ಮೈಸೂರು: ಮೈಸೂರು ವಿಶ್ವವಿದ್ಯಾಲಯವು 2020ರ ಸೆಪ್ಟೆಂಬರ್‌ನಲ್ಲಿ ನಡೆಸಿದ್ದ, ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆಯ (ಕೆ–ಸೆಟ್) ಫಲಿತಾಂಶವನ್ನು ಶುಕ್ರವಾರ ಪ್ರಕಟಿಸಿದೆ.

‘ರಾಜ್ಯದ 11 ಕೇಂದ್ರಗಳಲ್ಲಿ 41 ವಿಷಯಗಳಿಗೆ 79,717 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ 5, 495 ಮಂದಿಗೆ ರಾಜ್ಯದ ವಿಶ್ವವಿದ್ಯಾಲಯಗಳು ಮತ್ತು ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗುವ ಅರ್ಹತೆ ಪಡೆದಿದ್ದಾರೆ. ಇವರಲ್ಲಿ 3,113 ಪುರುಷರು, 2,382 ಮಹಿಳೆಯರು ಇದ್ದಾರೆ’ ಎಂದು ವಿ.ವಿ.ಯ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ರಾಜ್ಯದಲ್ಲಿರುವ ಮೀಸಲಾತಿಗೆ ಅನುಗುಣವಾಗಿ ಈ ಅರ್ಹತಾ ಪಟ್ಟಿ ಪ್ರಕಟಿಸಲಾಗಿದೆ. ಈ ಬಾರಿ ಶೇ 6.89ರಷ್ಟು ಫಲಿತಾಂಶ ದೊರೆತಿದೆ. ಹಿಂದಿನ ಬಾರಿ ಶೇ 6.92ರಷ್ಟಿತ್ತು. ಇನ್ನೂ ಎರಡು ಬಾರಿ ಪರೀಕ್ಷೆ ನಡೆಸುವ ಮಾನ್ಯತೆ ವಿಶ್ವವಿದ್ಯಾಲಯಕ್ಕಿದೆ. ಜೂನ್–ಜುಲೈನಲ್ಲಿ ನೇಮಕಾತಿ ನಡೆಯುವ ಸಾಧ್ಯತೆ ಇರುವುದರಿಂದ ಮಾರ್ಚ್–ಏಪ್ರಿಲ್‌ನಲ್ಲಿ ಮತ್ತೊಮ್ಮೆ ಕೆ–ಸೆಟ್ ನಡೆಸಲಾಗುವುದು’ ಎಂದು ಕಲಪತಿ ಪ‍್ರಶ್ನೆಯೊಂದಕ್ಕೆ ಉತ್ತರಿಸಿದರು.

kset.uni-mysore.ac.in ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯ.

ಪರೀಕ್ಷಾ ಕೇಂದ್ರ-ಅರ್ಹತೆ ಪಡೆದ ಅಭ್ಯರ್ಥಿಗಳು

ಬೆಂಗಳೂರು-1,133
ಬೆಳಗಾವಿ-200
ಬಳ್ಳಾರಿ-332
ವಿಜಯಪುರ-255
ದಾವಣಗೆರೆ-274
ಧಾರವಾಡ-668
ಕಲಬುರ್ಗಿ-464
ಮಂಗಳೂರು-391
ಮೈಸೂರು-1,248
ಶಿವಮೊಗ್ಗ-296
ತುಮಕೂರು-234

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.