ಶೃಂಗೇರಿ: ತಾಲ್ಲೂಕಿನ ಮೆಣಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಸಿಗೆ ಗ್ರಾಮದ ಹಂಚಿನಮನೆ ರೈತರೊಬ್ಬರ ಜಮೀನಿನ ಮೇಲೆ ಖಾಸಗಿ ಅಡಿಕೆ ಮಂಡಿಯೊಂದು ಹರಾಜು ಪ್ರಕ್ರಿಯೆ ನಡೆಸುವುದನ್ನು ವಿರೋಧಿಸಿ ರೈತ ಸಂಘ, ಹಸಿರು ಸೇನೆ ಹಾಗೂ ವಿವಿಧ ಪಕ್ಷಗಳ ಮುಖಂಡರು ಶನಿವಾರ ಪ್ರತಿಭಟನೆ ನಡೆಸಿದರು.

ಶಿವಮೊಗ್ಗದ ಭೂಪಳಂ ಆರ್.ನಂಜುಂಡಯ್ಯ ಅಡಿಕೆ ಮಂಡಿಯಿಂದ ಹಂಚಿನಮನೆ ರೈತ ಕೆ.ಆರ್.ಪ್ರಕಾಶ್ 1995ರಲ್ಲಿ ಸಾಲ ಪಡೆದಿದ್ದರು. ಸಾಲ ಬಾಕಿಯಾಗಿದ್ದಕ್ಕೆ ಮಂಡಿ ಮಾಲೀಕರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ನ್ಯಾಯಾಲಯ ಹರಾಜಿಗೆ ಆದೇಶಿಸಿದ್ದು, ಗ್ರಾ.ಪಂ ಫಲಕದಲ್ಲಿ ಪ್ರಕಟಣೆ ಹಾಕಲಾಗಿತ್ತು.

ಅಡಿಕೆ ಹಳದಿ ಎಲೆರೋಗ ಸಂತ್ರಸ್ತ ಸಮಿತಿ ಅಧ್ಯಕ್ಷ ಮಾರನಕೊಡಿಗೆ ನಟರಾಜ,
ರೈತ ಸಂಘ ತಾಲ್ಲೂಕು ಘಟಕ ಅಧ್ಯಕ್ಷ ಶ್ರೀಧರರಾವ್, ರೈತ ಸಂಘ ಕ್ಷೇತ್ರ ಸಂಚಾಲಕ ಮಾಗಲು ಅಚ್ಯುತ, ಗೋಪಾಲ ನಾಯ್ಕ, ಚಂದ್ರಶೇಖರ್, ಕರುವಾನೆ ನವೀನ, ರಾಜೇಂದ್ರ, ಸತೀಶ್, ಜೆಡಿಎಸ್ನ ಮಂಜುನಾಥ್, ರಮೇಶ್, ಕಾಂಗ್ರೆಸ್ನ ವೆಂಕಟೇಶ್, ಉದಯ್ ಕುಮಾರ್, ರಾಜಶೇಖರ್, ಶಿವಮೂರ್ತಿ, ರಾಜನ್, ಬಿಜೆಪಿಯ ಮೇಗಳಬೈಲ್ ಶಿವಸ್ವಾಮಿ, ಶಿವಶಂಕರ್, ಮೆ.ನಾ.ರಮೇಶ್ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.