ಗುಜರಾತ್‌ನ ಪುಟ್ಟ ಊರಿನ ಸರ್ಕಾರಿ ಶಾಲೆಯೊಂದು ಚೆಸ್ ಆಟದಲ್ಲಿ ದೇಶದ ಗಮನ ಸೆಳೆದಿದೆ
ಉತ್ತರಪ್ರದೇಶದ ಜೌನ್‌ಪುರ ಜಿಲ್ಲೆಯ ಮಾಧೋಪಟ್ಟಿ ಎಂಬ ಗ್ರಾಮದಿಂದ 45ಕ್ಕೂ ಹೆಚ್ಚು ಐಎಎಸ್ ಐಪಿಎಸ್ ಇನ್ನಿತರ ಅಧಿಕಾರಿಗಳಾಗಿದ್ದಾರೆ. ಒಂದು ಗ್ರಾಮಕ್ಕೆ ಉನ್ನತ ಅಧಿಕಾರಿಗಳನ್ನು ಸೃಷ್ಟಿಸಲು ಆಗುವುದಾದರೆ ನಮಗ್ಯಾಕೆ ಗ್ರ್ಯಾಂಡ್ ಮಾಸ್ಟರ್‌ಗಳು ಚೆಸ್ ಚಾಂಪಿಯನ್‌ಗಳನ್ನು ಹುಟ್ಟುಹಾಕಲು ಸಾಧ್ಯವಿಲ್ಲ? 50 ಗ್ರ್ಯಾಂಡ್ ಮಾಸ್ಟರ್‌ಗಳು ಮತ್ತು 10 ವಿಶ್ವ ಚಾಂಪಿಯನ್‌ಗಳನ್ನು ರೂಪಿಸಬೇಕು ಎಂಬುದು ನನ್ನ ಗುರಿ. ಇದು ದೊಡ್ಡ ಮಹತ್ವಾಕಾಂಕ್ಷೆ ಎಂದೆನಿಸಬಹುದು. ಆದರೆ ಸಾಧಿಸಲು ಖಂಡಿತ ಸಾಧ್ಯವಿದೆ.