ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ ಅಂಕಣ: ಬಿ.ಎಸ್ಸಿಯಲ್ಲಿ ’ಐಟಿ’ ಕೋರ್ಸ್‌ಗಳು ಯಾವುವು?

ಪ್ರದೀಪ್ ಕುಮಾರ್ ವಿ. ಅಂಕಣ
Published 4 ಜೂನ್ 2023, 23:47 IST
Last Updated 4 ಜೂನ್ 2023, 23:47 IST
ಅಕ್ಷರ ಗಾತ್ರ

1. ನಾನು ಎನ್‌ಇಪಿ ಪಠ್ಯಕ್ರಮದಂತೆ ಬಿ.ಎಸ್ಸಿ (ಭೌತ ವಿಜ್ಞಾನ ಮತ್ತು ರಸಾಯನ ವಿಜ್ಞಾನ ) ಎರಡನೇ ವರ್ಷದಲ್ಲಿ ಓದುತ್ತಿದ್ದೇನೆ. ಮುಂದೇನು ಮಾಡಬಹುದು ? ಹಾಗೆಯೇ, ನನಗೆ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಸರ್ಕಾರಿ ನೌಕರಿ ಪಡೆದುಕೊಳ್ಳುವ ಆಸೆಯಿದೆ. ಮಾರ್ಗದರ್ಶನ ನೀಡಿ.

ಹೆಸರು, ಊರು ತಿಳಿಸಿಲ್ಲ. 

ಬಿ.ಎಸ್ಸಿ ಪದವಿಯ ನಂತರ ಉನ್ನತ ಶಿಕ್ಷಣ ಅಥವಾ ವೃತ್ತಿಯನ್ನು ಅರಸುವ ವೈವಿಧ್ಯಮಯ ಮತ್ತು ಆಕರ್ಷಕ ಅವಕಾಶಗಳಿವೆ.

ನಾಲ್ಕು ವರ್ಷದ ಬಿ.ಎಸ್ಸಿ ಪದವಿಯ ನಂತರ ಹೆಚ್ಚಿನ ತಜ್ಞತೆಗಾಗಿ ಪಿಎಚ್.ಡಿ/ಎಂ.ಎಸ್ಸಿ ಮಾಡಿ ಕಾಲೇಜು/ವಿಶ್ವವಿದ್ಯಾಲಯಗಳಲ್ಲಿ ಭೋಧಿಸಬಹುದು ಅಥವಾ ಕೆಲವು ಪ್ರತಿಷ್ಠಿತ ಸಂಸ್ಥೆಗಳಾದ ಇಸ್ರೊ, ಬಿಎಆರ್‌ಸಿ, ಸಿಎಸ್‌ಐಆರ್, ಡಿಆರ್‌ಡಿಒ, ಟಿಐಎಫ್‌ಆರ್ ಮುಂತಾದ ಸಂಸ್ಥೆಗಳಲ್ಲಿ ನೌಕರಿಯನ್ನು ಅರಸಬಹುದು.
ಮೂರು ವರ್ಷದ ಬಿ.ಎಸ್ಸಿ ಮುಗಿಸಿದ ನಂತರ ನಿಮಗಿಷ್ಟವಿರುವ ಸರ್ಕಾರಿ ವಲಯದ ನೌಕರಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಅರಸಬಹುದು. ಉದಾಹರಣೆಗೆ, ಯುಪಿಎಸ್‌ಸಿ, ಕೆಪಿಎಸ್‌ಸಿ, ಎಸ್‌ಎಸ್‌ಸಿ-ಸಿಜಿಎಲ್, ಐಬಿಪಿಎಸ್ (ಬ್ಯಾಂಕಿAಗ್), ಆರ್‌ಆರ್‌ಬಿ-ಎನ್‌ಟಿಪಿಸಿ (ರೈಲ್ವೇಸ್) ಮುಂತಾದ ಕ್ಷೇತ್ರಗಳಲ್ಲಿ ಅವಕಾಶಗಳಿದ್ದು, ಈ ಪರೀಕ್ಷೆಗಳ ಮಾದರಿ, ಪಠ್ಯಕ್ರಮ ಇತ್ಯಾದಿಗಳನ್ನು ಅರಿತು ಕಾರ್ಯತಂತ್ರವನ್ನು ರೂಪಿಸಬೇಕು. 
ಈ ಎಲ್ಲಾ ವೃತ್ತಿಗಳ ಯಶಸ್ಸಿಗೆ ಬೇಕಾಗುವ ಅಭಿರುಚಿ, ಆಸಕ್ತಿ ಮತ್ತು ಕೌಶಲಗಳಲ್ಲಿ ವ್ಯತ್ಯಾಸವಿದೆ ಎನ್ನುವುದು ನಿಮ್ಮ ಗಮನದಲ್ಲಿರಲಿ. ಆದ್ದರಿಂದ, ಈ ಆಯ್ಕೆಗಳಲ್ಲಿ ನಿಮಗೆ ಯಾವುದು ಸೂಕ್ತ ಎಂದು ಪರಿಶೀಲಿಸಿ, ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳುವುದು ಸೂಕ್ತ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:


https://www.youtube.com/watch?v=MHnPg_sp6E0

2. ನಾನು ಪಿಯುಸಿ ಮುಗಿಸಿ ಬಿ.ಎಸ್ಸಿ ಕೋರ್ಸನ್ನು ಕಂಪ್ಯೂಟರ್ ಸೈನ್ಸ್/ಐಟಿ ಕ್ಷೇತ್ರದಲ್ಲಿ ಮಾಡಬಯಸುತ್ತೇನೆ. ಉತ್ತಮವಾದ ಆಯ್ಕೆ ಯಾವುದು?

ಹೆಸರು, ಊರು ತಿಳಿಸಿಲ್ಲ. 

ಬಿ.ಎಸ್ಸಿ ಕೋರ್ಸಿನಲ್ಲಿ ಐಟಿ ಕ್ಷೇತ್ರಕ್ಕೆ ಸಂಬಂಧಿಸಿದ ಮತ್ತು ಬಿ.ಟೆಕ್‌ಗೆ ಉತ್ತಮವಾದ ಪರ್ಯಾಯ ಎನ್ನಬಹುದಾದ ಅನೇಕ ಕೋರ್ಸ್ ಆಯ್ಕೆಗಳಿವೆ. ಉದಾಹರಣೆಗೆ, ಬಿ.ಎಸ್ಸಿ ಕೋರ್ಸನ್ನು ಕಂಪ್ಯೂಟರ್ ಸೈನ್ಸ್, ಐಟಿ, ಡೇಟಾ ಸೈನ್ಸ್, ಸೈಬರ್ ಸೆಕ್ಯೂರಿಟಿ, ಇನ್‌ಫರ್ಮೇಷನ್ ಸಿಸ್ಟಮ್, ಬಯೋ ಇನ್‌ಫರ್‌ಮೆಟಿಕ್ಸ್, ಮಲ್ಟಿಮೀಡಿಯ, ಕ್ಲೌಡ್ ಕಂಪ್ಯೂಟಿAಗ್, ಬಿಗ್ ಡೇಟಾ ಮುಂತಾದ ವಿಷಯಗಳಲ್ಲಿ ಮಾಡಬಹುದು. ಈ ಆಯ್ಕೆಗಳು ಕೆಲವು ಪ್ರತಿಷ್ಠಿತ ಕಾಲೇಜುಗಳಲ್ಲಿ ಮಾತ್ರ ಲಭ್ಯವಿರುತ್ತದೆ.

ನಿಮ್ಮ ಆಸಕ್ತಿ ಮತ್ತು ಅಭಿರುಚಿಗೆ ಒಪ್ಪುವ ವೃತ್ತಿ/ಕೋರ್ಸ್ ಆಯ್ಕೆ ಮಾಡಿ,  ಪಠ್ಯದ ಆಳ, ಅಗಲ ಮತ್ತು ಪರಿಮಿತಿಯನ್ನು ಅರಿತು, ವೃತ್ತಿಯ ಅವಶ್ಯಕತೆಗೆ ತಕ್ಕಂತೆ ಹೆಚ್ಚುವರಿ ಅರೆಕಾಲಿಕ/ಡಿಪ್ಲೊಮಾ ಕೋರ್ಸ್ ಮಾಡಿ, ಯಶಸ್ಸಿಗೆ ಬೇಕಾಗುವ ತಜ್ಞತೆ ಮತ್ತು ಕೌಶಲಗಳನ್ನು ಪಡೆದುಕೊಳ್ಳ್ಳಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:

https://www.youtube.com/watch?v=ABkhf_hiHfw

3. ನಾನು ಪಿಯುಸಿ ಮುಗಿಸಿ ಬಿಕಾಂ ಮಾಡಬೇಕು. ಕಾಲೇಜಿಗೆ ಹೋದಾಗ ಅನೇಕ ಆಯ್ಕೆಗಳಿದ್ದು, ಯಾವುದನ್ನು ತೆಗೆದುಕೊಳ್ಳುವುದೆಂಬ ಗೊಂದಲವಿದೆ. ದಯವಿಟ್ಟು ಮಾರ್ಗದರ್ಶನ ನೀಡಿ.

ಹೆಸರು, ಊರು ತಿಳಿಸಿಲ್ಲ.

ಇತ್ತೀಚಿನ ವರ್ಷಗಳಲ್ಲಿ ಬಿಕಾಂಗೆ ಬೇಡಿಕೆ ಹೆಚ್ಚಾಗಿದೆ. ಏಕೆಂದರೆ, ಕಾಮರ್ಸ್ಗೆ ಸಂಬAಧಿಸಿದ ವ್ಯಾಪಾರ, ಉದ್ದಿಮೆಗಳು, ಬ್ಯಾಂಕಿಂಗ್, ಇನ್‌ಶ್ಯೂರೆನ್ಸ್, ಸ್ಟಾಕ್ ಮಾರ್ಕೆಟ್ಸ್, ಮ್ಯೂಚುಯಲ್ ಫಂಡ್ಸ್, ಇನ್ವೆಸ್ಟ್‌ಮೆಂಟ್ಸ್‌ ಮುಂತಾದ ಅಭಿವೃದ್ಧಿಯಾಗಿರುವ ಕ್ಷೇತ್ರಗಳಿವೆ. ಹಾಗಾಗಿ, ಅಗತ್ಯವಾದ ಜ್ಞಾನ ಮತ್ತು ವೃತ್ತಿಪರ ಕೌಶಲಗಳನ್ನು ನೀಡಿ, ಈ ಕ್ಷೇತ್ರದ ಮಾನವ ಸಂಪನ್ಮೂಲದ ಬೇಡಿಕೆಯನ್ನು ಪೂರೈಸಲು, ಬಿಕಾಂ ಕೋರ್ಸ್ ಸುಮಾರು ಹತ್ತು ವಿಭಾಗಗಳಲ್ಲಿ ಲಭ್ಯ. ಹಾಗಾಗಿ, ಬಿಕಾಂ ಕೋರ್ಸನ್ನು ಜನರಲ್, ಆನರ್ಸ್, ಬ್ಯಾಂಕಿಂಗ್ ಅಂಡ್ ಇನ್‌ಶೂರೆನ್ಸ್‌  ಫೈನಾನ್ಷಿಯಲ್ ಮಾರ್ಕೆಟ್ಸ್,  ಅಕೌಂಟಿಂಗ್ ಮತ್ತು ಟ್ಯಾಕ್ಷೇಷನ್, ಇಂಟರ್ ನ್ಯಾಷನಲ್ ಫೈನಾನ್ಸ್, ಟೂರಿಸಮ್ ಅಂಡ್ ಟ್ರಾವೆಲ್, ಎಕನಾಮಿಕ್ಸ್, ಇ ಕಾಮರ್ಸ್ ಮುಂತಾದ ವಿಭಾಗಗಳಲ್ಲಿ, ನಿಮ್ಮ ಆಸಕ್ತಿ, ಅಭಿರುಚಿಯಂತೆ ಮಾಡಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:
https://www.youtube.com/watch?v=jmijSoqBDVw

4. ನಾನು ಪಿಯುಸಿ ಮುಗಿಸಿ ಎಂಜಿನಿಯರಿಂಗ್ ಮಾಡಲು ಯೋಚಿಸಿದ್ದೇನೆ. ಮುಂದಿನ ವರ್ಷಗಳಲ್ಲಿ, ಯಾವ ವಿಭಾಗಕ್ಕೆ ಹೆಚ್ಚಿನ ಬೇಡಿಕೆ ಇರುತ್ತದೆ?

ಹೆಸರು, ಊರು ತಿಳಿಸಿಲ್ಲ.

ಈಗ, ಎಂಜಿನಿಯರಿಂಗ್‌ನಲ್ಲಿ ಸುಮಾರು 50ಕ್ಕೂ ಹೆಚ್ಚು  ಆಯ್ಕೆಗಳಿದ್ದು, ನಿಮ್ಮ ಆಸಕ್ತಿ, ಅಭಿರುಚಿಯಂತೆ ವಿಭಾಗವನ್ನು ಆಯ್ಕೆ ಮಾಡುವುದು ಸೂಕ್ತ.  ನಮ್ಮ ಅಭಿಪ್ರಾಯದಂತೆ ಎಂಜಿನಿಯರಿಂಗ್ ಕ್ಷೇತ್ರದ ಎಐ, ಮೆಷಿನ್ ಲರ್ನಿಂಗ್, ಡೇಟಾ ಸೈನ್ಸ್, ಅನಾಲಿಟಿಕ್ಸ್, ಸೈಬರ್ ಸೆಕ್ಯೂರಿಟಿ, ರೊಬೋಟಿಕ್ಸ್, ನವೀಕರಿಸಬಹುದಾದ ಇಂಧನ (ರಿನ್ಯೂಯಬಲ್ ಎನರ್ಜಿ), ಕಂಪ್ಯೂಟರ್ ಸೈನ್ಸ್, ಪರಿಸರ (ಎನ್ವಿರಾನ್‌ಮೆಂಟಲ್), ಬಯೋಮೆಡಿಕಲ್ ಮುಂತಾದ ವಿಭಾಗಗಳ ಪದವೀಧರರಿಗೆ ಹೆಚ್ಚು ಬೇಡಿಕೆಯಿರುತ್ತದೆ ಎಂದು ನಿರೀಕ್ಷಿಸಬಹುದು. ಇದರರ್ಥ, ಇನ್ನಿತರ ವಿಭಾಗಗಳಿಗೆ ಬೇಡಿಕೆ ಇರುವುದಿಲ್ಲ ಎಂದಲ್ಲ. ಎಂಜಿನಿಯರಿಂಗ್ ಕ್ಷೇತ್ರದ ಎಲ್ಲಾ ವಿಭಾಗಗಳಿಗೆ ಬೇಡಿಕೆ ಇರುತ್ತದೆಯಾದರೂ, ವಿಶೇಷವಾಗಿ ಇನ್ನಿತರ ವಿಭಾಗಗಳ ವಿದ್ಯಾರ್ಥಿಗಳು ಜ್ಞಾನಾರ್ಜನೆಯ ಜೊತೆಗೆ ವೃತ್ತಿಪರ ವ್ಯಕ್ತಿತ್ವ ಮತ್ತು ಕೌಶಲಗಳೊಂದಿಗೆ, ಉತ್ತಮ ಫಲಿತಾಂಶದಿಂದ ತೇರ್ಗಡೆಯಾಗಬೇಕು. ಹಾಗೂ, ಮೂಲ ಸೌಕರ್ಯಗಳು ಮತ್ತು ಕ್ಯಾಂಪಸ್ ನೇಮಕಾತಿಯಿರುವ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಅಧ್ಯಯನ ಮಾಡುವುದರಿಂದ, ಭವಿಷ್ಯವನ್ನು ರೂಪಿಸಿಕೊಳ್ಳಲು ಸುಲಭವಾಗುತ್ತದೆ. 

5. ನಾನು ಬಿಎ ಪದವಿಯ ನಂತರ ಐಎಎಸ್ ಮಾಡಬೇಕೆಂದುಕೊಂಡಿದ್ದೇನೆ. ಮುಖ್ಯ ಪರೀಕ್ಷೆಯ ಐಚ್ಛಿಕ ವಿಷಯವನ್ನು ಆಯ್ಕೆ ಮಾಡುವುದು ಹೇಗೆ?

ಹೆಸರು, ಊರು ತಿಳಿಸಿಲ್ಲ.

ಪದವಿ ಪರೀಕ್ಷೆಗೆ ನೀವು ಓದಿರುವ ಅಥವಾ ಇಷ್ಟಪಟ್ಟಿರುವ ವಿಷಯಗಳನ್ನು ಗಮನಿಸಿ. ಇದರ ಜೊತೆಗೆ, ಹಿಂದಿನ ಪರೀಕ್ಷೆಗಳಲ್ಲಿ ಯಶಸ್ವಿಯಾದ ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡಿದ್ದ ವಿಷಯಗಳನ್ನು ಪರಿಶೀಲಿಸಿ, ವೃತ್ತಿಯ ಗುರಿಗೆ ಅನುಗುಣವಾಗಿ, ಯಾವ ವಿಷಯ ಸೂಕ್ತ ಎಂದು ನಿರ್ಧರಿಸಬಹುದು.

ಮೇಲ್ನೋಟಕ್ಕೆ, ಕಲಾ ವಿಭಾಗದ ಅಭ್ಯರ್ಥಿಯಾದ ನಿಮಗೆ ಸಮಾಜ ಶಾಸ್ತ್ರ, ಇತಿಹಾಸ, ಭೂಗೋಳ, ಸಾರ್ವಜನಿಕ ಆಡಳಿತ ಮುಂತಾದ ವಿಷಯಗಳು ಸೂಕ್ತವಾಗಬಹುದು. ವಿಷಯ ಯಾವುದಿದ್ದರೂ ಪಠ್ಯಕ್ರಮವನ್ನು ಅರಿತು, ಪುಸ್ತಕಗಳು ಮತ್ತು ಅಧ್ಯಯನದ ಸಾಮಗ್ರಿಯನ್ನು ಸಿದ್ದಪಡಿಸಿಕೊಳ್ಳಬೇಕು. ಪ್ರಮುಖವಾಗಿ, ಓದುವಿಕೆ ಪರಿಣಾಮಕಾರಿಯಾಗಿರಬೇಕು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=3PzmKRaJHmk

ವಿದ್ಯಾರ್ಥಿಗಳೇ, ನಿಮ್ಮ ಮುಂದಿನ
ಕೋರ್ಸ್‌ ಮತ್ತು ಸೂಕ್ತವಾದ ವೃತ್ತಿಯ ಆಯ್ಕೆ ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳುವ ಬಗ್ಗೆ ಗೊಂದಲಗಳಿವೆಯೇ? ಹಾಗಿದ್ದರೆ ನಮಗೆ ಬರೆಯಿರಿ. ನಿಮ್ಮ ಪ್ರಶ್ನೆಗಳಿಗೆ ಶಿಕ್ಷಣತಜ್ಞ ಮತ್ತು ವೃತ್ತಿ ಸಲಹೆಗಾರ ವಿ. ಪ್ರದೀಪ್ ಕುಮಾರ್ ಉತ್ತರಿಸಲಿದ್ದಾರೆ.
ಪ್ರಶ್ನೆಗಳನ್ನು shikshana@prajavani.co.in ಗೆ ಕಳಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT