ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದರಿ ಪ್ರಶ್ನೋತ್ತರ: ಸಾಮಾನ್ಯ ಜ್ಞಾನ

Last Updated 29 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಐಎಎಸ್‌, ಕೆಎಎಸ್‌, ಕೆಪಿಎಸ್‌ಸಿ ಸೇರಿದಂತೆ ವಿವಿಧ ಹುದ್ದೆಗಳಿಗಾಗಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ‘ಸಾಮಾನ್ಯ ಜ್ಞಾನ’ ವಿಷಯಕ್ಕೆ ಸಂಬಂಧಿಸಿದ ಮಾದರಿ ಪ್ರಶ್ನೋತ್ತರಗಳನ್ನು ಇಲ್ಲಿ ನೀಡಲಾಗಿದೆ.

1) ಕೆಳಗಿನ ಹೇಳಿಕೆಗಳನ್ನು ಗಮನಿಸಿ

1) ದಕ್ಷಿಣ ಭಾರತದ ಮದುಮಲೈ ಹುಲಿ ಸಂರಕ್ಷಿತಾರಣ್ಯದಲ್ಲಿ ದಂಪತಿ ಸಾಕಿದ ಅನಾಥ ಆನೆ ಮರಿಯ ಕಥೆಯನ್ನು ಹೊಂದಿದ್ದ 41 ನಿಮಿಷದ ’ದಿ ಎಲಿಫಂಟ್ ವಿಸ್ಟರರ್ಸ್’ ಸಾಕ್ಷ್ಯಚಿತ್ರಕ್ಕೆ 95ನೇ ಆಸ್ಕರ್ ಬೆಸ್ಟ್ ಡಾಕ್ಯೂಮೆಂಟರಿ ಶಾರ್ಟ್ ಸಬ್ಜೆಕ್ಟ್ ವಿಭಾಗದಲ್ಲಿ ಪ್ರಶಸ್ತಿ ದೊರೆತಿದೆ.

2) ಈ ಹಿಂದೆ ಸ್ಲಮ್‌ ಡಾಗ್ ಮಿಲಿಯನೇರ್ ಸಿನಿಮಾದ `ಜೈ ಹೋ’ ಹಾಡಿಗೆ ಆಸ್ಕರ್ ಪ್ರಶಸ್ತಿ ಬಂದಿತ್ತು. ಈಗ ’ಆರ್‌ಆರ್‌ಆರ್‌‘ ಚಿತ್ರದ `ನಾಟು ನಾಟು’ ಹಾಡಿಗೆ ಆಸ್ಕರ್ ಅಕಾಡೆಮಿಯ ಬೆಸ್ಟ್ ಓರಿಜನಲ್ ಸಾಂಗ್ ವಿಭಾಗದಲ್ಲಿ ಪ್ರಶಸ್ತಿ ಬಂದಿದೆ.

3) ಎಸ್‌.ಎಸ್.ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಚಲನಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಜ್ಯೂನಿಯರ್ ಎನ್‌ಟಿಆರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆರ್‌ಆರ್‌ಆರ್ ಚಿತ್ರದಲ್ಲಿ ಚಂದ್ರಬೋಸ್ ಸಾಹಿತ್ಯ ಬರೆದಿರುವ ಹಾಡಿಗೆ ಎಂ. ಕೀರವಾಣಿ ಸಂಗೀತ ನೀಡಿದ್ದಾರೆ.

4)ಭಾನು ಅಥಯ್ಯ, ಸತ್ಯಜೀತ್ ರಾಯ್, ರಸೂಲ್ ಪೂಕುಟ್ಟಿ, ಗುಲ್ಜಾರ್, ಎ.ಆರ್ ರೆಹಮಾನ್ ಮತ್ತಿತರರು ಆಸ್ಕರ್ ಪ್ರಶಸ್ತಿ ಗೆದ್ದ ಭಾರತೀಯರಾಗಿದ್ದಾರೆ

ಉತ್ತರ ಸಂಕೇತಗಳು:

ಎ)1 ಮತ್ತು 4ನೇ ಹೇಳಿಕೆಗಳು ಮಾತ್ರ ಸರಿಯಾಗಿವೆ

ಬಿ) 4 ನೇ ಹೇಳಿಕೆ ಮಾತ್ರ ಸರಿಯಾಗಿದೆ.

ಸಿ) 1,2 ಮತ್ತು 3 ಹೇಳಿಕೆಗಳು ಮಾತ್ರ ಸರಿಯಾಗಿವೆ.

ಡಿ) ಎಲ್ಲಾ ಹೇಳಿಕೆಗಳು ಸರಿಯಾಗಿವೆ

ಉತ್ತರ: ಡಿ

**

2) ಡಯಾಫ್ರಾಗಮ್ ಯಾವುದನ್ನು ಪ್ರತ್ಯೇಕಿಸುತ್ತದೆ?

ಎ) ಹೃದಯ ಮತ್ತು ಶ್ವಾಸಕೋಶ

ಬಿ) ಎದೆ ಮತ್ತು ಹೊಟ್ಟೆ

ಸಿ) ಯಕೃತ್ತು ಮತ್ತು ಶ್ವಾಸಕೋಶ

ಡಿ) ಹೊಟ್ಟೆ ಮತ್ತು ಮೇದೋಜ್ಜೀರಕ ಗ್ರಂಥಿ

ಉತ್ತರ: ಬಿ

3) ಕೆಳಗಿನ ಹೇಳಿಕೆಗಳನ್ನು ಗಮನಿಸಿ‌

1) ಇಂಡೋ-ಪೆಸಿಫಿಕ್ ಪ್ರದೇಶವನ್ನು ಸ್ವತಂತ್ರ ಮತ್ತು ಮುಕ್ತವಾಗಿಡುವುದಕ್ಕೆ ‘ಔಕಾಸ್’ (AUKUS) ಸದಸ್ಯ ರಾಷ್ಟ್ರಗಳು ಒಪ್ಪಂದಕ್ಕೆ ಬಂದಿವೆ. ಔಕಸ್ (AU- ಆಸ್ಟ್ರೇಲಿಯಾ UK-ಬ್ರಿಟನ್‌–US-ಅಮೆರಿಕ) ಕೂಟವು ಈ ಒಪ್ಪಂದದ ಅಡಿ ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆ ಯೋಜನೆಗೆ ಒಪ್ಪಿಗೆ ಸೂಚಿಸಿವೆ

2) ಅಮೆರಿಕ, ಬ್ರಿಟನ್ ಹಾಗೂ ಆಸ್ಟ್ರೇಲಿಯಾಗಳು ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆ ಯೋಜನೆಗೆ ಒಪ್ಪಿಗೆ ಸೂಚಿಸಿವೆ. ಇದಕ್ಕೆ ಅತ್ಯಾಧುನಿಕ ಪರಮಾಣು ಎಂಜಿನ್ ತಂತ್ರಜ್ಞಾನವನ್ನು ಅಮೆರಿಕ ನೀಡಲಿದೆ, ಇದರ ವಿನ್ಯಾಸವನ್ನು ಬ್ರಿಟನ್ ಮಾಡಲಿದೆ.

ಉತ್ತರ ಸಂಕೇತಗಳು

ಎ) ಹೇಳಿಕೆ 1 ಮಾತ್ರ ಸರಿಯಾಗಿದೆ

ಬಿ) ಹೇಳಿಕೆ 2 ಮಾತ್ರ ಸರಿಯಾಗಿದೆ

ಸಿ) ಹೇಳಿಕೆ 1 ಮತ್ತು 2 ಎರಡೂ ಸರಿಯಾಗಿವೆ

ಡಿ) ಎರಡೂ ಹೇಳಿಕೆಗಳು ತಪ್ಪಾಗಿವೆ

ಉತ್ತರ: ಡಿ

4) 2017ರಲ್ಲಿ ಪೂರ್ಣಗೊಂಡ ನರ್ಮದಾ ನದಿಗೆ ಅಣೆಕಟ್ಟು ನಿರ್ಮಾಣ ಯೋಜನೆಗೆ ಮೊದಲು ಅಡಿಗಲ್ಲು ಹಾಕಿದ್ದು ಯಾರು ಮತ್ತು ಯಾವ ವರ್ಷ?

ಎ) 1901- ಬ್ರಿಟಿಷ್ ಸರ್ಕಾರದ ಹಿರಿಯ ಅಧಿಕಾರಿ.

ಬಿ) 1961- ಪ್ರಧಾನಿ ಜವಾಹರ ಲಾಲ್‌ ನೆಹರು

ಸಿ) 1969- ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ

ಡಿ) 2001– ಮುಖ್ಯಮಂತ್ರಿ ನರೇಂದ್ರ ಮೋದಿ

ಉತ್ತರ: ಬಿ

5) ಕೆಳಗಿನ ಹೇಳಿಕೆಗಳನ್ನು ಗಮನಿಸಿ
1) ಕರ್ನಾಟಕ ಮಾನವ ಅಭಿವೃದ್ದಿ ವರದಿ-2022ರ ಪ್ರಕಾರ 1990 ರಿಂದ 2019ರ ಅವಧಿಯಲ್ಲಿ ಶೇ. 1.9ರ ಬೆಳವಣಿಗೆಯೊಂದಿಗೆ ಮಾನವ ಅಭಿವೃದ್ದಿ ಸೂಚ್ಯಂಕ ಏರಿಕೆಯನ್ನು ಕಂಡಿದೆ.

2) ಬಾಗಲಕೋಟೆ, ಬಳ್ಳಾರಿ, ರಾಮನಗರ, ಮಂಡ್ಯ, ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಗಳು ಮಾನವ ಅಭಿವೃದ್ದಿಯಲ್ಲಿ ಗಣನೀಯವಾಗಿ ಏರಿಕೆಯಾದ ಜಿಲ್ಲೆಗಳ ಪಟ್ಟಿಯಲ್ಲಿವೆ.

3) ಇದೇ ಮೊದಲ ಬಾರಿಗೆ ತಾಲೂಕು ಮಟ್ಟದಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕ ಮತ್ತು ಬಹು ಆಯಾಮದ ಬಡತನ ಸೂಚ್ಯಂಕಗಳನ್ನು ಅಂದಾಜು ಮಾಡಲಾಗಿದೆ. ಮಂಗಳೂರು ತಾಲ್ಲೂಕು ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ, ಬೆಂಗಳೂರು ದಕ್ಷಿಣ ತಾಲ್ಲೂಕು ದ್ವಿತೀಯ ಸ್ಥಾನದಲ್ಲಿದೆ.

ಉತ್ತರ ಸಂಕೇತಗಳು:

ಎ) 1 ಮತ್ತು 2ನೇ ಹೇಳಿಕೆಗಳು ಮಾತ್ರ ಸರಿಯಾಗಿವೆ

ಬಿ) 1 ಮತ್ತು 3ನೇ ಹೇಳಿಕೆಗಳು ಮಾತ್ರ ಸರಿಯಾಗಿವೆ

ಸಿ) ಹೇಳಿಕೆ 2 ಮತ್ತು 3 ಮಾತ್ರ ಸರಿಯಾಗಿದೆ

ಡಿ) ಎಲ್ಲಾ ಹೇಳಿಕೆಗಳು ಸರಿಯಾಗಿವೆ.

ಉತ್ತರ: ಡಿ

6) ಈ ಕೆಳಗಿನವುಗಳಲ್ಲಿ ಸರಿಯಾದ ಹೊಂದಾಣಿಕೆ ಇಲ್ಲದ್ದು ಯಾವುದು?

ಎ) ಪಾಣಿನಿ - ಅಷ್ಟಾಧ್ಯಾಯಿ

ಬಿ) ಶೂದ್ರಕ - ಮೃಚ್ಛಕಟಿಕ

ಸಿ) ಕಲ್ಹಣ - ವಿಕ್ರಮಾಂಕ ದೇವ ಚರಿತಂ

ಡಿ) ಬಾಬರ್ - ತುಜುಕ್-ಇ-ಬಾಬರಿ

ಉತ್ತರ: ಸಿ

ಮತ್ತಷ್ಟು ಪ್ರಶ್ನೋತ್ತರಕ್ಕಾಗಿ https://www.prajavani.net/education-career ನೋಡಿ

(ಮಾಹಿತಿ: Spardha Bharati UPSC ಯೂಟ್ಯೂಬ್ ಚಾನೆಲ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT