ಶನಿವಾರ, ಅಕ್ಟೋಬರ್ 1, 2022
20 °C

 ಕರ್ನಾಟಕ ಸ್ಮಾರ್ಟ್ ಗವರ್ನೆನ್ಸ್: ಸಿಎಸ್‌ಜಿನಲ್ಲಿ ವಿವಿಧ ಹುದ್ದೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಹಿತಿ ತಂತ್ರಜ್ಞಾನ (ಐಟಿ/ಐಸಿಟಿ) ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸೆಂಟರ್ ಫಾರ್ ಸ್ಮಾರ್ಟ್‌ ಗವರ್ನನ್ಸ್‌ ಸಂಸ್ಥೆಯಲ್ಲಿ(ಸಿಎಸ್‌ಜಿ) ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಕರ್ನಾಟಕ ಸ್ಮಾರ್ಟ್ ಗವರ್ನೆನ್ಸ್ ಕೇಂದ್ರ ನೇಮಕಾತಿ 2022 – ಈ ಶೀರ್ಷಿಕೆಯಡಿ ಉದ್ಯೋಗಗಳ ಭರ್ತಿಗೆ ಸಿಎಸ್‌ಜಿ ಅಧಿಸೂಚನೆ ಹೊರಡಿಸಿದೆ.

ಸಾಫ್ಟ್‌ವೇರ್ ಎಂಜಿನಿಯರ್, ಟೆಸ್ಟ್‌ ಎಂಜಿನಿಯರ್ ಸೇರಿದಂತೆ 12 ವಿವಿಧ ವಿಭಾಗಗಳಿಗೆ ಅಗತ್ಯವಿರುವ 128 ಹುದ್ದೆಗಳಿಗೆ ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಇದು ಮೂರು ವರ್ಷಗಳ ಅವಧಿಯ ಗುತ್ತಿಗೆ ಆಧಾರದ ಉದ್ಯೋಗ ಎಂದು ಮಾಹಿತಿ ಪ್ರಕಟಿಸಿರುವ ಸಂಸ್ಥೆಯ ಅಧಿಕೃತ ಜಾಲತಾಣದಲ್ಲಿ ತಿಳಿಸಿದೆ.

ಅಭ್ಯರ್ಥಿಗಳು ಆಗಸ್ಟ್‌ 31ರೊಳಗೆ ತಮ್ಮ ವಿವರವಾದ ಪರಿಚಯ ಪತ್ರವನ್ನು (Curriculum Vitae) careerscsg@karnataka.gov.in ಮೇಲ್‌ಗೆ ಕಳುಹಿಸಬೇಕು.

ವಿದ್ಯಾರ್ಹತೆ, ಕೆಲಸದ ವಿವರ, ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸೇರಿದಂತೆ ಹೆಚ್ಚಿನ ಮಾಹಿತಿಗಾಗಿ: 

ಅಧಿಸೂಚನೆ ಲಿಂಕ್‌: https://csg.karnataka.gov.in/wp-content/uploads/2022/08/CSG-Hiring-1-Qua...

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು