ಬೆಂಗಳೂರು: ‘ನಾನ್ ಟೆಕ್ನಿಕಲ್ ಅಂಡರ್ ಗ್ರಾಜ್ಯುಯೇಟ್’ ವಿಭಾಗದಲ್ಲಿ 3,445 ಹುದ್ದೆಗಳಿಗೆ ರೈಲ್ವೆ ನೇಮಕಾತಿ ಮಂಡಳಿಗಳಿಂದ (RRBs) ನೇಮಕಾತಿ ನಡೆಯುತ್ತಿದೆ.
ಟಿಕೆಟ್ ಕ್ಲರ್ಕ್ 2022, ಅಕೌಂಟ್ಸ್ ಕ್ಲರ್ಕ್ 361, ಜೂನಿಯರ್ ಕ್ಲರ್ಕ್ 990 ಮತ್ತು ಟ್ರೈನ್ಸ್ ಕ್ಲರ್ಕ್ 72 ಒಟ್ಟು ನಾಲ್ಕು ಪ್ರಕಾರದ 3,445 ಹುದ್ದೆಗಳಿವೆ.
ಪಿಯುಸಿ (10+2) ಪಾಸಾಗಿರುವ ಅರ್ಹ ಪುರುಷ, ಮಹಿಳೆ ಹಾಗೂ ಲಿಂಗತ್ವ ಅಲ್ಪಸಂಖ್ಯಾತರು ಅರ್ಜಿ ಸಲ್ಲಿಸಬಹುದು. ಅಕ್ಟೋಬರ್ 20 ಅರ್ಜಿ ಸಲ್ಲಿಸಲು ಕಡೆಯ ದಿನ. RRB ಬೆಂಗಳೂರು ವ್ಯಾಪ್ತಿಗೆ 60 ಹುದ್ದೆಗಳಿವೆ.
ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ₹500, ಎಸ್.ಸಿ/ಎಸ್‌ಟಿ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ₹250 ಶುಲ್ಕವಿದೆ.
18 ರಿಂದ 33 ವರ್ಷ ವಯೋಮಾನದವರು ಅರ್ಜಿ ಸಲ್ಲಿಸಲು ಅರ್ಹರು. ಎಸ್.ಸಿ, ಎಸ್‌ಟಿ, ಒಬಿಸಿ, ಇತರೆ ಅಭ್ಯರ್ಥಿಗಳಿಗೆ ವಯೋಮಾನದಲ್ಲಿ ಸಡಿಲಿಕೆ ಇದೆ.
ಎರಡು ಹಂತದ ಕಂಪ್ಯೂಟರ್ ಬೇಸ್ಡ್ ಟೆಸ್ಟ್ (ಸಿಬಿಟಿ) ಮತ್ತು ದಾಖಲಾತಿಗಳ ಪರಿಶೀಲನೆ ಮೂಲಕ ಭರ್ತಿ ಮಾಡಲಾಗುತ್ತದೆ.
ಆಸಕ್ತ ಅಭ್ಯರ್ಥಿಗಳು ತಮ್ಮ ವ್ಯಾಪ್ತಿಯ ರೈಲ್ವೆ ಮಂಡಳಿ ವೆಬ್‌ಸೈಟ್‌ಗೆ ಭೇಟಿ ನೀಡಿ (RRB ಬೆಂಗಳೂರು ವೆಬ್‌ಸೈಟ್ www.rrbbnc.gov.in) ಹುದ್ದೆಗಳ ವರ್ಗೀಕರಣ, ಪರೀಕ್ಷಾ ಪಠ್ಯಕ್ರಮ ಹಾಗೂ ಇತರೆ ಹೆಚ್ಚಿನ ಮಾಹಿತಿಗೆ ಅಧಿಸೂಚನೆ ನೋಡಿಕೊಂಡು ಅರ್ಜಿ ಸಲ್ಲಿಸಬಹುದು.