ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ವಾಯುಪಡೆ; ‘ಅಗ್ನಿವೀರ’ರಿಗೆ ಅರ್ಜಿ ಆಹ್ವಾನ

Published 2 ಆಗಸ್ಟ್ 2023, 23:30 IST
Last Updated 2 ಆಗಸ್ಟ್ 2023, 23:30 IST
ಅಕ್ಷರ ಗಾತ್ರ

ಪ್ರಸಕ್ತ ಸಾಲಿನಲ್ಲಿ 4,165 ‘ಅಗ್ನಿವೀರ್‌ ವಾಯು’ ಹುದ್ದೆಗಳಿಗೆ ನೇಮಕಾತಿ ಆರಂಭವಾಗಿದೆ. ಮಹಿಳೆಯರಿಗೆ 833 ಹುದ್ದೆಗಳು ರಾಜ್ಯವಾರು ಮೀಸಲಿಡಲಾಗಿದೆ.

(SSR 02/23 ನವೆಂಬರ್ ಹಾಗೂ 01/24 ಎಪ್ರಿಲ್ 24ರ ಬ್ಯಾಚ್‌ಗಳಿಗೆ)

ಗಮನಿಸಿ: ಈ ಆಯ್ಕೆ ಪರೀಕ್ಷೆಯು ಐಎಎಫ್‌ನ ‘ಅಗ್ನಿವೀರ್‌ ವಾಯು’ ಹುದ್ದೆಗೆ ಮಾತ್ರ. ಇದು ಅರ್ಹ ‌ಭಾರತೀಯ ಅವಿವಾಹಿತ ಪುರುಷ/ಮಹಿಳಾ ಅಭ್ಯರ್ಥಿಗಳಿಗೆ ಮಾತ್ರ.

‘ಅಗ್ನಿವೀರ್ ವಾಯು’ ನೇಮಕಾತಿಗಾಗಿ ಮೂರು ಹಂತಗಳಲ್ಲಿ ಪರೀಕ್ಷೆ ನಡೆಯಲಿದೆ. ಇವುಗಳನ್ನು ‘ಸ್ಟಾರ್’ ಪರೀಕ್ಷೆಗಳೆಂದು ಗುರುತಿಸಲಾಗಿದೆ.

ವಯೋಮಿತಿ: ಕನಿಷ್ಠ 17 1/2 ವರ್ಷ, ಗರಿಷ್ಠ 21 ವರ್ಷಗಳು. ಅಭ್ಯರ್ಥಿಯು ಆಯ್ಕೆ ಪ್ರಕ್ರಿಯೆಯ ಎಲ್ಲಾ ಹಂತಗಳನ್ನು ಪೂರ್ಣಗೊಳಿಸಿ, ದಾಖಲಾತಿಯ ದಿನದಂದು ಗರಿಷ್ಠ ವಯಸ್ಸಿನ ಮಿತಿ 21 ವರ್ಷಗಳಾಗಿರಬೇಕು.

ದೈಹಿಕ ಅರ್ಹತೆ: ಪುರುಷ ಅಭ್ಯರ್ಥಿಗಳು ಕನಿಷ್ಠ 152.5 ಸೆಂ.ಮೀ. ಎತ್ತರವಿರಬೇಕು. ಮಹಿಳಾ ಅಭ್ಯರ್ಥಿಗಳು 152 ಸೆಂ.ಮೀ ಎತ್ತರವಿರಬೇಕು. ಎತ್ತರಕ್ಕೆ ತಕ್ಕ ತೂಕ ಹೊಂದಿರಬೇಕು. ಅತ್ಯುತ್ತಮ ದೈಹಿಕ ಆರೋಗ್ಯ ಹೊಂದಿರಬೇಕು.

ಶೈಕ್ಷಣಿಕ ಅರ್ಹತೆ

ಪಿಯುಸಿ ಅಥವಾ 10+2 ನಲ್ಲಿ ಗಣಿತ, ಭೌತಶಾಸ್ತ್ರ ಮತ್ತು ಇಂಗ್ಲಿಷ್‌ನಲ್ಲಿ ಸರಾಸರಿ ಶೇ 50 ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು. ಇಂಗ್ಲಿಷ್‌ ವಿಷಯದಲ್ಲಿ ಶೇ 50ರಷ್ಟು ಅಂಕಗಳನ್ನು ಪಡೆದಿರಬೇಕು.

ವಿಜ್ಞಾನ ವಿಷಯಗಳನ್ನು ಹೊರತುಪಡಿಸಿ ಸಿ.ಬಿ.ಎಸ್.ಸಿ ಅಥವಾ ಸ್ಟೇಟ್ ಬೋರ್ಡ್ ನಿಂದ ಮಾನ್ಯತೆ ಪಡೆದ ಸಂಸ್ಥೆಗಳಿಂದ ಆರ್ಟ್ಸ್‌ ಮತ್ತು ಕಾಮರ್ಸ್‌ ವಿಭಾಗದಲ್ಲಿ ಶೇ 50ರಷ್ಟು ಅಂಕಗಳೊಂದಿಗೆ ಪಿಯುಸಿ/10+2 ತೇರ್ಗಡೆ ಹೊಂದಿರಬೇಕು. ಮತ್ತು ಇಂಗ್ಲಿಷ್‌ ವಿಷಯದಲ್ಲಿ ಶೇ 50ರಷ್ಟು ಅಂಕಗಳನ್ನು ಪಡೆದಿರಬೇಕು.

ಅಥವಾ

ಸರ್ಕಾರದಿಂದ ಮಾನ್ಯತೆ ಪಡೆದ ಮೂರು ವರ್ಷಗಳ ಡಿಪ್ಲೊಮಾ/ಪಾಲಿಟೆಕ್ನಿಕ್‌ ಎಂಜಿನಿಯರಿಂಗ್ (ಮೆಕ್ಯಾನಿಕಲ್ / ಎಲೆಕ್ಟ್ರಿಕಲ್ / ಎಲೆಕ್ಟ್ರಾನಿಕ್ಸ್ / ಆಟೋಮೊಬೈಲ್ / ಕಂಪ್ಯೂಟರ್ ಸೈನ್ಸ್ / ಇನ್‌ಸ್ಟ್ರುಮೆಂಟೇಶನ್ ಟೆಕ್ನಾಲಜಿ / ಮಾಹಿತಿ ತಂತ್ರಜ್ಞಾನ) ನಲ್ಲಿ ಸರಾಸರಿ ಶೇ 50 ಅಂಕಗಳು ಮತ್ತು ಇಂಗ್ಲಿಷ್‌ನಲ್ಲಿ ಕನಿಷ್ಠ ಶೇ 50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. (ಡಿಪ್ಲೊಮಾ ಕೋರ್ಸ್‌ನಲ್ಲಿ ಇಂಗ್ಲಿಷ್ ವಿಷಯವಿಲ್ಲದಿದ್ದರೆ, ಅಭ್ಯರ್ಥಿಗಳು ಪಿಯುಸಿ/10+2/ ತತ್ಸಮಾನ ಪರೀಕ್ಷೆಯಲ್ಲಿ ಇಂಗ್ಲಿಷ್‌ನಲ್ಲಿ ಕನಿಷ್ಠ ಶೇ 50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು).

ಗಮನಿಸಿ: ವಿಜ್ಞಾನ ವಿಷಯಗಳ ಪರೀಕ್ಷೆಗೆ ಅರ್ಹರಾಗಿರುವ ಅಭ್ಯರ್ಥಿಗಳಿಗೆ, ವಿಜ್ಞಾನದ ವಿಷಯಗಳನ್ನು ಹೊರತುಪಡಿಸಿರುವ ಪರೀಕ್ಷೆಗೆ ಹಾಜರಾಗುವ ಆಯ್ಕೆಯನ್ನೂ ನೀಡಲಾಗುತ್ತದೆ. ಇದನ್ನು ಅರ್ಜಿ ಸಲ್ಲಿಸುವಾಗ, ‘ಒಂದೇ ಸಿಟ್ಟಿಂಗ್‌ನಲ್ಲಿ ಎರಡೂ ಪರೀಕ್ಷೆ ಬರೆಯುವ ಅವಕಾಶ’ವನ್ನು ಆಯ್ಕೆ ಮಾಡಿ ಕೊಳ್ಳಬೇಕು. ಹುದ್ದೆಗಳ ಶೈಕ್ಷಣಿಕ ಅರ್ಹತೆಯ ಹೆಚ್ಚಿನ ವಿವರಗಳಿಗಾಗಿ ಅಧಿಸೂಚನೆ ಪರಿಶೀಲಿಸಲು ಸೂಚಿಸಲಾಗಿದೆ.

ಆನ್‌ಲೈನ್ ಪರೀಕ್ಷೆ: ಆನ್‌ಲೈನ್ ಪರೀಕ್ಷೆಯು ವಸ್ತುನಿಷ್ಠ ಮಾದರಿಯದ್ದಾಗಿರುತ್ತದೆ. ಇಂಗ್ಲಿಷ್ ಪತ್ರಿಕೆ ಹೊರತುಪಡಿಸಿ ಉಳಿದೆಲ್ಲವೂ ದ್ವಿಭಾಷೆಯಲ್ಲಿರುತ್ತದೆ(ಇಂಗ್ಲಿಷ್ ಮತ್ತು ಹಿಂದಿ). ಹಂತ-I ರಲ್ಲಿ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳಿರುತ್ತವೆ. ಅಭ್ಯರ್ಥಿಗಳು ಪರೀಕ್ಷೆಗೆ ತಯಾರಾಗಲು ದ್ವಿತೀಯ ಪಿಯುಸಿ, ಸಿಬಿಎಸ್‌ಸಿ ಪಠ್ಯಕ್ರಮವನ್ನು ಅನುಸರಿಸ ಬೇಕು. ಪ್ರತಿ ಪ್ರಶ್ನೆಗೆ ಒಂದು ಅಂಕ. ತಪ್ಪು ಉತ್ತರಗಳಿಗೆ 0.25 ನೆಗೆಟಿವ್ ಅಂಕಗಳು ಕೂಡ ಇರುತ್ತವೆ.

ಪರೀಕ್ಷಾ ವಿಷಯಗಳೇನು?

ಸೈನ್ಸ್‌ ಪಾಸಾದ ಅಭ್ಯರ್ಥಿಗಳಿಗೆ, 10+2 ಸಿಬಿಎಸ್‌ಇ ಪಠ್ಯಕ್ರಮದ ಪ್ರಕಾರ ಭೌತಶಾಸ್ತ್ರ, ಗಣಿತ ಮತ್ತು ಇಂಗ್ಲಿಷ್ ಅನ್ನು ಒಳಗೊಂಡಿರುತ್ತದೆ. ಪರೀಕ್ಷೆಯ ಒಟ್ಟು ಅವಧಿಯು 60 ನಿಮಿಷಗಳು.

ಆರ್ಟ್ಸ್‌ ಮತ್ತು ಕಾಮರ್ಸ್‌ ಅಭ್ಯರ್ಥಿಗಳಿಗೆ 10+2 ಸಿಬಿಎಸ್‌ಇ ಪಠ್ಯಕ್ರಮ ಮತ್ತು ರೀಸನಿಂಗ್ ಮತ್ತು ಜನರಲ್ ಅವೇರ್ನಸ್‌(RAGA) ಪ್ರಕಾರ ಇಂಗ್ಲಿಷ್ ಒಳಗೊಂಡಿರುತ್ತದೆ. ಪರೀಕ್ಷೆಯ ಒಟ್ಟು ಅವಧಿ 45 ನಿಮಿಷಗಳು.

ಡಿಪ್ಲೊಮಾ ಪೂರೈಸಿರುವವರಿಗೆ, 10+2 ಸಿಬಿಎಸ್‌ಇ ಪಠ್ಯಕ್ರಮದ ಪ್ರಕಾರ ಭೌತಶಾಸ್ತ್ರ, ಗಣಿತ ಮತ್ತು ಇಂಗ್ಲಿಷ್ ಮತ್ತು ರೀಸನಿಂಗ್ ಮತ್ತು ಜನರಲ್ ಅವೇರ್ನೆಸ್ (Reasoning and Genral Awareness- RAGA) ವಿಷಯಗಳನ್ನು ಒಳಗೊಂಡಿರುತ್ತದೆ. ಪರೀಕ್ಷೆಯ ಅವಧಿ 85 ನಿಮಿಷಗಳು.

ಪರೀಕ್ಷೆ–ಫಲಿತಾಂಶದ ಮಾಹಿತಿಗಳನ್ನು https://agnipathvayu.cdac.in ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ.

ಇನ್ನಷ್ಟು ಶೈಕ್ಷಣಿಕ ಮಾಹಿತಿಗಳ ಜೊತೆಗೆ, ಅಧಿಸೂಚನೆ ವಿವರಗಳಿಗಾಗಿ: https://www.careerindianairforce.cdac.in https://agnipathvayu.cdac.in/ https://indianairforce.nic.in ಜಾಲತಾಣಗಳಿಗೆ ಭೇಟಿ ನೀಡಬಹುದು.

ಅರ್ಜಿ ಸಲ್ಲಿಸುವುದು ಹೇಗೆ?

* ಹಂತ 1: https://www.careerindianairforce.cdac.in.

https://agnipathvayu.cdac.in/

https://indianairforce.nic.in – ಅಧಿಕೃತ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ

* ಹಂತ 2: ಈ ಜಾಲತಾಣದ ಮುಖಪುಟದಲ್ಲಿ ನೇಮಕಾತಿ ಅಥವಾ ಉದ್ಯೋಗಾವಕಾಶಗಳಿಗೆ ಸಂಬಂಧಿಸಿದ ನೇಮಕಾತಿ ವಿಭಾಗ ಅಥವಾ ಟ್ಯಾಬ್‌ನಲ್ಲಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.

* ಹಂತ 3: ಈಗ ಅಪೇಕ್ಷಿತ ನೇಮಕಾತಿಗಾಗಿ ಅರ್ಜಿ ನಮೂನೆಗೆ ಕಾರಣವಾಗುವ ಲಿಂಕ್ ಅಥವಾ ಬಟನ್ ಅನ್ನು ಕ್ಲಿಕ್ ಮಾಡಿ.

* ಹಂತ 4: ಅರ್ಜಿ ನಮೂನೆಯ ಪುಟದಲ್ಲಿ ತಿಳಿಸಲಾದ ಸೂಚನೆಗಳು, ಮಾರ್ಗಸೂಚಿಗಳು ಮತ್ತು ಅರ್ಹತಾ ಮಾನದಂಡಗಳನ್ನು ಅನುಸರಿಸಿ.

* ಹಂತ 5: ವೈಯಕ್ತಿಕ ಮಾಹಿತಿ, ಶೈಕ್ಷಣಿಕ ಅರ್ಹತೆಗಳು, ಕೆಲಸದ ಅನುಭವ ಮತ್ತು ಇತರ ಸಂಬಂಧಿತ ವಿವರಗಳನ್ನು ಒಳಗೊಂಡಂತೆ ಅಗತ್ಯ ವಿವರಗಳನ್ನು ನಿಗದಿತ ಕ್ಷೇತ್ರಗಳಲ್ಲಿ ಒದಗಿಸಿ.

* ಹಂತ 6: ಅರ್ಜಿಯನ್ನು ಸಲ್ಲಿಸಿ.

* ಹಂತ 7: ಭವಿಷ್ಯದ ಉಲ್ಲೇಖಕ್ಕಾಗಿ ಅದೇ ಪ್ರಿಂಟ್ ಔಟ್ ತೆಗೆದಿಟ್ಟುಕೊಳ್ಳಿ.

(ಮುಂದಿನವಾರ: ‘ಸ್ಟಾರ್ ಹಂತ’ ಗಳ ಪರೀಕ್ಷೆ ವಿವರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT