ಕೆಪಿಎಸ್‌ಸಿ ‘ಗ್ರೂಪ್-ಸಿ’ಯ ವಿವಿಧ ಹುದ್ದೆಗಳು, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ವಿಶೇಷ ಮೀಸಲು ಸಬ್ಇನ್‌ಸ್ಪೆಕ್ಟರ್ (ಕೆಎಸ್‌ಆರ್‌ಪಿ ಆ್ಯಂಡ್ ಐಆರ್‌ಬಿ) ಹಾಗೂ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳ ನೇರ ನೇಮಕಾತಿಗಾಗಿ ಶೀಘ್ರದಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿವೆ. ಈ ಮೂರು ಪರೀಕ್ಷೆಗಳಲ್ಲಿರುವ ‘ಸಾಮಾನ್ಯ ಜ್ಞಾನ’ ವಿಷಯಕ್ಕೆ ಸಂಬಂಧಿಸಿದ ಮಾದರಿ ಪ್ರಶ್ನೋತ್ತರಗಳನ್ನು ಇಲ್ಲಿ ನೀಡಲಾಗಿದೆ.

1) ಮಾನವನ ಸಂಪರ್ಕವಿಲ್ಲದ ಸಾವಿರಾರು ವರ್ಷಗಳಷ್ಟು ಹಳೆಯದಾದ ಬೃಹತ್ ಕುಳಿಯೊಳಗೆ (630 ಅಡಿ ಆಳ 176 ದಶಲಕ್ಷ ಕ್ಯೂಬಿಕ್ ಅಡಿಗೂ ಹೆಚ್ಚು ವಿಸ್ತೀರ್ಣ ಹೊಂದಿರುವ) ಅರಣ್ಯವೊಂದು ಚೀನಾ ದೇಶದಲ್ಲಿ ಪತ್ತೆಯಾಗಿದೆ. ಅದು ಆ ದೇಶದ ಯಾವ ಪ್ರದೇಶದಲ್ಲಿದೆ ?

ಎ) ಗುವಾಂಗ್‌ಕ್ಸಿ ಪ್ರದೇಶ

ಬಿ) ಬೀಜಿಂಗ್

ಸಿ) ಝಿಯಾಕ್ಸಿ ಪ್ರದೇಶ

ಡಿ) ಮೇಲಿನ ಯಾವುದೂ ಅಲ್ಲ

ಉತ್ತರ: ಎ

2) ಇತ್ತೀಚಿಗೆ ಕ್ವಾಡ್ ನಾಲ್ಕನೇ ಶೃಂಗ ಸಭೆ ನಡೆಯಿತು. ಹಾಗಾದರೆ 2007ರಲ್ಲಿ ಕ್ವಾಡ್ ಕೂಟದ ರಚನೆಯಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸಿದವರು ಯಾರು?

ಎ) ಮನ್‌ಮೋಹನ್ ಸಿಂಗ್

ಬಿ) ಶಿಂಜೊ ಅಬೆ

ಸಿ) ಡೊನಾಲ್ಡ್ ಟ್ರಂಪ್

ಡಿ) ವ್ಲಾಡಿಮಿರ್ ಪುಟಿನ್

ಉತ್ತರ: ಬಿ

3) ಆಸ್ಟ್ರೇಲಿಯಾ ದೇಶದ ನೂತನ ಪ್ರಧಾನಿಯಾಗಿ ಯಾರು ಆಯ್ಕೆಯಾಗಿದ್ದಾರೆ?

ಎ) ಆ್ಯಂಟನಿ ಅಲ್ಬನೆಸ್

ಬಿ) ಜಿಯೋನಿ ಜಿರೋನ್

ಸಿ) ಪಾಲ್ ದಿ ಬೇಡ್

ಡಿ) ಫ್ರಾನ್ಸಿಸ್ ಜರೋ

ಉತ್ತರ: ಎ

4) ಬ್ರಿಕ್ಸ್ ದೇಶಗಳ ನ್ಯೂ ಡೆವೆಲಪ್‌ಮೆಂಟ್ ಬ್ಯಾಂಕ್‌ನ ಕಚೇರಿಯನ್ನು ಭಾರತದಲ್ಲಿ ಎಲ್ಲಿ ಆರಂಭಿಸಲಾಗಿದೆ ?

ಎ) ಗುಜರಾತ್

ಬಿ) ಮಹಾರಾಷ್ಟ್ರ

ಸಿ) ಕರ್ನಾಟಕ

ಡಿ) ದೆಹಲಿ

ಉತ್ತರ: ಎ

5) ವೇಗವಾಗಿ ಹರಡುವ ರೋಗಗಳಲ್ಲಿ ಮಂಕಿಪಾಕ್ಸ್ ಕೂಡ ಒಂದು. ಈ ರೋಗವು ಸಿಡುಬು ರೋಗದ ಎಲ್ಲಾ ರೋಗಲಕ್ಷಣಗಳನ್ನು ಹೊಂದಿದೆ ಹಾಗಾದರೆ ಇದು______________ ದಿಂದ ಬರುವ ರೋಗವಾಗಿದೆ.
ಎ) ಬ್ಯಾಕ್ಟೀರಿಯಾ

ಬಿ) ವೈರಸ್

ಸಿ) ಫಂಗೈ

ಡಿ) ಪ್ರೊಟೊಜೋವಾ

ಉತ್ತರ: ಬಿ

6) ಕೆಳಗಿನ ಹೇಳಿಕೆಗಳನ್ನು ಗಮನಿಸಿ

1) ಭಾರತ ಸೇರಿದಂತೆ 12 ಇಂಡೊ-ಪೆಸಿಫಿಕ್ ರಾಷ್ಟ್ರಗಳೊಂದಿಗೆ ಅಮೆರಿಕ ಆರಂಭಿಸಿರುವ ಹೊಸ ವ್ಯಾಪಾರ ಒಪ್ಪಂದವನ್ನು(ಐಪಿಇಎಎಫ್) ಚೀನಾ ವಿರೋಧಿಸಿದೆ. ಇದನ್ನು ‘ಆರ್ಥಿಕ ನ್ಯಾಟೊ’ ಎಂದು ಕರೆದಿದೆ.

2) ಭಾರತ ಸೇರಿದಂತೆ 12 ಇಂಡೊ-ಪೆಸಿಫಿಕ್ ರಾಷ್ಟ್ರಗಳೊಂದಿಗೆ ಅಮೆರಿಕ ಆರಂಭಿಸಿರುವ ಹೊಸ ವ್ಯಾಪಾರ ಒಪ್ಪಂದ ಭಾಗವಾಗುವುದಾಗಿ ರಷ್ಯಾ ಕೂಡಾ ಘೋಷಿಸಿದೆ.

ಉತ್ತರ ಸಂಕೇತಗಳು

ಎ) 1 ಮತ್ತು 2ನೇ ಹೇಳಿಕೆಗಳು ಸರಿಯಾಗಿವೆ

ಬಿ) 2ನೇ ಹೇಳಿಕೆ ಮಾತ್ರ ಸರಿಯಾಗಿದೆ.

ಸಿ) 1ನೇ ಹೇಳಿಕೆ ಮಾತ್ರ ಸರಿಯಾಗಿದೆ.

ಡಿ) ಎರಡೂ ಹೇಳಿಕೆಗಳು ತಪ್ಪಾಗಿವೆ.

ಉತ್ತರ: ಸಿ

(ಮಾಹಿತಿ: Spardha Bharati UPSC ಯೂಟ್ಯೂಬ್ ಚಾನೆಲ್)

ಕಾಂಟ್ಯಾಕ್ಟ್ ಲೆನ್ಸ್

ದೃಷ್ಟಿ ಸ್ಪಷ್ಟವಾಗಿ ಕಾಣುವುದಕ್ಕೆ ನೆರವಾಗುವ ಅಥವಾ ಕಣ್ಣಿನ ದೋಷ ಸರಿಪಡಿಸಲು ಬಳಸುವ ಮಸೂರಕ್ಕೆ (ಲೆನ್ಸ್) ಕಾಂಟ್ಯಾಕ್ಟ್ ಲೆನ್ಸ್ (Contact Lense) ಎನ್ನುವರು. ಈ ಲೆನ್ಸ್ ಅನ್ನು ಕಣ್ಣಿನ ಗುಡ್ಡೆಯ ಮೇಲೆ ಇಡಲಾಗುತ್ತದೆ. ಇದರ ಮೂಲಕ ದೃಷ್ಟಿದೋಷ ಸರಿಪಡಿಸಿಕೊಳ್ಳಬಹುದು.

1887ರಲ್ಲಿ ಮೊಟ್ಟ ಮೊದಲ ಕಾಂಟ್ಯಾಕ್ಟ್ ಲೆನ್ಸ್ ಅಭಿವೃದ್ಧಿಪಡಿಸಲಾಯಿತು. ಇದನ್ನು ಅಭಿವೃದ್ಧಿಪಡಿಸಿದವರು ಎ.ಇ.ಫಿಕ್ (A.E. Fick). ಆರಂಭದಲ್ಲಿ ಈ ಲೆನ್ಸ್ಅನ್ನು ಗ್ಲಾಸ್ ಬ್ಲೋಯಿಂಗ್ ಹಾಗೂ ಗಾಜಿನ ಟೆಸ್ಟ್ ಟ್ಯೂಬ್‌ಗಳ ತಳವನ್ನು ಉಜ್ಜುವ ಮತ್ತು ಅದಕ್ಕೆ ಪಾಲಿಷ್ ಕೊಡುವ ಮೂಲಕ ತಯಾರಿಸಲಾಗುತ್ತಿತ್ತು. ಆದರೆ ಇಂತಹ ಗಾಜುಗಳು ಯಶಸ್ವಿಯಾಗಲಿಲ್ಲ. ಅವು ಅಧ್ಯಯನಕ್ಕೆ ಸೀಮಿತವಾಗಿದ್ದವು. ಆದರೆ 1938ರಲ್ಲಿ ಕಾಂಟ್ಯಾಕ್ಟ್ ಲೆನ್ಸ್ ಅಭಿವೃದ್ಧಿಪಡಿಸುವ ಪ್ರಯತ್ನದಲ್ಲಿ ಸ್ವಲ್ಪಮಟ್ಟಿನ ಪ್ರಗತಿ ಕಂಡುಬಂದಿತು. ಆಗ ಪ್ಲಾಸ್ಟಿಕ್ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ತಯಾರಿಸಲಾಯಿತು. 1938ರಿಂದ 1950ರವರೆಗೆ ಕಣ್ಣಿನ ಮುದ್ರೆಯನ್ನು ತೆಗೆದುಕೊಂಡು, ಅದರ ಮೇಲೆ ಕಾಂಟ್ಯಾಕ್ಟ್ ಲೆನ್ಸ್ ರಚಿಸುವ ಪ್ರಯತ್ನ ಆರಂಭಿಸಿ, ಕೊನೆಗೆ ಯಶಸ್ವಿಯಾಯಿತು.

ಕಾಂಟ್ಯಾಕ್ಟ್ ಲೆನ್ಸ್ ಅನ್ನು ಅಳವಡಿಸುವ ಮೊದಲು ಕಣ್ಣನ್ನು ಪರೀಕ್ಷಿಸಿ, ದೃಷ್ಟಿ ದೋಷವನ್ನು ತಿಳಿದುಕೊಳ್ಳಲಾ ಗುವುದು. ಅನಂತರ ಕೆರಾಟಿಮಿಟರ್(Keratometer) ಎಂಬ ಸಾಧನವನ್ನು ಬಳಸಿ, ಕಣ್ಣಿನ ಹೊರಮೈನ (Surface of the eye) ತ್ರಿಜ್ಯವನ್ನು (Radius) ತಿಳಿದುಕೊಳ್ಳಲಾಗುವುದು. ಇದರ ಆಧಾರದ ಮೇಲೆ ಕಾಂಟ್ಯಾಕ್ಟ್ ಲೆನ್ಸ್‌ನ ವ್ಯಾಸ(Diameter) ಮತ್ತು ಲೆನ್ಸ್‌ನ ತೀವ್ರತೆ(Power) ಎಷ್ಟಿರಬೇಕೆಂಬುದನ್ನು ಸೂಚಿಸಲಾಗುತ್ತದೆ. ಈ ವಿವರಗಳನ್ನು ಅನುಸರಿಸಿ, ಕಾಂಟ್ಯಾಕ್ಟ್ ಲೆನ್ಸ್ ಅನ್ನು ತಯಾರಿಸಲಾಗುತ್ತದೆ.

ಕಣ್ಣಿನೊಳಗೆ ಕಾಂಟ್ಯಾಕ್ಟ್ ಲೆನ್ಸ್ ಧರಿಸಿದ್ದರೆ ಬೇರೆಯವರಿಗೆ ಅದು ಗೋಚರವಾಗುವುದಿಲ್ಲ. ಈ ಲೆನ್ಸ್‌ಗಳು ಸುಲಭವಾಗಿ ಕಳೆದು ಹೋಗುವುದಿಲ್ಲ ಅಥವಾ ಮುರಿಯುವುದಿಲ್ಲ. ಆದ್ದರಿಂದ ಕ್ರೀಡಾಪಟುಗಳಿಗೆ ಇದು ತುಂಬ ಸಹಕಾರಿ. ಬಿಸಿಲಿನ ಝಳದಿಂದ ರಕ್ಷಿಸಿಕೊಳ್ಳಲೂ ಈ ಲೆನ್ಸ್ ತುಂಬಾ ಸಹಕಾರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.