ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

ಭಾಗ– 60
816. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ
ಎ) ಪರಿವರ್ತನಾ ಮಂಡಲ (Troposphere) ವಾಯುಮಂಡಲದ ಅತ್ಯಂತ ಕೆಳಪದರು ಆಗಿದೆ
ಬಿ) ಈ ವಲಯದಲ್ಲಿ ಮಾತ್ರ ಹವಾಮಾನದ ಎಲ್ಲಾ ಬದಲಾವಣೆಗಳು ಕಂಡುಬರುತ್ತವೆ
ಸಿ) ಈ ಮಂಡಲವು ರೇಡಿಯೊ ತರಂಗಗಳನ್ನು ಪುನಃ ಭೂಮಿಯ ಕಡೆಗೆ ಪ್ರತಿಫಲಿಸುತ್ತದೆ
ಸಂಕೇತಗಳು:
ಎ) ಎ ಮಾತ್ರ ಸರಿ
ಬಿ) ಎ ಮತ್ತು ಬಿ ಸರಿ
ಸಿ) ಎ ಮತ್ತು ಸಿ ಸರಿ
ಡಿ) ಎ, ಬಿ ಮತ್ತು ಸಿ ಸರಿ
817. ಇವುಗಳಲ್ಲಿ ಹಣದುಬ್ಬರ ನಿಯಂತ್ರಣದ ಕ್ರಮ?
ಎ) ತೆರಿಗೆ ಏರಿಸುವುದು
ಬಿ) ಸಾರ್ವಜನಿಕ ವೆಚ್ಚ ಹೆಚ್ಚಿಸುವುದು
ಸಿ) ಸಾರ್ವಜನಿಕ ವೆಚ್ಚ ಕಡಿತಗೊಳಿಸುವುದು
ಡಿ) ಹೆಚ್ಚುವರಿ ಮುಂಗಡ ಪತ್ರ ಮಂಡಿಸುವುದು
818. ಅಂತರರಾಷ್ಟ್ರೀಯ ಹಣಕಾಸು ನಿಗಮ (IFC) ಯಾವಾಗ ಸ್ಥಾಪನೆಯಾಯಿತು?
ಎ) 1976
ಬಿ) 1956
ಸಿ) 1988
ಡಿ) 1993
819. ಅಭಯ್ ಘಾಟ್ ಯಾರಿಗೆ ಸಂಬಂಧಿಸಿದೆ?
ಎ) ಮೊರಾರ್ಜಿ ದೇಸಾಯಿ
ಬಿ) ಚರಣ್ ಸಿಂಗ್
ಸಿ) ಲಾಲ್ ಬಹದ್ದೂರ್ ಶಾಸ್ತ್ರಿ
ಡಿ) ರಾಜೀವ್ ಗಾಂಧಿ
820. ಶಿವಪುರಿ ರಾಷ್ಟ್ರೀಯ ಉದ್ಯಾನ ಇರುವ ರಾಜ್ಯ
ಎ) ಗುಜರಾತ್
ಬಿ) ಉತ್ತರ ಪ್ರದೇಶ
ಸಿ) ಮಧ್ಯಪ್ರದೇಶ
ಡಿ) ತೆಲಂಗಾಣ
821. ‘ಥಾಲಿ’ ಯಾವ ರಾಜ್ಯದ ಜಾನಪದ ನೃತ್ಯ?
ಎ) ಮಣಿಪುರ
ಬಿ) ಹಿಮಾಚಲ ಪ್ರದೇಶ
ಸಿ) ಅಸ್ಸಾಂ
ಡಿ) ಸಿಕ್ಕಿಂ
822. ನೌಕಾದಳದ ಪ್ರಥಮ ಮುಖ್ಯಸ್ಥ
ಎ) ಜನರಲ್ ಮಾಣಿಕ್ ಶಾ
ಬಿ) ಎಸ್.ಮುಖರ್ಜಿ
ಸಿ) ಆರ್.ಡಿ.ಕಟಾರಿ
ಡಿ) ಕೆ.ಎಂ.ಕಾರಿಯಪ್ಪ
823. ಭಾರತದ ದೊಡ್ಡ ಸಸ್ಯೋದ್ಯಾನ ಯಾವುದು?
ಎ) ಲಾಲ್‌ಬಾಗ್, ಬೆಂಗಳೂರು
ಬಿ) ಬಟಾನಿಕಲ್ ಗಾರ್ಡನ್, ಊಟಿ
ಸಿ) ರಾಷ್ಟ್ರೀಯ ಸಸ್ಯೋದ್ಯಾನ, ಕೋಲ್ಕತ್ತಾ
ಡಿ) ಪರಾಹತ್ ಗಾರ್ಡನ್, ಉತ್ತರ ಪ್ರದೇಶ
824. ಮ್ಯಾಗ್ಸೆಸ್ಸೆ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ
ಎ) ಆಚಾರ್ಯ ವಿನೋಭಾ ಭಾವೆ
ಬಿ) ಸತ್ಯಜಿತ್ ರೇ
ಸಿ) ದಾದಾಬಾಯಿ ನವರೋಜಿ
ಡಿ) ರವೀಂದ್ರನಾಥ ಟ್ಯಾಗೋರ್
825. SEBI ವಿಸ್ತೃತ ರೂಪ
ಎ) Science and Engineering Board of India
ಬಿ) Securities and Exchange Board of India
ಸಿ) Social Equity Bureau of India
ಡಿ) Science and Educational Council
826. ಭಾರತದ ಅತಿದೊಡ್ಡ ವಾಣಿಜ್ಯ ಬ್ಯಾಂಕ್?
ಎ) Bank of Baroda
ಬಿ) State Bank of India
ಸಿ) ICICI Bank
ಡಿ) Bank of India
827. ಆರ್‌ಬಿಐ ಅನ್ನು ಯಾವಾಗ ಸ್ಥಾಪಿಸಲಾಯಿತು?
ಎ) 1935
ಬಿ) 1920
ಸಿ) 1928
ಡಿ) 1947
828. ಅಡಾಲ್ಫ್ ಹಿಟ್ಲರ್ ಈ ಕೆಳಕಂಡ ಯಾವ ಪಕ್ಷದ ನಾಯಕರಾಗಿದ್ದರು?
ಎ) ಲೇಬರ್ ಪಾರ್ಟಿ
ಬಿ) ನಾಜಿ ಪಕ್ಷ
ಸಿ) ಕು-ಕ್ಲುಕ್ಸ್-ಕ್ಲಾನ್
ಡಿ) ಡೆಮಾಕ್ರಟಿಕ್ ಪಕ್ಷ
829. ‘ಕರ್ನಾಟಕ ಸಂಗೀತ ಪಿತಾಮಹ’ ಎಂದು ಯಾರನ್ನು ಕರೆಯುತ್ತಾರೆ?
ಎ) ಕನಕದಾಸರು
ಬಿ) ಪುರಂದರದಾಸರು
ಸಿ) ರಾಘವಾಂಕ
ಡಿ) ಕುಮಾರವ್ಯಾಸ
830. ‘ಅಂಕಾರಾ’ ಯಾವ ದೇಶದ ರಾಜಧಾನಿ?
ಎ) ಉರುಗ್ವೆ
ಬಿ) ಟರ್ಕಿ
ಸಿ) ಉಗಾಂಡಾ
ಡಿ) ಕಜಕಸ್ತಾನ್
ಭಾಗ 59ರ ಉತ್ತರಗಳು: 801. ಎ, 802. ಎ, 803. ಎ, 804. ಸಿ, 805. ಸಿ, 806. ಸಿ, 807. ಎ, 808. ಡಿ, 809. ಸಿ, 810. ಡಿ, 811. ಎ, 812. ಡಿ, 813. ಸಿ, 814. ಎ, 815. ಬಿ
(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.