ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಟಾ ಎಜುಕೇಶನ್ ಟ್ರಸ್ಟ್‌ನಿಂದ ವಿದ್ಯಾರ್ಥಿವೇತನ: ಇಲ್ಲಿದೆ ವಿವರ

Last Updated 17 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಲೇಡಿ ಮೆಹೆರ್‌ಬಾಯಿ ಡಿ ಟಾಟಾ ಎಜುಕೇಶನ್ ಸ್ಕಾಲರ್‌ಶಿಪ್ 2022

ವಿವರ: ಲೇಡಿ ಮೆಹೆರ್‌ಬಾಯಿ ಡಿ ಟಾಟಾ ಎಜುಕೇಶನ್ ಸ್ಕಾಲರ್‌ಶಿಪ್ 2022, ನಿಗದಿತ ಕ್ಷೇತ್ರಗಳಲ್ಲಿ ವಿದೇಶದಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಬಯಸುವ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಭಾರತೀಯ ಮಹಿಳಾ ಪದವೀಧರರಿಗಾಗಿ ಟಾಟಾ ಎಜುಕೇಶನ್ ಟ್ರಸ್ಟ್‌ ನೀಡುವ ವಿದ್ಯಾರ್ಥಿವೇತನವಾಗಿದೆ.

ಅರ್ಹತೆ: ಸ್ಥಿರ ಹಾಗೂ ಗಮನಾರ್ಹವಾದ ಶೈಕ್ಷಣಿಕ ದಾಖಲೆಯನ್ನು ಹೊಂದಿರುವ ಪ್ರತಿಷ್ಠಿತ ವಿಶ್ವವಿದ್ಯಾಲಯದಿಂದ ಬಂದಿರುವಂತಹ ಭಾರತೀಯ ಮಹಿಳಾ ಪದವೀಧರರು ಈ ವಿದ್ಯಾರ್ಥಿವೇತನಕ್ಕೆ ಅರ್ಹರು. ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು 2022–23ಕ್ಕೆ ಅಮೆರಿಕ, ಬ್ರಿಟನ್‌ ಅಥವಾ ಯುರೋಪ್‌ನಲ್ಲಿನ ‍‍‍ಪ್ರತಿಷ್ಠಿತ ವಿವಿಗಳಲ್ಲಿ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿರಬೇಕು.

ಆರ್ಥಿಕ ನೆರವು: ಕೋರ್ಸ್‌ಗೆ ಅನುಗುಣವಾಗಿ ವಿದ್ಯಾರ್ಥಿವೇತನವನ್ನು ನಿಗದಿ ಪಡಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 2, 2022

ಅರ್ಜಿ ಸಲ್ಲಿಕೆ ವಿಧಾನ: ಇ ಮೇಲ್ ಮೂಲಕ

ಹೆಚ್ಚಿನ ಮಾಹಿತಿಗೆ: www.b4s.in/praja/TET7

ಐಸಿಸಿಆರ್ ಸ್ಕಾಲರ್‌ಶಿಪ್‌ ಫಾರ್ ಇಂಡಿಯನ್ ಕಲ್ಚರ್ 2022-23

ವಿವರ: ಐಸಿಸಿಆರ್ ಸ್ಕಾಲರ್‌ಶಿಪ್‌ ಫಾರ್ ಇಂಡಿಯನ್ ಕಲ್ಚರ್ 2022-23, ಭಾರತ ಸರ್ಕಾರದ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್‌ನಿಂದ ನೀಡುವ ವಿದ್ಯಾರ್ಥಿವೇತನವಾಗಿದ್ದು, 18 ರಿಂದ 30 ವರ್ಷ ವಯಸ್ಸಿನ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಹರು.

ಅರ್ಹತೆ: ನೃತ್ಯ, ಸಂಗೀತ, ರಂಗಭೂಮಿ, ಪ್ರದರ್ಶನ ಕಲೆ, ಶಿಲ್ಪಕಲೆ, ಭಾರತೀಯ ಭಾಷೆಗಳು, ಭಾರತೀಯ ಪಾಕಪದ್ಧತಿ ಮುಂತಾದ ಭಾರತೀಯ ಸಂಸ್ಕೃತಿಯ ಅಧ್ಯಯನವನ್ನು ಅನುಸರಿಸುವ 18-30 ವರ್ಷ ವಯಸ್ಸಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಆರ್ಥಿಕ ನೆರವು: ಕೋರ್ಸ್‌ಗೆ ಅನುಗುಣವಾಗಿ ವಿದ್ಯಾರ್ಥಿವೇತನವನ್ನು ನಿಗದಿ ಪಡಿಸಲಾಗಿದೆ.

ಅರ್ಜಿ ಸಲ್ಲಿಕೆ ವಿಧಾನ: ಏಪ್ರಿಲ್ 30, 2022

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ ಮೂಲಕ

ಹೆಚ್ಚಿನ ಮಾಹಿತಿಗೆ: www.b4s.in/praja/ICS7

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT