ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

UPSC, KPSC ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಬಹುಆಯ್ಕೆಯ ಪ್ರಶ್ನೆಗಳು

Published 16 ಮೇ 2024, 0:30 IST
Last Updated 16 ಮೇ 2024, 0:30 IST
ಅಕ್ಷರ ಗಾತ್ರ

ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಬಹುಆಯ್ಕೆಯ ಪ್ರಶ್ನೋತ್ತರಗಳು ಇಲ್ಲಿವೆ...

1. ಕೋಕೋ ಬೀಜದ ಉತ್ಪಾದನೆಯನ್ನು ಭಾರತದಲ್ಲಿ ಹೆಚ್ಚಿಸಲು ಕೆಳಗಿನ ಯಾವ ಕೇಂದ್ರ ಸಂಸ್ಥೆ ಸಂಶೋಧನಾ ಚಟುವಟಿಕೆಯಲ್ಲಿ ತೊಡಗಿಕೊಂಡಿದೆ?

ಎ. ಸೆಂಟ್ರಲ್ ಪ್ಲಾಂಟೇಶನ್ ಕ್ರಾಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್.

ಬಿ. ರಾಷ್ಟ್ರೀಯ ತೋಟಗಾರಿಕೆ ಸಂಶೋಧನಾ ಕೇಂದ್ರ.

ಸಿ. ರಾಷ್ಟ್ರೀಯ ಕೃಷಿ ಉತ್ಪನ್ನಗಳ ಸಂಶೋಧನಾ ಕೇಂದ್ರ.

ಡಿ. ಈಶಾನ್ಯ ತೋಟಗಾರಿಕೆ ಸಂಶೋಧನಾ ಕೇಂದ್ರ.

(ಉತ್ತರ : ಎ)

****

2. ಭಾರತದ ಕೆಳಗಿನ ಯಾವ ರಾಜ್ಯಗಳಲ್ಲಿ ಕೋಕೋ ಬೇಸಾಯವನ್ನು ಹೆಚ್ಚಾಗಿ ಕಾಣಬಹುದಾಗಿದೆ?

1. ಆಂಧ್ರಪ್ರದೇಶ.

2. ಮಹಾರಾಷ್ಟ್ರ.

3. ಕರ್ನಾಟಕ.

4. ತಮಿಳುನಾಡು.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1, 2 ಮತ್ತು 3 ಬಿ. 1, 3 ಮತ್ತು 4

ಸಿ. 2 ಮತ್ತು 3 ಡಿ. 3 ಮತ್ತು 4

(ಉತ್ತರ : ಬಿ)

****

3. 2019 ರಲ್ಲಿ ಕೆಳಗಿನ ಯಾವ ರಾಜ್ಯದ ಕಾರ್ಮಿಕರು ಇಲಿ ರಂಧ್ರದಲ್ಲಿ ಸಿಲುಕಿಕೊಂಡಿದ್ದರು?
ಎ. ಉತ್ತರಖಂಡ್.
ಬಿ. ಚತ್ತೀಸ್ಗಡ.
ಸಿ. ಮೇಘಾಲಯ.
ಡಿ. ಮಣಿಪುರ.
(ಉತ್ತರ : ಎ)

****

4. ಇಲಿ ರಂಧ್ರ ಗಣಿಗಾರಿಕೆಯನ್ನು ನಡೆಸಲು ಕೆಳಗಿನ ಯಾವ ಪರವಾನಿಗೆಯನ್ನು ನೀಡಲಾಗುತ್ತದೆ?
ಎ. ಲಾರ್ಜ್ ಪಾಕೆಟ್ ಡೆಪಾಸಿಟ್ ಲೈಸೆನ್ಸ್.
ಬಿ. ಸ್ಮಾಲ್ ಪಾಕೆಟ್ ಡೆಪಾಸಿಟ್ ಲೈಸನ್ಸ್.
ಸಿ. ಇಲಿ ರಂಧ್ರ ಗಣಿಗಾರಿಕೆ ಪರವಾನಗಿ.
ಡಿ. ರಂಧ್ರ ಗಣಿಗಾರಿಕೆ ಪರವಾನಗಿ.
(ಉತ್ತರ : ಬಿ)

****

5. ಕೆಳಗಿನ ಯಾವ ಕಾಯ್ದೆಯ ಅನ್ವಯ ಭಾರತೀಯ ಔಷಧೀಯ ವಲಯವನ್ನು ಪ್ರಸ್ತುತ ಸಂದರ್ಭದಲ್ಲಿ ನಿರ್ವಹಿಸಲಾಗುತ್ತಿದೆ?
ಎ. ಡ್ರಗ್ಸ್ ಅಂಡ್ ಕಾಸ್ಮೆಟಿಕ್ಸ್ ಆಕ್ಟ್-1940.
ಬಿ. ಡ್ರಗ್ಸ್ ಅಂಡ್ ಕಾಸ್ಮೆಟಿಕ್ಸ್ ನಿಯಮಾವಳಿಗಳು-1980.
ಸಿ. ಆರೋಗ್ಯದ ಉದ್ದೇಶಗಳಿಗಾಗಿ ಔಷಧಿಗಳ ನಿಯಮಾವಳಿ-1967.
ಡಿ. ಇಂಡಿಯನ್ ಪೇಟೆಂಟ್ ಆಕ್ಟ್-1976.
(ಉತ್ತರ : ಎ)

****

6. ಭಾರತೀಯ ಔಷಧೀಯ ವಲಯದ ಉತ್ಪನ್ನಗಳ ಪ್ರಸ್ತುತ ಸ್ಥಿತಿಗತಿ ಮತ್ತು ಭವಿಷ್ಯದ ಅಂದಾಜಿಗೆ ಸಂಬಂಧಿಸಿದಂತೆ ಸರಿಯಾದ
ಹೇಳಿಕೆಗಳನ್ನು ಗುರುತಿಸಿ?
1. 2022-23 ರ ಹಣಕಾಸು ವರ್ಷದಲ್ಲಿ ಭಾರತ 50 ಶತಕೋಟಿ ಡಾಲರ್ ಮೌಲ್ಯದ ಔಷಧ ಉತ್ಪನ್ನಗಳನ್ನು ರಫ್ತು ಮಾಡಿದೆ.
2. 2024 ರ ಹಣಕಾಸು ವರ್ಷದ ಅಂತ್ಯದ ವೇಳೆಗೆ 65 ಶತಕೋಟಿ ಡಾಲರ್ ಮೌಲ್ಯದ ಔಷಧ ಉತ್ಪನ್ನಗಳನ್ನು ರಫ್ತು ಮಾಡುವ
ಸಾಧ್ಯತೆ ಇದೆ.
ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.
ಎ. 1 ಮಾತ್ರ ಬಿ. 2‌ ಮಾತ್ರ
ಸಿ. 1 ಮತ್ತು 2 ಡಿ. ಮೇಲಿನ ಎರಡು ಹೇಳಿಕೆಗಳು ತಪ್ಪಾಗಿದೆ.
(ಉತ್ತರ : ಸಿ)

****

7. ಕೆಳಗಿನ ಯಾವ ಆಯೋಗದ ವರದಿಯ ನಂತರ ಜನರಲ್ ಡಯರ್ ಅವರನ್ನು ಬ್ರಿಟಿಷ್ ಸರ್ಕಾರದ ಸೇವೆಯಿಂದ
ವಜಾಗೊಳಿಸಲಾಯಿತು?
ಎ. ಹಂಟರ ಆಯೋಗ.
ಬಿ. ವಿಲ್ಲಿಂಗ್ ಟನ್ ಆಯೋಗ.
ಸಿ. ವಿಲಿಯಂ ಸನ್ ಆಯೋಗ.
ಡಿ. ಸೈಮನ್ ಆಯೋಗ.
(ಉತ್ತರ : ಎ)

****

8. ಕೆಳಗಿನ ಯಾವ ಸ್ವಾತಂತ್ರ್ಯ ಹೋರಾಟಗಾರರನ್ನು ರೌಲತ್ ಕಾಯ್ದೆಯ ಅಡಿಯಲ್ಲಿ ಬಂಧಿಸಿದ ಕಾರಣದಿಂದ ಜಲಿಯನ್
ವಾಲಾಬಾಗ್ ನಲ್ಲಿ ಸಭೆ ಸೇರಲಾಯಿತು?
1. ಸೈಫ್ಉದ್ದಿನ್ ಕಿಚ್ಚ ಲೀವ್.
2. ಡಾ ಸತ್ಯಪಾಲ್.3. ಮಹಾತ್ಮ ಗಾಂಧಿ.
4. ಸುಭಾಷ್ ಚಂದ್ರ ಬೋಸ್.
ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.
ಎ. 1 ಮಾತ್ರ ಬಿ. 2 ಮಾತ್ರ ‌
ಸಿ. 1 ಮತ್ತು 2 ಡಿ. 2 ಮತ್ತು 4
(ಉತ್ತರ : ಸಿ)

****

9. ಭಾರತ ಕೆಳಗಿನ ಯಾವ ರಾಷ್ಟ್ರವನ್ನು ಹಿಂದಿಕ್ಕಿ ಸೌರ ವಿದ್ಯುತ್ ಶಕ್ತಿ ಉತ್ಪಾದನೆಯಲ್ಲಿ ಮೂರನೇ ಸ್ಥಾನವನ್ನು ಅಲಂಕರಿಸಿದೆ?
ಎ. ಜಪಾನ್.
ಬಿ. ಅಮೆರಿಕ.
ಸಿ. ಫ್ರಾನ್ಸ್.
ಡಿ. ನೆದರ್ ಲ್ಯಾಂಡ್ಸ್.
(ಉತ್ತರ : ಎ)

****

10. ಕವಚ್ ಅಪಘಾತ ನಿಯಂತ್ರಣ ವ್ಯವಸ್ಥೆಯನ್ನು ಕೆಳಗಿನ ಯಾವ ಸಂಸ್ಥೆ ಅಭಿವೃದ್ಧಿಪಡಿಸಿದೆ?
ಎ. ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಜೇಷನ್.
ಬಿ. ರಿಸರ್ಚ್ ಡಿಸೈನ್ ಅಂಡ್ ಸ್ಟ್ಯಾಂಡರ್ಡ್ ಆರ್ಗನೈಸೇಷನ್.
ಸಿ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬಾಂಬೆ.
ಡಿ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಬೆಂಗಳೂರು.
(ಉತ್ತರ : ಬಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT