ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷಾ ಪರೀಕ್ಷೆಗೆಹೀಗಿರಲಿ ಸಿದ್ಧತೆ

ಭಾಗ 8
Last Updated 6 ನವೆಂಬರ್ 2022, 20:15 IST
ಅಕ್ಷರ ಗಾತ್ರ

ಹಿಂದಿನ ಸಂಚಿಕೆಯಲ್ಲಿ ಜವಾಹರ ನವೋದಯ ವಿದ್ಯಾಲಯದ 6ನೆಯ ತರಗತಿಯ ಪ್ರವೇಶ ಪರೀಕ್ಷೆಯ ಅಂಕಗಣಿತ ವಿಭಾಗದ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರಿಸಲು ಸಹಾಯಕವಾಗುವ ಮತ್ತು ಗುಣಾಕಾರದಲ್ಲಿ ಸುಲಭವಾಗಿ ತಾಳೆ ನೋಡುವ ಒಂದು ವಿಧಾನದ ಬಗ್ಗೆ ತಿಳಿದೆವು.

ಈ ತಾಳೆ ನೋಡುವ ವಿಧಾನದಿಂದ, ಗುಣಕಾರದ ಪ್ರಶ್ನೆಗಳನ್ನಷ್ಟೇ ಅಲ್ಲದೇ, ಸಂಕಲನ, ವ್ಯವಕಲನ ಸೇರಿದಂತೆ ಅಂಕಗಣಿತದ ಉಳಿದ ಪ್ರಾಕಾರಗಳ ಲೆಕ್ಕಗಳನ್ನೂ ಪರಿಶೀಲಿಸಬಹುದು. ಅಷ್ಟೇ ಅಲ್ಲ, ಕೆಲವು ಬೀಜಗಣಿತದ ಸಮಸ್ಯೆ ಗಳನ್ನು ತಾಳೆನೋಡಲೂ ಈ ವಿಧಾನವು ಬಹಳ ಉಪಯುಕ್ತ.ಅದನ್ನು ನೀವೇ ಮನೆಯಲ್ಲಿ ಪ್ರಯತ್ನ ಮಾಡಿ ನೋಡಬಹುದು. ಅಂಕಗಣಿತದ ತಾಳೆ ನೋಡುವ ಈ ವಿಧಾನವು ನವೋದಯ ವಿದ್ಯಾಲಯದ ಪ್ರವೇಶ ಪರೀಕ್ಷೆಗೆ ಮಾತ್ರವಲ್ಲದೇ, ಬೇರೆ ಬೇರೆ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಹಾಯಕವಾಗುತ್ತದೆ.

ಐದನೇ ತರಗತಿ ಪಠ್ಯ ಓದಿ

6ನೆಯ ತರಗತಿಯ ನವೋದಯ ಪ್ರವೇಶ ಪರೀಕ್ಷೆಯ ಅಂಕಗಣಿತದ ಪ್ರಶ್ನೆ ಪತ್ರಿಕೆಯು ಮುಖ್ಯವಾಗಿ 5ನೆಯ ತರಗತಿಯ ಪಠ್ಯಕ್ರಮವನ್ನು ಆಧರಿಸಿದೆ. ಹಾಗಾಗಿ, ಐದನೇ ತರಗತಿಯಲ್ಲಿರುವ ಗಣಿತದ ಪಾಠಗಳನ್ನು ಸರಿಯಾಗಿ ತಿಳಿದುಕೊಳ್ಳಿ. ಆ ಪಠ್ಯದಲ್ಲಿರುವ ಲೆಕ್ಕಗಳನ್ನು ಈ ಹಿಂದಿನ ಸಂಚಿಕೆಯಲ್ಲಿ ತಿಳಿಸಿದಂತೆ, ಬಿಡಿಸುವುದನ್ನು ಅಭ್ಯಾಸ ಮಾಡಿ. ತಾಳೆ ನೋಡುವ ಕ್ರಮವನ್ನೂ ಅಭ್ಯಾಸ ಮಾಡಿ.

ಭಾಷಾ ಪರೀಕ್ಷೆ ವಿವರ

ನವೋದಯ ಪ್ರವೇಶ ಪರೀಕ್ಷೆಯಲ್ಲಿ, ಮೊದಲ ಭಾಗ ಮಾನಸಿಕ ಸಾಮರ್ಥ್ಯ ಪರೀಕ್ಷೆ, ಎರಡನೇ ಭಾಗ ಅಂಕಗಣಿತ. ಮೂರನೇ ಭಾಗವೇ ಭಾಷಾ ಪರೀಕ್ಷೆ. ಈ ಪ್ರಶ್ನೆ ಪತ್ರಿಕೆಯಲ್ಲಿ ಒಟ್ಟು 20 ಪ್ರಶ್ನೆಗಳಿರುತ್ತವೆ ಹಾಗೂ ಗರಿಷ್ಠ ಅಂಕಗಳು 25. ಇಲ್ಲಿ ನಾಲ್ಕು ಪ್ಯಾಸೇಜ್‌ (Passage) ಗಳಿರುತ್ತವೆ. ಪ್ರತಿ ಪ್ಯಾಸೇಜ್‌ ನಂತರ ಐದು ಪ್ರಶ್ನೆಗಳಿರುತ್ತವೆ. ಪ್ರತಿ ಪ್ರಶ್ನೆಗೂ ನಾಲ್ಕು ಆಯ್ಕೆಗಳಿರುತ್ತವೆ. ಪ್ಯಾಸೇಜ್‌ ಓದಿ, ಸರಿಯಾಗಿ ಅರ್ಥೈಸಿಕೊಂಡು ಉತ್ತರಿಸಬೇಕು.

ಭಾಷಾ ಪರೀಕ್ಷೆಗೆ ಸಿದ್ಧರಾಗುವವರು, ಹೆಚ್ಚು ಹೆಚ್ಚು ಓದಬೇಕು. ಕಾಗುಣಿತ ದೋಷವಿಲ್ಲದೇ ಬರೆಯುವುದನ್ನು ಕಲಿತುಕೊಳ್ಳಬೇಕು.

ಓದುವಾಗ ಗಮನಕ್ಕೆ ಬಂದ ಕಠಿಣ ಪದಗಳ ಅರ್ಥವನ್ನು ಬರೆದಿಟ್ಟುಕೊಂಡು ಆಗಾಗ ಮನನ ಮಾಡಿಕೊಳ್ಳಿ. ಬೇರೆ ಬೇರೆ ಪ್ಯಾಸೇಜ್‌ಗಳನ್ನು ಸಂಗ್ರಹಿಸಿಟ್ಟುಕೊಂಡು ಓದಿ ಅರ್ಥೈಸಿಕೊಳ್ಳಿ.

ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸಿ

ಕಳೆದ ಏಳು ಸರಣಿಯಲ್ಲಿ ತಿಳಿಸಿರುವ ಮಾಹಿತಿಯನ್ನು ಸಂಗ್ರಹಿಸಿಟ್ಟು ಕೊಂಡು, ಹಿಂದಿನ ವರ್ಷಗಳ ಪ್ರವೇಶ ಪರೀಕ್ಷೆಯ ಪ್ರಶ್ನೆಗಳಿಗೆ ಉತ್ತರಿಸುವು ದನ್ನು ಅಭ್ಯಾಸ ಮಾಡಿಕೊಳ್ಳಿ.ನವೋದಯ ಸರಣಿಯ ಹಿಂದಿನ ಲೇಖನಗಳನ್ನು ಓದಲು www.prajavani.net/education-career ಜಾಲತಾಣಕ್ಕೆ ಭೇಟಿ ನೀಡಬಹುದು.

ನವೋದಯ ವಿದ್ಯಾಲಯದ ಪ್ರವೇಶ ಪರೀಕ್ಷೆ ಮತ್ತಿತರ ವಿವರಗಳಿಗಾಗಿ ಈ ಜಾಲತಾಣ ನೋಡಿರಿ https://navodaya.gov.in/nvs/en/Home1

(ಲೇಖಕರು : ನಿರ್ದೇಶಕರು ಸ್ಮಾರ್ಟ್ ಸೆರೆಬ್ರಮ್ ಪ್ರೈವೇಟ್ ಲಿಮಿಟೆಡ್)

(ನವೋದಯ ಪ್ರವೇಶ ಪರೀಕ್ಷೆ ಸರಣಿ ಮುಗಿಯಿತು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT