ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮದ್ರಾಸ್ ಐಐಟಿಯಿಂದ AI and Data Analytics ವಿಷಯದಲ್ಲಿ ಬಿ.ಟೆಕ್ ಕೋರ್ಸ್

ಮದ್ರಾಸ್ IIT, Artificial Intelligence and Data Analytics ವಿಷಯದಲ್ಲಿ ಬಿ.ಟೆಕ್ ಆರಂಭಿಸುತ್ತಿದೆ. ಇದೇ 2024–25 ನೇ ಶೈಕ್ಷಣಿಕ ವರ್ಷದಿಂದ ಈ ಕೋರ್ಸ್ ಲಭ್ಯವಿರಲಿದೆ.
Published 11 ಜೂನ್ 2024, 13:37 IST
Last Updated 11 ಜೂನ್ 2024, 13:37 IST
ಅಕ್ಷರ ಗಾತ್ರ

ಚೆನ್ನೈ: ಮದ್ರಾಸ್ ಐಐಟಿ Artificial Intelligence and Data Analytics ವಿಷಯದಲ್ಲಿ ಬಿ.ಟೆಕ್ ಪದವಿಯನ್ನು ಆರಂಭಿಸುತ್ತಿದೆ. ಇದೇ 2024–25 ನೇ ಶೈಕ್ಷಣಿಕ ವರ್ಷದಿಂದ ಈ ಕೋರ್ಸ್ ಲಭ್ಯವಿರಲಿದೆ.

ಈ ಕೋರ್ಸ್‌ಗೆ ಜೆಇಇ ಪ್ರವೇಶ ಪರೀಕ್ಷೆ ಮೂಲಕ 50 ಸೀಟುಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು ಎಂದು ಮದ್ರಾಸ್ ಐಐಟಿ ನಿರ್ದೇಶಕ ವಿ. ಕಾಮಕೋಟಿ ತಿಳಿಸಿದ್ದಾರೆ.

ಎಐ ಮತ್ತು ಡೇಟಾ ವಿಶ್ಲೇಷಣೆ ಉದ್ಯಮದಲ್ಲಿ ಅತ್ಯಂತ ಪ್ರತಿಭಾವಂತರನ್ನು ತಯಾರು ಮಾಡುವುದು ಈ ಕೋರ್ಸ್‌ನ ಉದ್ದೇಶ ಎಂದು ಅವರು ಹೇಳಿದ್ದಾರೆ.

ಇಂದು ಎಲ್ಲ ರಂಗಗಳಲ್ಲಿ ಕೃತಕ ಬುದ್ಧಿಮತ್ತೆ ಹಾಗೂ ದತ್ತಾಂಶ ವಿಶ್ಲೇಷಣೆ ಕಾಲಿಟ್ಟಿದೆ. ಈ ವಿಷಯದಲ್ಲಿ ಬಿ.ಟೆಕ್ ಪದವಿ ಆರಂಭಿಸುತ್ತಿರುವುದು ಜಗತ್ತಿನಲ್ಲೇ ಮೊದಲು ಎಂದು ಅವರು ಮಾಹಿತಿ ನೀಡಿದ್ದಾರೆ.

ಮದ್ರಾಸ್ ಐಐಟಿ ಹಳೇ ವಿದ್ಯಾರ್ಥಿಯಾಗಿರುವ ಸುನೀಲ್ ವದ್ವಾನಿ ಅವರ ಅನುದಾನದಲ್ಲಿ ಆರಂಭಿಸಲಾಗಿರುವ ವದ್ವಾನಿ ಸ್ಕೂಲ್ ಆಫ್ ಡೇಟಾ ಅನಾಲಿಟಿಕ್ಸ್ ಹಾಗೂ ಎಐ ಸಂಸ್ಥೆ ಈ ಕೋರ್ಸ್‌ ಅನ್ನು ಮುನ್ನಡೆಸಲಿದೆ. ಉದ್ಯೋಗಾವಕಾಶಗಳಿಗೆ ಈ ಕೋರ್ಸ್ ಮೊದಲ ಆಯ್ಕೆಯಾಗಬೇಕಿದೆ ಎಂದು ಕಾಮಕೋಟಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT