ನನಗೆ ಮಗ ಮತ್ತು ಮಗಳಿದ್ದಾರೆ. ಮಗ ಎಂಜಿನಿಯರಿಂಗ್ ಓದುತ್ತಿದ್ದಾನೆ. ಸೂಕ್ಷ್ಮ ಸ್ವಭಾವ. ಆದರೆ, ಮಗಳು 8ನೇ ತರಗತಿ ಕಲಿಯುತ್ತಿದ್ದಾಳೆ. ಆದರೆ, ಹಟದ ಸ್ವಭಾವ. ಏತಿ ಅಂದರೆ ಪ್ರೇತಿ ಎನ್ನುತ್ತಾಳೆ. ಓದಿನಲ್ಲಿ ಜಾಣೆ, ಕೌಶಲದಲ್ಲಿಯೂ ಮುಂದು, ಭಾಷಣದಲ್ಲಿ, ಕಲೆ, ಸಂಗೀತ... ಹೀಗೆ ಎಲ್ಲರದಲ್ಲಿಯೂ ಆಸಕ್ತಿ. ಇಂಥದ್ದು ಗೊತ್ತಿಲ್ಲ ಅನ್ನುವ ಹಾಗಿಲ್ಲ. ಆದರೆ ಅವಳ ಹಟದ ಸ್ವಭಾವ ಮಾತ್ರ ದಿನೇ ದಿನೇ ಹೆಚ್ಚುತ್ತಿದೆ. ಬೇಕು ಅಂದರೆ ಬೇಕೇಬೇಕು ಅನ್ನುವ ಸ್ಥಿತಿಗೆ ತಲುಪಿದೆ. ಶಾಲೆಯಲ್ಲಿಯೂ ಈ ಧೋರಣೆಗೆ ದೂರುಗಳು ಹೆಚ್ಚುತ್ತಿವೆ. ಅವಳನ್ನು ತಿದ್ದುವುದು ಹೇಗೆ? ಬಂಡಾಯಗಾರ್ತಿಯಂತೆ ಇರುವ ಅವಳನ್ನು ಸಂಯಮದ ದಿಕ್ಕಿಗೆ ಕರೆದೊಯ್ಯುವುದು ಹೇಗೆ?