಕಮ್ಯೂನಿಕೇಷನ್ ವಿಭಾಗ ಸಂಯುಕ್ತವಾಗಿ ಎಂಜಿನಿಯರಿಂಗ್ ಕಾಲೇಜು ಅಧ್ಯಾಪಕರಿಗಾಗಿ ಬುಧವಾರ ಹಮ್ಮಿಕೊಂಡಿದ್ದ `ಸುಭದ್ರ ಸಂವಹನ ಮತ್ತು ಚಿತ್ರ ಪರಿಷ್ಕರಣೆ~ ವಿಷಯ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಮಾಹಿತಿ ತಂತ್ರಜ್ಞಾನದಿಂದಾಗಿ ಪ್ರತಿಯೊಂದು ಕ್ಷೇತ್ರದ ಮಾಹಿತಿ ಕ್ಷಣಾರ್ಧದಲ್ಲಿಯೇ ಸಿಗುತ್ತಿದ್ದು, ಅಂತಹ ಮಾಹಿತಿ ಎಷ್ಟರಮಟ್ಟಿಗೆ ಮಹತ್ವ ಹಾಗೂ ಸತ್ಯಾಸತ್ಯತೆಯಿಂದ ಕೂಡಿದೆ ಎಂಬುದರ ಕಡೆಗೂ ಗಮನ ಹರಿಸಬೇಕು. ಇಲ್ಲದಿದ್ದರೆ ತಪ್ಪು ಮಾಹಿತಿ ನೀಡಿಕೆಯಿಂದ ಸಮಾಜದ ಸ್ವಾಸ್ಥ್ಯ ಹಾಳಾಗಬಹುದು ಎಂದರು.

ಈ ನಿಟ್ಟಿನಲ್ಲಿ ಎಂಜಿನಿಯರಿಂಗ್ ಕಾಲೇಜು ಉಪನ್ಯಾಸಕರಿಗೆ ಹಮ್ಮಿಕೊಂಡಿರುವ ಕಾರ್ಯಾಗಾರ ಉಪನ್ಯಾಸಕರಿಗೆ ಹೆಚ್ಚು ಉಪಯುಕ್ತವಾಗಲಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ.ಆರ್. ಶ್ರೀನಿವಾಸ್ರಾವ್ ಕುಂಠೆ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ಡಾ.ಎಸ್.ವಿ. ಸತ್ಯನಾರಾಯಣ, ಪ್ರೊ.ಎಚ್.ಕೆ. ಹರೀಶ್, ಡಾ.ಗಣೇಶ್ ಐತಾಳ್ ಮತ್ತಿತರರು ಉಪಸ್ಥಿತರಿದ್ದರು. ಎಸ್.ಆರ್. ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು. ಎಸ್. ಅಮರಪ್ಪ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.