ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇ–ವಾಹನಗಳ ಟೆಕ್ನಿಷಿಯನ್ ಆಗಬೇಕೆ? ಅವಕಾಶಗಳು ಹೇಗಿವೆ?

Published : 9 ಸೆಪ್ಟೆಂಬರ್ 2024, 0:12 IST
Last Updated : 9 ಸೆಪ್ಟೆಂಬರ್ 2024, 0:12 IST
ಫಾಲೋ ಮಾಡಿ
Comments

ಭಾರತದ ಆಟೋಮೊಬೈಲ್ (ವಾಹನ) ಉತ್ಪಾದನೆ ಮತ್ತು ಬಳಕೆಯ ಕ್ಷೇತ್ರವು ಜಾಗತಿಕವಾಗಿ ಪ್ರಸ್ತುತ 5ನೇ ಸ್ಥಾನದಲ್ಲಿದ್ದು, 2030ರಲ್ಲಿ ಮೂರನೇ ದೊಡ್ಡ ವಾಹನ ಉತ್ಪಾದಕ ಮತ್ತು ಬಳಕೆಯೇ ದೇಶವಾಗಿ ಹೊರಹೊಮ್ಮಲಿದೆ ಎಂದು ಅಂದಾಜಿಸಲಾಗಿದೆ.

NITI ಆಯೋಗವೂ 2030ರಷ್ಟರಲ್ಲಿ ಭಾರತದಲ್ಲಿ ಹೆಚ್ಚು ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಪ್ರೋತ್ಸಹ ನೀಡುವ ದಿಕ್ಕಿನಲ್ಲಿ ಹೆಜ್ಜೆ ಹಾಕುತ್ತಿದೆ. ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ 2023ರಲ್ಲಿ ಮಾರಾಟವಾಗಿರುವ ಇ–ವಾಹನಗಳ ಸಂಖ್ಯೆ 15 ಲಕ್ಷ ದಾಟಿದೆ.

ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಬಳಕೆ ಹೆಚ್ಚಿದಂತೆ ಅಂಥ ವಾಹನಗಳ ತಯಾರಿ ಮತ್ತು ನಿರ್ವಹಣೆ ಮಾಡಬಲ್ಲ ತಂತ್ರಜ್ಞರ ಅಗತ್ಯ ಹೆಚ್ಚಲಿದೆ. ಇದನ್ನು ಮನಗಂಡ ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮ (NSDC ) ಎಲೆಕ್ಟ್ರಿಕ್ ವೆಹಿಕಲ್‌ಗಳನ್ನು ಸರ್ವೀಸ್‌ ಮಾಡಬಲ್ಲ ತಂತ್ರಜ್ಞರನ್ನು ಅಣಿಗೊಳಿಸುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನ ತಂತ್ರಜ್ಞ ತರಬೇತಿ ಇರುವ ಆನ್‌ಲೈನ್‌ ಕೋರ್ಸ್‌ವೊಂದನ್ನು ಉಚಿತವಾಗಿ ಪ್ರಾರಂಭಿಸಿದೆ.

ಐ.ಟಿ.ಐನಲ್ಲಿ ಮೆಕ್ಯಾನಿಕ್ ಮೋಟಾರ್ ವೆಹಿಕಲ್ ಅಥವಾ ಮೆಕ್ಯಾನಿಕ್ ಆಟೋಮೊಬೈಲ್ ಪದವಿ ಪಡೆದ ವಿದ್ಯಾರ್ಥಿಗಳು ‘Electric Vehicle Service Lead Technician’ ಎಂಬ ಈ ಉಚಿತ ಕೋರ್ಸ್‌ಗೆ NSDC ಜಾಲತಾಣದಲ್ಲಿ ಕೆಳಗಿನ ಕೊಂಡಿ/ಲಿಂಕ್ ಬಳಸಿ (https://www.skillindiadigital.gov.in/courses/detail/cb91c0e8-9af8-4ae2-b5e0-c1b6d5314e93 ) ತಮ್ಮ ಫೋನ್ ನಂಬರ್ ನೀಡುವ ಮೂಲಕ ನೋಂದಣಿ ಮಾಡಿಕೊಳ್ಳಬಹುದು.

ಹೆಚ್ಚಿನ ವಿವರಗಳಿಗೆ : https://www.skillindiadigital.gov.in/home ಗೆ ಹೋಗಿ, ಮತ್ತು ‘Electric Vehicle Service Lead Technician’ಎಂದು ಹುಡುಕಿ ಅಥವಾ ನೇರವಾಗಿ ಈ ಕೆಳಗಿನ ಜಾಲತಾಣದ ಲಿಂಕ್ ಗೆ ಹೋಗಿ ನೋಂದಾಯಿಸಬಹುದು https://www.skillindiadigital.gov.in/courses/detail/cb91c0e8-9af8-4ae2-b5e0-c1b6d5314e93

ತರಬೇತಿಗಿರುವ ಅರ್ಹತೆಗಳು

  • ವಿದ್ಯಾರ್ಹತೆ: ಐ.ಟಿ.ಐ (ಮೆಕ್ಯಾನಿಕ್ ಮೋಟಾರ್ ವೆಹಿಕಲ್ ) ಅಥವಾ ಐ. ಟಿ. ಐ (ಮೆಕ್ಯಾನಿಕ್ ಆಟೋಮೊಬೈಲ್)

  • ಅನುಭವ: 1 ವರ್ಷ ಲಘು ವಾಹನ ಅಥವಾ ಭಾರಿ ವಾಹನ ಸರ್ವಿಸ್ ಮಾಡಿರಬೇಕು.

  • ಶುಲ್ಕ: ಉಚಿತ

  • 7600 + ವಿದ್ಯಾರ್ಥಿಗಳು ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ

  • ತರಬೇತಿಯ ಮಾಧ್ಯಮ: ಇಂಗ್ಲಿಷ್

  • ಕಾರ್ಯಕ್ರಮದ ಆಯೋಜಕರು: NSDC ಅಕಾಡೆಮಿ

  • ತರಬೇತಿ ನಂತರ ಸಿಗುವ ಉದ್ಯೋಗ/ಕೌಶಲ: ತಾಂತ್ರಿಕ ಸರ್ವಿಸ್ ಮತ್ತು ರಿಪೇರಿ ನಿಪುಣತೆ

  • ತರಬೇತಿ ಗುರಿ: ಈ ತರಬೇತಿ ಪಡೆದ ವಿದ್ಯಾರ್ಥಿಗಳು, ಇ– ವಾಹನಗಳ ಮೆಕ್ಯಾನಿಕಲ್ ಮತ್ತು ಮತ್ತು ಎಲೆಕ್ಟ್ರಿಕ್ ಸಲಕರಣೆಗಳಲ್ಲಿ ಬರುವ ದೋಷಗಳನ್ನು ಗುರುತಿಸಿ ರಿಪೇರಿ ಮಾಡುವಲ್ಲಿ ನಿಪುಣತೆ ಪಡೆಯುತ್ತಾರೆ.

  • ಕನಿಷ್ಠ ವಯಸ್ಸು: 16

  • ತರಬೇತಿಯ ಅವಧಿ: 8.65 ಗಂಟೆ.

ತರಬೇತಿಯ ಪಠ್ಯ ಹೀಗಿರಲಿದೆ

  • ಭಾರತ ಸರ್ಕಾರ ಇ– ವಾಹನಗಳ ಬಳಕೆಗೆ ನೀಡುತ್ತಿರುವ ಉತ್ತೇಜನ ಮತ್ತು ಎಲೆಕ್ಟ್ರಿಕ್ ವಾಹನಗಳ ಬಿಡಿ ಭಾಗಗಳ ಕುರಿತು ಮಾಹಿತಿ

  • ಎಲೆಕ್ಟ್ರಿಕ್ ವಾಹನಗಳಲ್ಲಿ ಕೈಗೊಳ್ಳಬೇಕಾದ ಸುರಕ್ಷಿತ ಕ್ರಮಗಳ ಬಗ್ಗೆ ಶಿಕ್ಷಣ

  • ಯೋಜನಾಬದ್ಧವಾಗಿ ವಾಹನಗಳ ದೋಷಗಳನ್ನು ಗುರುತಿಸುವ ಕಲೆ

  • ಸಂವಹನ ಕೌಶಲ ಮತ್ತು ಗಣಕ ಯಂತ್ರದ ಬಳಕೆ

  • ಮೆಕ್ಯಾನಿಕಲ್ ಸಲಕರಣೆ ಮತ್ತು ಎಲೆಕ್ಟ್ರಿಕ್ ಉಪಕರಣಗಳ ಸರ್ವಿಸ್ ಮಾಡುವ ತರಬೇತಿ

  • Troubleshooting (ದೋಷಗಳ ಗುರುತಿಸುವ) ಬಗ್ಗೆ ತರಬೇತಿ

  • ಪರೀಕ್ಷೆ ಮತ್ತು ಸರ್ಟಿಫಿಕೇಟ್ ವಿತರಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT