ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್ ಶಿಕ್ಷಣಕ್ಕೆ ವಿದ್ವತ್ ಕೊಡುಗೆ

Last Updated 30 ಸೆಪ್ಟೆಂಬರ್ 2018, 19:45 IST
ಅಕ್ಷರ ಗಾತ್ರ

ಕಲಿಕೆಗೆ ಅಂತ್ಯ ಎಂಬುದಿಲ್ಲ. ಇದು ಸದಾ ಹರಿಯುವ ನೀರಿದ್ದಂತೆ. ನೀರಿನಂತೆ ನಾವು ಕಲಿಕೆಯೆಂಬ ಸಾಗರದಲ್ಲಿ ಹರಿಯುತ್ತಲೇ ಇರಬೇಕು ಎನ್ನುತ್ತಾರೆ ಹಿರಿಯರು. ಕಾಲ ಬದಲಾದಂತೆ ಶಿಕ್ಷಣದ ಸ್ವರೂಪವು ಬದಲಾಗಿದೆ.ಹಿಂದೆಲ್ಲಾ ಕಪ್ಪುಹಲಗೆಯ ಮೇಲೆ ಬಳಪ ಬಳಸಿ ಬರೆಯುತ್ತಿದ್ದ ಕಾಲ ಬದಲಾಗಿ ಇಂದು ರಿಮೋಟ್‌ ಹಿಡಿದು ಪರದೆಯ ಮೇಲೆ ಮೂಡುವ ಅಕ್ಷರವನ್ನು ಕಲಿಸುವ ಹಂತಕ್ಕೆ ಶಿಕ್ಷಣ ಬಂದಿದೆ. ಈ ಬದಲಾವಣೆಗೆ ಕಾರಣ ತಂತ್ರಜ್ಞಾನ.

ತಂತ್ರಜ್ಞಾನವು ನಮ್ಮನ್ನು ಎಷ್ಟರ ಮಟ್ಟಿಗೆ ಆವರಿಸಿದೆ ಎಂದರೆ ನಮ್ಮ ಪ್ರತಿ ಕೆಲಸ–ಕಾರ್ಯಗಳಲ್ಲೂ ತಂತ್ರಜ್ಞಾನ ಜೊತೆಯಾಗುತ್ತದೆ. ಈ ತಂತ್ರಜ್ಞಾನ ಶಿಕ್ಷಣ ಕ್ಷೇತ್ರದಲ್ಲೂ ಅನೇಕ ಬದಲಾವಣೆಗಳನ್ನು ತಂದಿದೆ. ಈ ಬದಲಾವಣೆಯಲ್ಲಿ ತಮ್ಮದೂ ಒಂದು ಕೊಡುಗೆಯಿರಬೇಕು ಎಂಬ ಉದ್ದೇಶದೊಂದಿಗೆ ಹುಟ್ಟಿ ಕೊಂಡಿದ್ದು ‘ವಿದ್ವತ್‌ ಸಂಸ್ಥೆ’.

2013ರಲ್ಲಿ ಆರಂಭವಾದ ಈ ಸಂಸ್ಥೆ ಇಲ್ಲಿಯವರೆಗೆ ನಮ್ಮ ರಾಜ್ಯದ ಅನೇಕ ಕನ್ನಡ ಮಾಧ್ಯಮ ಹಾಗೂ ಉರ್ದು ಶಾಲೆಯ ಮಕ್ಕಳಿಗೆ ಸರ್ಕಾರದ ನೆರವಿನೊಂದಿಗೆ ಉಚಿತವಾಗಿ ಟಾಬ್ಲೆಟ್‌ ಹಾಗೂ ಎಲ್‌ಇಡಿ ಬೋರ್ಡ್‌ಗಳನ್ನು ನೀಡುತ್ತಿದೆ.

‘ಕಲಿಕೆ ಎನ್ನುವುದು ಆರಂಭವಾಗುವುದು ತಾಯ್ನುಡಿಯಿಂದ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತಾಗುವುದು ತಾಯಿಭಾಷೆಯಲ್ಲಿ ಕಲಿತಾಗ ಮಾತ್ರ. ತಿಳಿದಿರುವ ನುಡಿಯಲ್ಲಿ ತಿಳಿಯದ ವಿಷಯಗಳನ್ನು ಕಲಿಸುವುದರಿಂದ ಮಕ್ಕಳಿಗೆ ಕಲಿಯಲು ಸುಲಭವಾಗುತ್ತದೆ. ಆದ್ದರಿಂದ ಮಾತೃಭಾಷೆಯಲ್ಲಿಯೇ ಕಲಿಕೆಯನ್ನು ಆರಂಭಿಸುವುದು ಹೆಚ್ಚು ಸೂಕ್ತ’ ಎನ್ನುವುದು ವಿದ್ವತ್ ಸಂಸ್ಥೆಯ ಅಭಿಪ್ರಾಯ

ಮಾತೃಭಾಷೆಯ ಪ್ರೇಮದ ಸೆಲೆ

ಮಾತೃಭಾಷೆಯ ಮೇಲಿನ ಅಭಿಮಾನದಿಂದ ವಿದ್ವತ್ ಸಂಸ್ಥೆ ಸರ್ಕಾರಿ ಹಾಗೂ ಕನ್ನಡ ಮಾಧ್ಯಮ ಶಾಲೆಗಳಿಗೆ ಡಿಜಿಟಲ್ ಶಿಕ್ಷಣ ನೀಡುತ್ತಿದೆ. ‘ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಬಹುತೇಕ ಖಾಸಗಿ ಹಾಗೂ ಶ್ರೀಮಂತ ಶಾಲೆಗಳಲ್ಲಿ ಡಿಜಿಟಲ್ ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ. ಆದರೆ ಸರ್ಕಾರಿ ಶಾಲೆಗಳಿಗೆ ಈ ಸೌಲಭ್ಯವಿರಲಿಲ್ಲ. ಇದೆಲ್ಲವನ್ನು ಮನಗಂಡ ನಾವುಕನ್ನಡ ಮಾಧ್ಯಮದಲ್ಲಿ ಡಿಜಿಟಲ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆವು’ ಎನ್ನುತ್ತಾ ಮಾತೃಭಾಷೆಯ ಮೇಲಿನ ಪ್ರೇಮವನ್ನು ವ್ಯಕ್ತಪಡಿಸುತ್ತಾರೆ ವಿದ್ವತ್ ಸಂಸ್ಥೆಯ ಸದಸ್ಯರು.

ಇವರ ಕನಸಿಗೆ ಕೈ ಜೋಡಿಸಿದ್ದು ಕರ್ನಾಟಕ ಸರ್ಕಾರ. ಮೊದಲು ಕರ್ನಾಟಕ ಸರ್ಕಾರ ಇ–ಲರ್ನಿಂಗ್ ಯೋಜನೆಯಡಿರಾಜ್ಯದ ಉರ್ದು ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಹಾಗೂ ಉರ್ದು ತಂತ್ರಾಂಶಗಳನ್ನು ನೀಡಿತ್ತು ಈ ಸಂಸ್ಥೆ. ನಂತರದ ದಿನಗಳಲ್ಲಿಕನ್ನಡ ಮಾಧ್ಯಮದಲ್ಲಿ ಇ-ಲರ್ನಿಂಗ್‍ನ್ನು ಪರಿಚಯಿಸಿತು.

ಕೇವಲ ಲಾಭದ ದೃಷ್ಟಿಯಿಂದ ಮಾತ್ರವಲ್ಲದೇ ಕನ್ನಡ ಶಾಲೆಗಳಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ತಂತ್ರಾಂಶವನ್ನು ಅಭಿವೃದ್ಧಿಗೊಳಿಸಿದ್ದರು. ಈ ಸೌಲಭ್ಯವನ್ನು ಕೇವಲ ಖಾಸಗಿ ಶಾಲೆಗಳಿಗೆ ಮಾತ್ರ ಮೀಸಲಾಗಿರದೆ ಸರ್ಕಾರಿ, ಅನುದಾನಿತ ಮತ್ತು ಇತರೆ ಶಾಲೆಗಳಿಗೂ ಒದಗಿಸಲಾಗಿದ್ದು, ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆಯುವಂತೆ ಮಾಡಿದೆ ಈ ಸಂಸ್ಥೆ.

ವಿದ್ವತ್ ಸಂಸ್ಥೆಯು ಅಭಿವೃದ್ಧಿ ಪಡಿಸಿದ ತಂತ್ರಾಂಶಕ್ಕೆ ದೊರೆತಂತಹ ಪ್ರತಿಕ್ರಿಯೆಯಿಂದಾಗಿ ಕನ್ನಡ ಮಾಧ್ಯಮದಲ್ಲಿನ ಐದು ವಿಷಯಗಳಿಗೆ ಸಂಬಂಧಿಸಿದಂತೆ ಪಠ್ಯವಸ್ತುವನ್ನು ದೃಶ್ಯಮಾಧ್ಯಮದ ಮೂಲಕ ಅಭಿವೃದ್ಧಿಪಡಿಸಲು ಪ್ರಾರಂಭಿಸಿತು. ಕೇವಲ ಉರ್ದು ಮತ್ತು ಕನ್ನಡ ಮಾಧ್ಯಮಗಳಲ್ಲದೇ ಇಂಗ್ಲಿಷ್‌ ಮಾಧ್ಯಮದಲ್ಲಿಯು ಕೂಡ ಇ-ಲರ್ನಿಂಗ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ.

ಇಷ್ಟಕ್ಕೇ ಸೀಮಿತವಾಗಿರದೆ ಬೇರೆ ಬೇರೆ ಜ್ಞಾನಶಾಖೆಗಳಲ್ಲಿ ಕಂಡು ಬರುವಂತಹ ಹೊಸ ಅನ್ವೇಷಣೆಗಳನ್ನು ಶಿಕ್ಷಣ ಕ್ಷೇತ್ರದಲ್ಲಿಯೂ ವಿದ್ವತ್ ಸಂಸ್ಥೆ ಅಳವಡಿಸಿದೆ. ಇದಕ್ಕೆ ಒಂದು ಉತ್ತಮ ನಿದರ್ಶನವೆಂದರೆ ವೈರ್‍ಲೆಸ್ ಡಿಜಿಟಲ್ ಲೈಬರಿ. ಇದರ ವೈಶಿಷ್ಟ್ಯವೇನೆಂದರೆ ಯಾವುದೇ ಸಮಯದಲ್ಲಿ ಅಥವಾ ಯಾವುದೇ ಪ್ರದೇಶದಲ್ಲಿದ್ದರೂ ಕ್ಷಣಮಾತ್ರದಲ್ಲಿ ಅವಶ್ಯಕ ಮಾಹಿತಿಯನ್ನು ನೀವು ಇರುವಲ್ಲಿಯೇ ಪಡೆಯಬಹುದಾಗಿದೆ. ಇದಲ್ಲದೇ ಇನ್ನು ಹೆಚ್ಚಿನ ತಂತ್ರಜ್ಞಾನವನ್ನು ಶೈಕ್ಷಣಿಕ ವಲಯಕ್ಕೆ ಕೊಡುಗೆಯಾಗಿ ನೀಡುವ ಬಹುದೊಡ್ಡ ಗುರಿಯನ್ನು ವಿದ್ವತ್ ಸಂಸ್ಥೆಯು ಹೊಂದಿದೆ.

ಸಂಸ್ಥೆಯ ಸಂಪರ್ಕಕ್ಕಾಗಿ: www.vidwath.com, 9900304433

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT