ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಕ್ಷಣ | ವೇಳಾಪಟ್ಟಿ: ವಿದ್ಯಾರ್ಥಿಗಳಿಗೆಷ್ಟು ಮುಖ್ಯ?

ಶಾಲೆ, ಕಚೇರಿ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಲು ಅದರದ್ದೇ ಆದ ವೇಳಾಪಟ್ಟಿ ಇರುತ್ತದೆ.
ಸೋಮಲಿಂಗಪ್ಪ ಬೆಣ್ಣಿ
Published : 30 ಸೆಪ್ಟೆಂಬರ್ 2024, 0:30 IST
Last Updated : 30 ಸೆಪ್ಟೆಂಬರ್ 2024, 0:30 IST
ಫಾಲೋ ಮಾಡಿ
Comments

ವಿದ್ಯಾರ್ಥಿ ಜೀವನವೆಂದರೆ ಭವಿಷ್ಯದ ಬದುಕಿಗೆ ಪೂರಕವಾಗುವ ಎಲ್ಲ ಜ್ಞಾನ ಮತ್ತು ಸಂಸ್ಕಾರವನ್ನು ಕಲಿಯಬೇಕಿರುವ ಪ್ರಮುಖ ಘಟ್ಟ. ಈ ಹಂತದಲ್ಲಿ ವಿದ್ಯಾರ್ಥಿಗಳು ತಮ್ಮ ನಿರ್ದಿಷ್ಟ ಗುರಿ ಸಾಧನೆಗೆ ಬೇಕಾಗುವ ಶಿಸ್ತು, ಸಮಯಪ್ರಜ್ಞೆಯನ್ನು ರೂಢಿಸಿಕೊಳ್ಳುವುದು ಅತ್ಯಗತ್ಯ‌. ಸಂಯಮ, ಶಿಸ್ತು, ಸಮಯಪ್ರಜ್ಞೆ ಹಾಗೂ ಓದಿನಲ್ಲಿ ಉತ್ಸಾಹ ಇವುಗಳನ್ನು ಬೆಳೆಸಿಕೊಳ್ಳಲು ಮನೆಯಲ್ಲಿ ಚಿಕ್ಕಂದಿನಿಂದಲೇ ವೇಳಾಪಟ್ಟಿಯನ್ನು ಹಾಕಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. 

ಯಾವುದೇ ಶಾಲೆ, ಕಚೇರಿ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಲು ಅದರದ್ದೇ ಆದ ವೇಳಾಪಟ್ಟಿ ಇರುತ್ತದೆ. ಆ ವೇಳಾಪಟ್ಟಿಗೆ ಅನುಗುಣವಾಗಿ ಕಾರ್ಯನಿರ್ವಹಿಸಿದಾಗ ನಿರ್ದಿಷ್ಟ  ಯೋಜನೆಗಳು ನಿಗದಿತ ಸಮಯಕ್ಕೆ ಮುಗಿಯುತ್ತವೆ. ಅದರಂತೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆಗಳು, ಮನೆಗೆಲಸಗಳು, ವೈಯಕ್ತಿಕ ಕೆಲಸಗಳನ್ನು ಸುಗಮವಾಗಿ ನಿರ್ವಹಿಸಲು ಮನೆಯ ವೇಳಾಪಟ್ಟಿ ಅವಶ್ಯಕ.

ಪ್ರತಿಯೊಬ್ಬ ವಿದ್ಯಾರ್ಥಿ ಲಭ್ಯವಿರುವ ಶಾಲಾ ಸಮಯ, ಶಾಲೆ ಮತ್ತು ಮನೆಯ ನಡುವಿನ ಪ್ರಯಾಣದ ಅಂತರ, ಇರುವ ಸಮಯಕ್ಕೆ ಅನುಗುಣವಾಗಿ ಸೂಕ್ತ ವೇಳಾಪಟ್ಟಿಯನ್ನು ರೂಪಿಸಿಕೊಳ್ಳಬೇಕು. ಮಕ್ಕಳು ಚಿಕ್ಕವರಾಗಿದ್ದರೆ, ವೇಳಾಪಟ್ಟಿ ರೂಪಿಸಲು ಪೋಷಕರು ನೆರವಾಗಬಹುದು. ಇದನ್ನು ಮನೆಯ ಗೋಡೆಯ ಮೇಲೆ ಸುಲಭವಾಗಿ ಕಾಣುವಂತೆ ಅಂಟಿಸಿ ನಿತ್ಯವೂ ಪಾಲಿಸಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯ ಪಾಲನೆ, ಶ್ರದ್ಧೆ ರೂಢಿಯಾಗುತ್ತದೆ. ಸಮಯದ ಮಹತ್ಯ ಅರಿವಾಗುತ್ತದೆ. ತಮ್ಮ ಶಾಲಾ ಚಟುವಟಿಕೆಗಳು ನಿಗದಿತ ಸಮಯಕ್ಕೆ ಮುಗಿಯುತ್ತವೆ.

ವೇಳಾಪಟ್ಟಿ ಹೀಗಿರಲಿ

*ಶಾಲಾ ಅವಧಿಯನ್ನು ಹೊರತುಪಡಿಸಿ ಉಳಿದ ಸಮಯಕ್ಕೆ ಅನುಗುಣವಾಗಿ ಮನೆಯ ವೇಳಾಪಟ್ಟಿ ರಚಿಸಿಕೊಳ್ಳಿ. 

*ಬೆಳಿಗ್ಗೆ ಶುಭ್ರತೆ, ಯೋಗ, ವ್ಯಾಯಾಮ, ಧ್ಯಾನದಿಂದ ನಿಮ್ಮ ದಿನಚರಿ ಆರಂಭವಾಗಲಿ. 

*ಪಠ್ಯಗಳ ಓದಿಗೆ ಹಾಗೂ ದಿನಪತ್ರಿಕೆ ಓದಿಗೆ ಬೆಳಗಿನ ಸಮಯ ನಿಗದಿಪಡಿಸುವುದು ಸೂಕ್ತ. 

*ಶಾಲಾ ಅವಧಿಯ ಬಳಿಕ ಸಂಜೆ ಆಟ, ವಿಹಾರಕ್ಕೂ ವೇಳಾಪಟ್ಟಿಯಲ್ಲಿ ಜಾಗವಿರಲಿ.

*ಸಂಜೆ 6 ಗಂಟೆಯ ಬಳಿಕ ಶಾಲಾ ವಿಷಯಗಳ ಹೋಮ್ ವರ್ಕ್ ಬರೆಯುವುದು, ಟಿ.ವಿ ಅಥವಾ ಮೊಬೈಲ್‌ ವೀಕ್ಷಣೆ, ಮನೆಯ ಸದಸ್ಯರೊಂದಿಗೆ ಹರಟೆಗಳೂ ಸೇರಿರಲಿ.

*ರಾತ್ರಿ ನಿದ್ದೆಗೆ ಕನಿಷ್ಠ 8 ತಾಸು ಇರುವಂತೆ ನೋಡಿಕೊಳ್ಳಿ. ಇದು ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ದೃಷ್ಟಿಯಿಂದ ಮಹತ್ವದ್ದು. 

*ವಾರಾಂತ್ಯದಲ್ಲಿ (ಶನಿವಾರ, ಭಾನುವಾರ) ಮತ್ತು ರಜಾದಿನಗಳಲ್ಲಿ ಮ್ಯಾಗಜಿನ್ ಹಾಗೂ ಇತರೆ ಪುಸ್ತಕಗಳ ಓದು, ಪಠ್ಯೇತರ ಚಟುವಟಿಕೆಗಳು, ಹವ್ಯಾಸಗಳು, ವಿಹಾರ ಇಂಥ ಚಟುವಟಿಕೆಗಳಿಗೆ ಅವಕಾಶ ಕೊಟ್ಟುಕೊಳ್ಳಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT