ಶನಿವಾರ, ಮೇ 21, 2022
28 °C
ಗ್ರೂಪ್-ಸಿ (ತಾಂತ್ರಿಕೇತರ) ಹುದ್ದೆ

KPSC ಗ್ರೂಪ್-ಸಿ (ತಾಂತ್ರಿಕೇತರ) ಹುದ್ದೆ: ಕರ್ನಾಟಕದ ಭೂಗೋಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕ ಲೋಕಸೇವಾ ಆಯೋಗವು ಗ್ರೂಪ್ ‘ಸಿ’ ವೃಂದದ ತಾಂತ್ರಿಕೇತರ ಹುದ್ದೆಗಳಿಗೆ ಡಿಸೆಂಬರ್ 19ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿದೆ. ಪರೀಕ್ಷೆಗೆ ಸಿದ್ಧತೆ ನಡೆಸುವವರಿಗಾಗಿ ‘ಸಾಮಾನ್ಯ ಜ್ಞಾನ’ ವಿಭಾಗದಲ್ಲಿ ‘ಕರ್ನಾಟಕಕ್ಕೆ ಸಂಬಂಧಿಸಿದ ಭಾರತದ ಭೂಗೋಳ’ ವಿಷಯದ ಕುರಿತಾದ ಬಹುಆಯ್ಕೆ ಮಾದರಿ ಪ್ರಶ್ನೋತ್ತರಗಳನ್ನು ಇಲ್ಲಿ ನೀಡಲಾಗಿದೆ.

1)→ಭಾರತದ ಮೇಲ್ಮೈ ಜಲಸಂಪನ್ಮೂಲ ಪ್ರಮಾಣ 1.7 ಲಕ್ಷ ಮಿಲಿಯನ್ ಘನ ಮೀಟರ್‌ಗಳು. ಇದರಲ್ಲಿ ಕರ್ನಾಟಕದ ಪಾಲು ಎಷ್ಟು?

ಎ) ಶೇ 6→ಬಿ) ಶೇ 9→ಸಿ) ಶೇ 12→ಡಿ) ಶೇ 3

ಉತ್ತರ: ಎ

2)→ನಮ್ಮ ರಾಜ್ಯದ ಒಟ್ಟು ವಿಸ್ತೀರ್ಣ 1,91,791 ಚದರ ಕಿಲೋಮೀಟರ್‌. ಇದು ಭಾರತದ ಒಟ್ಟು ಭೌಗೋಳಿಕ ವಿಸ್ತೀರ್ಣದ ಶೇ 5.83 ಭಾಗ. ಹಾಗಾದರೆ ನಮ್ಮ ರಾಜ್ಯದ ವಿಸ್ತೀರ್ಣವನ್ನು ಮೈಲುಗಳಲ್ಲಿ ತಿಳಿಸಿ.

ಎ) 74,122 ಚದರ ಮೈಲಿಗಳು→ಬಿ) 84,822 ಚದರ ಮೈಲಿಗಳು

ಸಿ) 94,822 ಚದರ ಮೈಲಿಗಳು→ಡಿ) 64,722 ಚದರ ಮೈಲಿಗಳು

ಉತ್ತರ:ಎ

3)→ಕರ್ನಾಟಕವು ಎಷ್ಟು ರಾಜ್ಯಗಳೊಂದಿಗೆ ತನ್ನ ಗಡಿಯನ್ನು ಹೊಂದಿದೆ?

ಎ) 6 →ಬಿ) 8→ಸಿ) 5→ಡಿ) 7

ಉತ್ತರ: ಎ

4) ಕರ್ನಾಟಕದಲ್ಲಿ ಮೊದಲು ಎಲ್ಲಿ ಸೂರ್ಯೋದಯವನ್ನು ನೋಡಬಹುದು?

ಎ) ಕಾರವಾರ→ಬಿ) ಉಡುಪಿ→ಸಿ) ಮುಳಬಾಗಿಲು→ಡಿ) ಔರಾದ್

ಉತ್ತರ:ಸಿ

5) ಹೊಂದಿಸಿ ಬರೆಯಿರಿ.

 

ಉತ್ತರ ಸಂಕೇತಗಳು:-

ಎ) ಎ-1 ಬಿ-3 ಸಿ-4 ಡಿ-2→ಬಿ) ಎ-4 ಬಿ-1 ಸಿ-3 ಡಿ-2

ಸಿ) ಎ-3 ಬಿ-1 ಸಿ-4 ಡಿ-2→ಡಿ) ಎ-4 ಬಿ-3 ಸಿ-1 ಡಿ-2

ಉತ್ತರ: ಡಿ. (ವಿವರಣೆ: ಕಾವೇರಿ ನದಿಯು ಶಿವನಸಮುದ್ರ ದ್ವೀಪದ ಎರಡೂ ಕಡೆಯಿಂದ ಹರಿದು ಬಂದು ಸುಮಾರು 100 ಮೀಟರ್ ಎತ್ತರದಿಂದ ಧುಮ್ಮಿಕ್ಕುತ್ತದೆ. ಪಶ್ಚಿಮದಿಂದ ಧುಮ್ಮಿಕ್ಕಿ ಸೃಷ್ಟಿಸುವ ಜಲಪಾತಕ್ಕೆ ಗಗನಚುಕ್ಕಿ ಎಂತಲೂ ಪೂರ್ವದಿಂದ ಧುಮ್ಮಿಕ್ಕಿ ಹರಿಯುವ ಜಲಪಾತಕ್ಕೆ ಭರಚುಕ್ಕಿ ಎಂತಲೂ ಕರೆಯುತ್ತಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಸಮೀಪ ವೇದಾವತಿ ನದಿಗೆ ಅಡ್ಡಲಾಗಿ ಮಾರಿಕಣಿವೆ ಅಣೆಕಟ್ಟನ್ನು ಕಟ್ಟಲಾಗಿದೆ. ಆ ಅಣೆಕಟ್ಟಿನ ನಿಜವಾದ ಹೆಸರು ವಾಣಿವಿಲಾಸ ಸಾಗರ. ಇದು ಸರ್ ಎಂ. ವಿಶ್ವೇಶ್ವರಯ್ಯನವರು ಕಟ್ಟಿದ ಮೊದಲ ಅಣೆಕಟ್ಟು)

6) ಹೊಂದಿಸಿ ಬರೆಯಿರಿ.

 

ಉತ್ತರ ಸಂಕೇತಗಳು:-

ಎ) ಎ-1 ಬಿ-3 ಸಿ-4 ಡಿ-2→ಬಿ) ಎ-2 ಬಿ-3 ಸಿ-1 ಡಿ-4

ಸಿ) ಎ-3 ಬಿ-1 ಸಿ-4 ಡಿ-2→ಡಿ) ಎ-2 ಬಿ-1 ಸಿ-3 ಡಿ-4

ಉತ್ತರ:ಬಿ

7) ಈ ಕೆಳಗಿನ ಯಾವ ಭಾಗದಲ್ಲಿ ಅತಿ ಹೆಚ್ಚು (ಹತ್ತಿ ಬೆಳೆಯುವ) ಕಪ್ಪು ಮಣ್ಣಿನ ಭೂಮಿ ಇದೆ?

ಎ)→ಉತ್ತರ ಕರ್ನಾಟಕದ ಪ್ರಸ್ಥಭೂಮಿ→⇒ಬಿ) ದಕ್ಷಿಣ ಕರ್ನಾಟಕದ ಪ್ರಸ್ಥಭೂಮಿ

ಸಿ)→ಕರಾವಳಿ ಪ್ರದೇಶ ⇒ಡಿ) ಮೇಲಿನ ಎಲ್ಲಿಯೂ ಕಪ್ಪು ಮಣ್ಣನ್ನು ನೋಡಲು ಸಾಧ್ಯವಿಲ್ಲ

ಉತ್ತರ:ಎ

8) ಕರ್ನಾಟಕದಲ್ಲಿ ಶೇಷ ಬೆಟ್ಟ(ರೆಸಿಡ್ಯೂಯಲ್ ಮೌಂಟೇನ್)ಗಳನ್ನು ಎಲ್ಲಿ ನೋಡಲು ಸಾಧ್ಯ?

ಎ)→ಉತ್ತರ ಕರ್ನಾಟಕದ ಪ್ರಸ್ಥಭೂಮಿ→⇒ಬಿ) ದಕ್ಷಿಣ ಕರ್ನಾಟಕದ ಪ್ರಸ್ಥಭೂಮಿ

ಸಿ)→ಕರಾವಳಿ ಪ್ರದೇಶ →⇒ಡಿ) ಮಧ್ಯ ಕರ್ನಾಟಕದ ಪ್ರಸ್ಥಭೂಮಿ

ಉತ್ತರ: ಡಿ

9)→ಕರ್ನಾಟಕದಲ್ಲಿ ಯಾವ ಜಿಲ್ಲೆಯನ್ನು ಜಲಪಾತಗಳ ಜಿಲ್ಲೆ ಎಂದು ಕರೆಯಲಾಗಿದೆ?

ಎ) ದಕ್ಷಿಣ ಕನ್ನಡ ಬಿ) ಉತ್ತರ ಕನ್ನಡ ಸಿ) ಕೊಡಗು ಡಿ) ಚಾಮರಾಜನಗರ

ಉತ್ತರ: ಬಿ

10)→ದೇಶದ ಮೊದಲ ಚಿಟ್ಟೆ ಉದ್ಯಾನವನ್ನು ಎಲ್ಲಿ ಸ್ಥಾಪಿಸಲಾಯಿತು?

ಎ) ನಂದನ ಕಾನನ ರಾಷ್ಟ್ರೀಯ ಉದ್ಯಾನ ಬಿ) ಬಂಡಿಪುರ ರಾಷ್ಟ್ರೀಯ ಉದ್ಯಾನ 

ಸಿ) ಗಿರ್ ರಾಷ್ಟ್ರೀಯ ಉದ್ಯಾನ→ಡಿ) ಕಾಜೀರಂಗ ರಾಷ್ಟ್ರೀಯ ಉದ್ಯಾನವನ

ಉತ್ತರ:ಬಿ

11) ಕೆಳಗಿನ ಹೇಳಿಕೆಗಳನ್ನು ಗಮನಿಸಿ

1) ನಮ್ಮ ರಾಜ್ಯದ ಒಟ್ಟು ವಿಸ್ತೀರ್ಣ 1,91,791 ಚದರ ಕಿಲೋಮೀಟರ್‌. ಇದು ಭಾರತದ ಒಟ್ಟು ಭೌಗೋಳಿಕ ವಿಸ್ತೀರ್ಣದ ಶೇ 5.83 ಭಾಗ.

2)→ಕರ್ನಾಟಕವು ದೇಶದಲ್ಲಿನ ರಾಜ್ಯವಾರು ಜನಸಂಖ್ಯೆಯಲ್ಲಿ ಒಂಬತ್ತನೆಯ ಸ್ಥಾನದಲ್ಲಿದೆ. ನಮ್ಮ ರಾಜ್ಯದಲ್ಲಿ ಒಟ್ಟು 30 ಜಿಲ್ಲೆಗಳಿವೆ.

3)→ನಮ್ಮ ದೇಶದಲ್ಲಿರುವ ಒಟ್ಟು ಆನೆಗಳ ಪೈಕಿ ಶೇ 25ರಷ್ಟು ನಮ್ಮ ರಾಜ್ಯದಲ್ಲಿವೆ. 2017ರ ಸಾಲಿನಲ್ಲಿ ಕೈಗೊಂಡ ಆನೆ ಗಣತಿಯ ಪ್ರಕಾರ ಕರ್ನಾಟಕದಲ್ಲಿ 6049 ಆನೆಗಳಿವೆ. 

4)→ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಹುಲಿಗಳನ್ನು ಹೊಂದಿರುವ 2ನೇ ರಾಜ್ಯ ಕರ್ನಾಟಕ. 2017ರ ಹುಲಿ ಗಣತಿಯ ಪ್ರಕಾರ ನಮ್ಮ ರಾಜ್ಯದಲ್ಲಿ 524 ಹುಲಿಗಳಿವೆ. ನಮ್ಮ ರಾಜ್ಯವು 5 ಹುಲಿ ಸಂರಕ್ಷಣಾ ಪ್ರದೇಶಗಳನ್ನು (Tiger Reserves)ಹೊಂದಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವೆಲ್ಲಾ ಹೇಳಿಕೆಗಳು ಸರಿಯಾಗಿವೆ?

ಎ) ಹೇಳಿಕೆ 1 ರಿಂದ 4ರತನಕ ಎಲ್ಲವೂ ಸರಿಯಾಗಿದೆ

ಬಿ) ಹೇಳಿಕೆ 1, 3 ಮತ್ತು 4 ಮಾತ್ರ ಸರಿಯಾಗಿದೆ

ಸಿ) ಹೇಳಿಕೆ 1 ರಿಂದ 3ರ ತನಕ ಮಾತ್ರ ಸರಿಯಾಗಿದೆ

ಡಿ) ಮೇಲಿನ ಯಾವ ಹೇಳಿಕೆಯೂ ಸರಿಯಾಗಿಲ್ಲ

ಉತ್ತರ:ಬಿ

12) ಹೊಂದಿಸಿ ಬರೆಯಿರಿ.

 

ಉತ್ತರ ಸಂಕೇತಗಳು:-

ಎ) ಎ-1 ಬಿ-3 ಸಿ-4 ಡಿ-2→ಬಿ) ಎ-2 ಬಿ-3 ಸಿ-1 ಡಿ-4

ಸಿ) ಎ-1 ಬಿ-2 ಸಿ-4 ಡಿ-3→ಡಿ) ಎ-2 ಬಿ-1 ಸಿ-3 ಡಿ-4

ಉತ್ತರ: ಸಿ

13) ಇವುಗಳಲ್ಲಿ ಯಾವುದು ಕಾಳಿ ನದಿಯ ಉಪನದಿಯಾಗಿಲ್ಲ?

ಎ) ಪಾಂಡರಿ ಬಿ) ಕಾನೇರಿ ಸಿ) ವಾಕಿ  ಡಿ) ತಾರಕ

ಉತ್ತರ: ಡಿ(ವಿವರಣೆ: ತಾರಕ ಇದು ಕಪಿಲಾ ನದಿಯ ಉಪನದಿಯಾಗಿದೆ)

14) ಕರ್ನಾಟಕವು ಯಾವ ಅಕ್ಷಾಂಶ ಮತ್ತು ರೇಖಾಂಶದ ನಡುವೆ ಬರುತ್ತದೆ?

ಎ)→110 35/ ನಿಂದ 180 30/ ಉತ್ತರ ಅಕ್ಷಾಂಶ

→740 5/ ನಿಂದ 780 40/ ಪೂರ್ವ ರೇಖಾಂಶ

ಬಿ)→210 35/ ನಿಂದ 280 30/ ದಕ್ಷಿಣ ಅಕ್ಷಾಂಶ ಮತ್ತು

→790 5/ ನಿಂದ 820 40/ ಪಶ್ಚಿಮ ರೇಖಾಂಶ

ಸಿ)→120 35/ ನಿಂದ 190 30/ ಉತ್ತರ ಅಕ್ಷಾಂಶ

→790 5/ ನಿಂದ 880 40/ ಪೂರ್ವ ರೇಖಾಂಶ

ಡಿ)→110 35/ ನಿಂದ 180 30/ ಪೂರ್ವ ಅಕ್ಷಾಂಶ ಮತ್ತು

→740 5/ ನಿಂದ 780 40/ ಉತ್ತರ ರೇಖಾಂಶ

ಉತ್ತರ:ಎ

15) ಓಂ ಬೀಚ್‌, ರವೀಂದ್ರನಾಥ ಟ್ಯಾಗೋರ್ ಸಮುದ್ರ ತೀರ(ಬೀಚ್‌), ಕೂಡ್ಲೆ ಬೀಚ್‌, ಮುರ್ಡೇಶ್ವರ ಬೀಚ್‌ ಮತ್ತಿತರ ಬೀಚ್‌ಗಳು ಯಾವ ಜಿಲ್ಲೆಯಲ್ಲಿವೆ?

ಎ) ಉತ್ತರ ಕನ್ನಡ →ಬಿ) ದಕ್ಷಿಣ ಕನ್ನಡ ಜಿಲ್ಲೆ

ಸಿ) ಉಡುಪಿ ಜಿಲ್ಲೆ →ಡಿ) ಮೇಲಿನ ಯಾವುದರಲ್ಲಿಯೂ ಇಲ್ಲ.

ಉತ್ತರ:ಎ

16) ಕೆಳಗಿನ ಹೇಳಿಕೆಗಳನ್ನು ಗಮನಿಸಿ

1)→ಭಾರತದಲ್ಲಿ ಚಿನ್ನ ತೆಗೆಯುವ ರಾಜ್ಯ ಕರ್ನಾಟಕ. ರಾಜ್ಯದ ಕೋಲಾರದ ಸುತ್ತಮುತ್ತ 53 ಪುರಾತನ ಚಿನ್ನದ ಗುಂಡಿಗಳು ಪತ್ತೆಯಾಗಿತ್ತು. ಅಂದರೆ ಪ್ರಾಚೀನ ಕಾಲದಿಂದಲೂ ಕರ್ನಾಟಕ ಚಿನ್ನ ತೆಗೆಯಲಾಗುತ್ತಿತ್ತು.

2)→ಈವರೆಗೆ ಕೋಲಾರದ ಗೋಲ್ಡ್ ಫೀಲ್ಡ್‌ನಿಂದ 800 ಟನ್ ಚಿನ್ನ ತೆಗೆಯಲಾಗಿದೆ. ಆದರೆ ಪ್ರಸ್ತುತ ಕೋಲಾರದಲ್ಲಿ ಚಿನ್ನ ತೆಗೆಯುತ್ತಿಲ್ಲ.

3)→ಕರ್ನಾಟಕದ  ರಾಯಚೂರು ಜಿಲ್ಲೆಯಲ್ಲಿರುವ ಹಟ್ಟಿ ಚಿನ್ನದ ಗಣಿಯಲ್ಲಿ ಚಿನ್ನವನ್ನು ತೆಗೆಯಲಾಗುತ್ತದೆ. 5.5 ಲಕ್ಷ ಟನ್ ಚಿನ್ನದ ಅದಿರನ್ನು
ಮೇಲಕ್ಕೆತ್ತಿ ಸುಮಾರು 1500 ಕೆ.ಜಿ ಚಿನ್ನ ತೆಗೆಯಲಾಗುತ್ತಿದೆ.
ಕೋವಿಡ್‌ಗಿಂತ ಮೊದಲು 2018-19ರಲ್ಲಿ ಹಟ್ಟಿ ಗೋಲ್ಡ್ ಮೈನ್ಸ್‌ ₹ 70 ಕೋಟಿ ಲಾಭ ಮಾಡಿತ್ತು.

4)→ಮುಂದಿನ 60 ವರ್ಷಗಳ ಕಾಲ ಕೆಲಸ ಮಾಡುವಷ್ಟು ಚಿನ್ನದ ಸಂಗ್ರಹ ರಾಯಚೂರು ಜಿಲ್ಲೆಯ ಹಟ್ಟಿ ಸುತ್ತಮುತ್ತ ಇದೆ.

ಮೇಲಿನ ಹೇಳಿಕೆಗಳಲ್ಲಿ ಯಾವೆಲ್ಲಾ ಹೇಳಿಕೆಗಳು ಸರಿಯಾಗಿವೆ?

ಎ) ಹೇಳಿಕೆ 1 ರಿಂದ 4ರತನಕ ಎಲ್ಲವೂ ಸರಿಯಾಗಿದೆ

ಬಿ) ಹೇಳಿಕೆ 1, 2 ಮತ್ತು 4 ಮಾತ್ರ ಸರಿಯಾಗಿದೆ

ಸಿ) ಹೇಳಿಕೆ 1, 2, 3ರ ಮಾತ್ರ ಸರಿಯಾಗಿದೆ

ಡಿ) ಮೇಲಿನ ಯಾವ ಹೇಳಿಕೆಯೂ ಸರಿಯಾಗಿಲ್ಲ.

ಉತ್ತರ:ಎ

17) ದೇಶದಲ್ಲಿಯೇ ಎರಡನೇ ಸ್ಕೂಲ್ ಆಫ್ ಮೈನಿಂಗ್ ಎಲ್ಲಿ ಆರಂಭವಾಗಲಿದೆ?

ಎ) ಕಲಬುರಗಿ → ಬಿ) ಬಳ್ಳಾರಿ→ಸಿ) ಚಾಮರಾಜನಗರ →ಡಿ) ಕೋಲಾರ

ಉತ್ತರ: ಬಿ (ವಿವರಣೆ: ದೇಶದ ಎರಡನೇ ಸ್ಕೂಲ್ ಆಫ್ ಮೈನಿಂಗ್ ಬಳ್ಳಾರಿಯಲ್ಲಿ ಸುಮಾರು 50 ಎಕರೆ ಜಮೀನಿನಲ್ಲಿ ತೆರೆಯಲು ತೀರ್ಮಾನಿಸಲಾಗಿದೆ. ಈಗಾಗಲೇ ವಿಸ್ತೃತ ಯೋಜನಾ ವರದಿಯೂ(ಡಿಪಿಆರ್)ಸಿದ್ದವಾಗಿದೆ. ಇಲ್ಲಿ ಗಣಿಗಾರಿಕೆ ನಿರ್ವಹಣೆ, ಮಾಲೀಕರು ಮತ್ತು ಕಾರ್ಮಿಕರಿಗೆ ತರಬೇತಿ ಹಾಗೂ ಭವಿಷ್ಯದಲ್ಲಿ ಉಂಟಾಗಬಹುದಾದ ಅನಾಹುತಗಳನ್ನು ತಪ್ಪಿಸಲು ಅಂತರರಾಷ್ಟ್ರೀಯ ಮಟ್ಟದ ತರಬೇತಿಯನ್ನು ನೀಡಲಾಗುವುದು)

ಮಾಹಿತಿ: Spardha Bharati UPSC, ಯೂಟ್ಯೂಬ್‌ ಚಾನೆಲ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು