ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಇಂಡಸ್ಟ್ರಿಯಲ್‌ ಎಂಜಿನಿಯರಿಂಗ್‌ಗೆ ಅವಕಾಶಗಳೇನು?

Published : 29 ಡಿಸೆಂಬರ್ 2024, 23:30 IST
Last Updated : 29 ಡಿಸೆಂಬರ್ 2024, 23:30 IST
ಫಾಲೋ ಮಾಡಿ
Comments
ಪ್ರ

1.ನನ್ನ ಮಗ ಬಿ.ಟೆಕ್ (ಇಂಡಸ್ಟ್ರಿಯಲ್‌ ಎಂಜಿನಿಯರಿಂಗ್) ಮಾಡಿದ್ದು, ಸರ್ಕಾರಿ ಕ್ಷೇತ್ರದಲ್ಲಿ ವೃತ್ತಿಯ ಅವಕಾಶಗಳೇನು?
ಗೌಡ, ಬೆಂಗಳೂರು.

ಬಿ.ಟೆಕ್ (ಇಂಡಸ್ಟ್ರಿಯಲ್‌ ಎಂಜಿನಿಯರಿಂಗ್) ನಂತರ ಸರ್ಕಾರಿ ವಲಯದ ಉತ್ಪಾದನೆ, ರಿಫೈನರಿ, ಆಟೋಮೇಷನ್, ಜವಳಿ ಉದ್ಯಮ, ರೈಲ್ವೇಸ್, ಭಾರತೀಯ ರಕ್ಷಣಾ ಪಡೆ ಸೇರಿ  ಅನೇಕ ಕ್ಷೇತ್ರಗಳಲ್ಲಿ ವೃತ್ತಿಯನ್ನು ಅರಸಬಹುದು. ಹಾಗೂ ಸರ್ಕಾರಿ
ವಲಯದ ಪ್ರಮುಖ ಸಂಸ್ಥೆಗಳಾದ ಎನ್‌ಟಿಪಿಸಿ, ಒಎನ್‌ಜಿಸಿ, ಸ್ಟೀಲ್ ಅಥಾರಿಟಿ ಅಫ್ ಇಂಡಿಯಾ, ಎಂಜಿನಿಯರ್ಸ್‌ ಇಂಡಿಯಾ, ಇಸ್ರೊ,  ಡಿಆರ್‌ಡಿಒ, ಎಚ್‌ಎಎಲ್  ಸಂಸ್ಥೆಗಳಲ್ಲಿಯೂ ಹುದ್ದೆಗಳನ್ನು ಪಡೆದುಕೊಳ್ಳಬಹುದು. ಜತೆಗೆ, ಯುಪಿಎಸ್‌ಸಿ ಪರೀಕ್ಷೆಯ ಮೂಲಕ ಐಎಎಸ್ ಅಧಿಕಾರಿಯಾಗಬಹುದು. ಈಗ, ಸರ್ಕಾರಿ ವಲಯದ ಎಲ್ಲಾ ವೃತ್ತಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿರುತ್ತದೆ. ಹಾಗಾಗಿ, ನಿಮ್ಮ ಸ್ವಾಭಾವಿಕ ಪ್ರತಿಭೆ, ಆಸಕ್ತಿ, ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಗುರುತಿಸಿ, ವೃತ್ತಿಯೋಜನೆಯನ್ನು ಮಾಡಿ, ನಿರ್ಧಾರ ಮಾಡುವುದು ಸೂಕ್ತ. ವೃತ್ತಿಯೋಜನೆಯ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:https://www.youtube.com/watch?v=AwlDno1YduQ

ADVERTISEMENT
ಪ್ರ

2.ಎಂಎಸ್ಸಿ(ಫೊರೆನ್ಸಿಕ್ ಸೈನ್ಸ್ ಮತ್ತು ಕ್ರಿಮಿನಾಲಜಿ) ನಂತರ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಅವಕಾಶಗಳೇನು? ಹೆಸರು, ಊರು ತಿಳಿಸಿಲ್ಲ.

ಹೆಚ್ಚುತ್ತಿರುವ ಸೈಬರ್ ಕ್ರೈಂ, ವಂಚನೆ, ಮೋಸಗಾರಿಕೆ ಮತ್ತು ಇನ್ನಿತರ ಅಪರಾಧಗಳಿಂದ, ವಿಧಿ ವಿಜ್ಞಾನ (ಫೊರೆನ್ಸಿಕ್ ಸೈನ್ಸ್) ಮತ್ತು ಅಪರಾಧ ಶಾಸ್ತ್ರ (ಕ್ರಿಮಿನಾಲಜಿ) ಕ್ಷೇತ್ರದ ತಜ್ಞರಿಗೆ ಬೇಡಿಕೆಯಿದೆ. ಈ ಕ್ಷೇತ್ರದಲ್ಲಿ ಯಶಸ್ವಿಯಾಗಲು ಸ್ವಾಭಾವಿಕವಾದ ಒಲವು ಮತ್ತು ಆಸಕ್ತಿಯಿದ್ದು ವಿವೇಚನೆ, ದತ್ತಾಂಶ ಸಂಗ್ರಹಣೆ ಮತ್ತು ನಿರ್ವಹಣೆ, ತಾರ್ಕಿಕ ಪ್ರತಿಪಾದನಾ ಕೌಶಲ, ವಿಶ್ಲೇಷಣಾ ಮತ್ತು ಸಂಶೋಧನಾ ಕೌಶಲ, ಸಮಯ ಪ್ರಜ್ಞೆ ಇತ್ಯಾದಿ ಕೌಶಲಗಳನ್ನು ಬೆಳೆಸಿಕೊಳ್ಳುವುದರ ಜತೆಗೆ ಪದವಿ ಪರೀಕ್ಷೆಯ ಫಲಿತಾಂಶ ಉತ್ಕೃಷ್ಟವಾಗಿರಬೇಕು.  ವಿದ್ಯಾಭ್ಯಾಸದ ನಂತರ ಸಂಶೋಧನಾ ಸಂಸ್ಥೆಗಳು, ಖಾಸಗಿ ಮತ್ತು ಸರ್ಕಾರಿ ಪತ್ತೇದಾರಿ ಸಂಸ್ಥೆಗಳು, ಪೊಲೀಸ್ ಇಲಾಖೆ, ವಿಧಿ ವಿಜ್ಞಾನ ಲ್ಯಾಬೋರೇಟರಿಗಳು, ಸಿಐಡಿ, ಸಿಬಿಐ, ಐಬಿ, ಪೋಲೀಸ್ ಇಲಾಖೆ, ನರ್ಕೋಟಿಕ್ಸ್ ಇಲಾಖೆ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳು ಇತ್ಯಾದಿ
ಕ್ಷೇತ್ರಗಳಲ್ಲಿ ವೃತ್ತಿಯನ್ನು ಅರಸಬಹುದು.

ಪ್ರ

3.ನಾನು ಬಿಸಿಎ ಮಾಡುತ್ತಿದ್ದು, ಮುಂದೆ ಎಂಬಿಎ ಮಾಡಬಹುದೇ?
ರೋಹಿತ್, ಊರು ತಿಳಿಸಿಲ್ಲ.

ಐಟಿ ವಿಸ್ತಾರವಾದ ಮತ್ತು ತ್ವರಿತವಾಗಿ ಅಭಿವೃದ್ಧಿಯಾಗುತ್ತಿರುವ ಕ್ಷೇತ್ರ. ಎಂಬಿಎ. ಕೋರ್ಸಿನಲ್ಲಿ ವೃತ್ತಿಗೂ, ಜೀವನಕ್ಕೂ ಅಗತ್ಯವಾದ ಅನೇಕ ಮೂಲಭೂತ ತತ್ವಗಳ, ಮೌಲ್ಯಗಳ ಮನದಟ್ಟಾಗುತ್ತದೆ. ಈ ತತ್ವಗಳ ಆಧಾರದ ಮೇಲೆ, ನೀವು ವೃತ್ತಿ ಮತ್ತು ಖಾಸಗೀ ಜೀವನಗಳೆರಡರಲ್ಲೂ ಯಶಸ್ಸು ಸಾಧಿಸಬಹುದು. ಹಾಗಾಗಿ, ಬಿಸಿಎ ಅಥವಾ ಯಾವುದೇ ತಾಂತ್ರಿಕ ಕೋರ್ಸ್ ನಂತರ ಎಂಬಿಎ ಉತ್ತಮ ಆಯ್ಕೆ. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=WHZTFCmu3zg

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT