ಶನಿವಾರ, ಜನವರಿ 29, 2022
17 °C

ಉತ್ತರ ಕೇಂದ್ರ ರೈಲ್ವೆ | ವಿವಿಧ ಹುದ್ದೆಗಳಿಗೆ ಅರ್ಜಿ: ಡಿಸೆಂಬರ್‌ 25 ಕಡೆ ದಿನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೈಲ್ವೆ ಇಲಾಖೆಯ ಉತ್ತರ ಕೇಂದ್ರ ರೈಲ್ವೆ ವಿಭಾಗದಲ್ಲಿ ಕ್ರೀಡಾ ಕೋಟಾದಡಿಯಲ್ಲಿ ಖಾಲಿ ಇರುವ  ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು. 

ಸದರಿ ಹುದ್ದೆಗಳು ಗ್ರೂಪ್‌ ಸಿ ಹುದ್ದೆಗಳಾಗಿರುತ್ತವೆ. ಕ್ರಿಕೆಟ್, ಹಾಕಿ, ಬಾಸ್ಕೆಟ್‌ ಬಾಲ್‌, ಕುಸ್ತಿ, ಟೇಬಲ್‌ ಟೆನ್ನಿಸ್, ಹ್ಯಾಂಡ್‌ಬಾಲ್‌, ವಾಟರ್ ಪೊಲೊ ಕ್ರೀಡೆಗಳಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸರಬೇಕು. ಈ ಸಂಬಂಧದ ಹೆಚ್ಚಿನ ಮಾಹಿತಿಗೆ ಪಶ್ಚಿಮ ರೈಲ್ವೆಯ ವೆಬ್‌ಸೈಟ್‌ ನೋಡಬಹುದು. 

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ತುಂಬಿರಬೇಕು. ಗರಿಷ್ಠ 25 ವರ್ಷ ಮೀರಿರಬಾರದು

ಅಭ್ಯರ್ಥಿಗಳು ಎಸ್‌ಎಸ್‌ಎಲ್‌ ಹಾಗೂ ಪಿಯುಸಿಯಲ್ಲಿ ಪಾಸಾಗಿರಬೇಕು.

ಅಭ್ಯರ್ಥಿಗಳು https://www.rrcpryj.org ವೆಬ್‌ಸೈಟ್‌ಗೆ ಲಾಗಿನ್‌ ಆಗಿ ಅರ್ಜಿ ಸಲ್ಲಿಸಬೇಕು, ಅಗತ್ಯ ದಾಖಲೆಗಳನ್ನು ಸ್ಕ್ಯಾನ್‌ ಮಾಡಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಕಡೆ ದಿನ: 25-12-2021

ವೆಬ್‌ಸೈಟ್‌: https://www.rrcpryj.org

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು