ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾನ್ಯ ಜ್ಞಾನ: ಮಾದರಿ ಪ್ರಶ್ನೋತ್ತರ

Published 25 ಮೇ 2023, 1:36 IST
Last Updated 25 ಮೇ 2023, 1:36 IST
ಅಕ್ಷರ ಗಾತ್ರ

1) ಕಾಸ್ಮಿಕ್ ಗುರುತ್ವಾಕರ್ಷಣ ಅಲೆಗಳ ಗ್ರಹಿಸಬಲ್ಲ ಲಿಗೋ(Laser Interferometer Gravitational wave Observatory (ಲಿಗೊ-LIGO)) ಭಾರತದಲ್ಲಿ ಸ್ಥಾಪಿಸಲು ಸಿದ್ದತೆಗಳು ನಡೆಯುತ್ತಿವೆ. ಹಾಗಾದರೆ ಅದು ಎಲ್ಲಿ?

ಎ) ಮಹಾರಾಷ್ಟ್ರದ ಔಂಧನಾಗನಾಥ್ ಬಿ) ತಮಿಳುನಾಡಿನ ಸೇಲಂ ಸಿ) ಆಂಧ್ರಪ್ರದೇಶದ ವಿಶಾಖಪಟ್ಟಣಂ ಡಿ) ಗುಜರಾತ್‌ನ ಗಾಂಧಿನಗರ

ಉತ್ತರ: ಎ

(ವಿವರಣೆ: ಮಹಾರಾಷ್ಟ್ರದ ಔಂಧನಾಗನಾಥ್‌ನಲ್ಲಿ ₹2600 ಕೋಟಿ ವೆಚ್ಚದಲ್ಲಿ (Laser Interferometer Gravitational wave Observatory(ಲಿಗೊ-LIGO) ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಇದು ಕಾಸ್ಮಿಕ್ ಗುರುತ್ವಾಕರ್ಷಣ ಅಲೆಗಳನ್ನು(Cosmic Gravitational Waves) ಗ್ರಹಿಸಬಲ್ಲವು. ಈ ಅಲೆಗಳ ಪ್ರಬಲ ಮೂಲಗಳೆಂದರೆ ಸೂಪರ್‌ನೋವಾಗಳು, ನ್ಯೂಟ್ರಾನ್ ನಕ್ಷತ್ರಗಳು ಮತ್ತು ಬಿಗ್‌ಬ್ಯಾಂಗ್‌ಗಳು ಹಾಗೂ ವಿಶ್ವದಲ್ಲಿರುವ ನಿಗೂಢ ವಸ್ತುವಾಗಿರುವ ಬ್ಲಾಕ್ ಹೋಲ್‌ಗಳು ಸೇರಿವೆ. ಲಿಗೊ ಯೋಜನೆಯು ಈಗಾಗಲೇ ಅಮೆರಿಕದ ವಾಷಿಂಗ್ಟನ್‌ನ ಹ್ಯಾನ್‌ಫೋರ್ಡ್‌ ಮತ್ತು ಲೂಸಿಯಾನದ ಲಿವಿಂಗ್‌ಸ್ಟನ್‌ನಲ್ಲಿ ಕಾಸ್ಮಿಕ್ ಗುರುತ್ವಾಕರ್ಷಣ ಅಲೆಗಳ ಶೋಧಕವನ್ನು ಹೊಂದಿದೆ)

2) ಕೆಳಗಿನ ಹೇಳಿಕೆಗಳನ್ನು ಗಮನಿಸಿ

1) ಅಮೆರಿಕದಲ್ಲಿ ಉನ್ನತ ಶಿಕ್ಷಣಕ್ಕೆ ನೀಡಿದ ಮಹತ್ವದ ಕೊಡುಗೆಗಳಿಗಾಗಿ 2023 ಸಾಲಿನ ಇಮಿಗ್ರೆಂಟ್‌ ಅಚೀವ್‌ಮೆಂಟ್ ಅವಾರ್ಡ್‌ ಪುರಸ್ಕಾರವನ್ನು (Immigrant Achievement Award) ಶಿಕ್ಷಣ ತಜ್ಞೆ, ಭಾರತೀಯ ಮೂಲದ ಅಮೆರಿಕನ್ ಪ್ರಜೆ ನೀಲಿ ಬೆಂಡಪುಡಿ ಅವರಿಗೆ ನೀಡಲಾಗಿದೆ.

2) ನೀಲಿ ಬೆಂಡಪುಡಿ ಅವರನ್ನು ಅಮೆರಿಕ ಮತ್ತು ಭಾರತದ ವಿಶ್ವ ವಿದ್ಯಾಲಯಗಳ ನಡುವಿನ ಸಹಭಾಗಿತ್ವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸ್ಥಾಪಿಸಿರುವ ಕಾರ್ಯಪಡೆಗೆ ಸಹ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಅಲ್ಲದೇ ಇವರು ಈಗಾಗಲೇ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ (Pennsylvania State University) ಅಧ್ಯಕ್ಷರಾಗಿದ್ದಾರೆ.

ಉತ್ತರ ಸಂಕೇತಗಳು

ಎ) 1 ಮಾತ್ರ ಸರಿಯಾಗಿದೆ ಬಿ) 2 ಮಾತ್ರ ಸರಿಯಾಗಿದೆ
ಸಿ) 1 ಮತ್ತು 2 ಎರಡೂ ಸರಿಯಾಗಿವೆ ಡಿ) 2 ಮತ್ತು 3 ಎರಡೂ ತಪ್ಪಾಗಿವೆ

‌ಉತ್ತರ: ಸಿ

3) ನಾನಾ ಕಾರಣಗಳಿಂದ ಅನಾರೋಗ್ಯಕ್ಕೆ ತುತ್ತಾದ ಆನೆಗಳಿಗೆ ಆರೈಕೆ ಮಾಡಲು ನಮ್ಮ ರಾಜ್ಯದಲ್ಲಿ ಮೊದಲ ಆನೆಗಳ ಆರೈಕೆ ಕೇಂದ್ರವನ್ನು (Elephant Care Centre) ಆರಂಭಿಸಲಾದೆ, ಹಾಗಾದರೆ ಆ ಕೇಂದ್ರ ಎಲ್ಲಿದೆ ?

ಎ) ಕೋಲಾರ ತಾಲ್ಲೂಕಿನ ಖಾಜಿಕಲ್ಲಹಳ್ಳಿಯ ಬಳಿಯಲ್ಲಿರುವ ಲಕ್ಷಿಪುರ ಅರಣ್ಯ ವಲಯ.

ಬಿ) ಧರ್ಮಸ್ಥಳದ ಉಜಿರೆ ಪಶ್ಚಿಮ ಘಟ್ಟ ಅರಣ್ಯವಲಯ

ಸಿ) ಬೆಳಗಾವಿಯ ಖಾನಾಪುರ ಅರಣ್ಯ ವಲಯ

ಡಿ) ಉತ್ತರ ಕನ್ನಡದ ಕೈಗಾ ಪ್ರದೇಶದಲ್ಲಿರುವ ಅರಣ್ಯವಲಯ

ಉತ್ತರ: ಎ

4) ಎಲ್‌ಐಸಿ ಯ ಮೊದಲ ಸಿಇಓ ಆಗಿ ಯಾರನ್ನು ನೇಮಕ ಮಾಡಲಾಗಿದೆ?

ಎ) ಸಿದ್ಧಾರ್ಥ ಮೊಹಂತಿ ಬಿ) ಜಯರಾಮ್ ರಮೇಶ್
ಸಿ) ಜಗದೀಶ್ ಕಾರಂತ್ ಜಗದಾಳೆ ಡಿ) ಮಂಜುನಾಥ್ ಪ್ರಸನ್ನ

ಉತ್ತರ: ಎ

5) ಕೆಳಗಿನ ಹೇಳಿಕೆಗಳನ್ನು ಗಮನಿಸಿ

1) ರಿಪೋರ್ಟ್ ವಿದೌಟ್ ಬಾರ್ಡರ್ಸ್ ಹೆಸರಿನ ಸರ್ಕಾರೇತರ ಸಂಸ್ಥೆ ಬಿಡುಗಡೆ ಮಾಡಿದ ವಿಶ್ವ ಪತ್ರಿಕಾ ಸ್ವಾತಂತ್ರ‍್ಯದ ಸೂಚ್ಯಂಕದಲ್ಲಿ ಭಾರತವು 161ನೇ ಸ್ಥಾನವನ್ನು ಹೊಂದಿದೆ.
2) 1985ರಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಿಪೋರ್ಟ್ ವಿದೌಟ್ ಬಾರ್ಡರ್ಸ್ ಸ್ಥಾಪಿಸಲಾಯಿತು. ಯೂನಿವರ್ಸಲ್ ಡಿಕ್ಲೆರೇಷನ್ ಆಫ್ ಹ್ಯೂಮನ್ ರೈಟ್ಸ್‌ನ 19ನೇ ಆರ್ಟಿಕಲ್‌ನ ತತ್ವದಡಿ ಇದರ ಸ್ಥಾಪನೆ ಮಾಡಲಾಗಿದೆ.

3) ರಾಜಕೀಯ ಸಂದರ್ಭ, ಕಾನೂನು ಚೌಕಟ್ಟು, ಆರ್ಥಿಕ ಸಂದರ್ಭ ಹಾಗೂ ಪತ್ರಕರ್ತರ ಸುರಕ್ಷತೆ ಎಂಬ ಐದು ವಿಭಾಗಳ ಆಧಾರದಲ್ಲಿ ವಿಶ್ವ ಪತ್ರಿಕಾ ಸ್ವಾತಂತ್ರ‍್ಯದ ಸೂಚ್ಯಂಕ ಸಿದ್ದಪಡಿಸಲಾಗಿದೆ.

4) ವಿಶ್ವ ಪತ್ರಿಕಾ ಸ್ವಾತಂತ್ರ‍್ಯದ ಸೂಚ್ಯಂಕವನ್ನು 2002ರಿಂದ ಬಿಡುಗಡೆ ಮಾಡಲಾಗುತ್ತಿದೆ.

ಉತ್ತರ ಸಂಕೇತಗಳು

ಎ) 1, 2 ಮತ್ತು 3 ಮಾತ್ರ ಸರಿಯಾಗಿದೆ

ಬಿ) 2, 3 ಮತ್ತು 4 ಮಾತ್ರ ಸರಿಯಾಗಿದೆ

ಸಿ) 1 ಮತ್ತು 2 ಮಾತ್ರ ಸರಿಯಾಗಿದೆ

ಡಿ) 1 ರಿಂದ 4ರತನಕ ಎಲ್ಲವೂ ಸರಿಯಾಗಿದೆ

ಉತ್ತರ: ಡಿ

6) ಯುಟ್ರಿಕ್ಯುಲೇರಿಯಾ ರ‍್ಸೆಲ್ಲಾಟಾ(Utricularia Furcellata). ಈ ಸಸ್ಯ ಕ್ರಿಮಿ-ಕೀಟಗಳನ್ನು ಬೇಸ್ತು ಬೀಳಿಸಿ, ಅವುಗಳನ್ನೇ ತಿಂದು ಬದುಕುತ್ತದೆ. ಇಂಥ ಸಸ್ಯವನ್ನು ಇತ್ತೀಚಿಗೆ ಎಲ್ಲಿ ಪತ್ತೆಯಾಗಿದೆ ?  

ಎ) ಉತ್ತರಾಖಂಡದ ಸುಂದರ್ ಮಂಡಲ ಕಣಿವೆ
ಬಿ) ಕರ್ನಾಟಕದ ಪಶ್ಚಿಮ ಘಟ್ಟದ ಭಾಗ
ಸಿ) ತಮಿಳುನಾಡಿನ ಪೂರ್ವ ಘಟ್ಟ ಭಾಗ
ಡಿ) ಉತ್ತರ ಪ್ರದೇಶದ ವಾರಣಾಸಿಯ ಉತ್ತರ ಭಾಗದಲ್ಲಿ

ಉತ್ತರ: ಎ

7) ಕೆಳಗಿನ ಹೇಳಿಕೆಗಳನ್ನು ಗಮನಿಸಿ

1) ಬ್ರಿಟಿಷ್ ಪ್ಯಾರಾಲಿಪಿಕ್ಸ್ ಆಗಿರುವ  ಸ್ಪ್ರಿಂಟರ್ ಜಾನ್ ಮೆಕ್‌ಫಾಲ್ (John McFall) ಅವರನ್ನು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯು ಗಗನಯಾತ್ರಿಯಾಗಿ ಆಯ್ಕೆ ಮಾಡಿದೆ. ಹೀಗಾಗಿ ವಿಶ್ವದ ಮೊದಲ ಅಂಗವಿಕಲ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2) ಜಾನ್ ಮೆಕ್‌ಪಾಲ್ (John McFall) ಅವರು 19 ವರ್ಷದವರಾಗಿದ್ದಾಗ ಮೋಟಾರ್ ಸೈಕಲ್ ಅಪಘಾತವೊಂದರಲ್ಲಿ ಕಾಲನ್ನು ಕಳೆದುಕೊಂಡರು. ನಂತರದ ದಿನಗಳಲ್ಲಿ ವೈದ್ಯಕೀಯ ಶಿಕ್ಷಣವನ್ನು ಪಡೆದು ವೈದ್ಯರಾಗಿ ವೃತ್ತಿ ಜೀವನವನ್ನು ನಡೆಸುತ್ತಿದ್ದಾರೆ.

3) 2008ರಲ್ಲಿ ಬೀಜಿಂಗ್‌ನಲ್ಲಿ ನಡೆದ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಬ್ರಿಟನ್ ದೇಶವನ್ನು ಜಾನ್‌ಮೆಕ್ ಫಾಲ್ ಪ್ರತಿನಿಧಿಸಿದ್ದರು

4) 2022ರಲ್ಲಿ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯು ಒಟ್ಟು 22 ವ್ಯಕ್ತಿಗಳನ್ನು ಗಗನಯಾತ್ರಿಯಾಗಿ ಭಾಗವಹಿಸಲು ತರಬೇತಿಗೆ ಆಯ್ಕೆ ಮಾಡಿತ್ತು

ಉತ್ತರ ಸಂಕೇತಗಳು

ಎ) 2 ಮತ್ತು 3 ಹೇಳಿಕೆಗಳು ಮಾತ್ರ ಸರಿಯಾಗಿವೆ
ಬಿ) 2 ಮತ್ತು 4 ಹೇಳಿಕೆಗಳು ಮಾತ್ರ ಸರಿಯಾಗಿವೆ
ಸಿ) 2 ರಿಂದ 3 ತನಕದ ಹೇಳಿಕೆಗಳು ಮಾತ್ರ ಸರಿಯಾಗಿವೆ
ಡಿ) 1 ರಿಂದ 4 ತನಕ ಎಲ್ಲಾ ಹೇಳಿಕೆಗಳು ಸರಿಯಾಗಿವೆ

ಉತ್ತರ:ಡಿ

(ಮಾಹಿತಿ: Spardha Bharati UPSC ಯೂಟ್ಯೂಬ್ ಚಾನೆಲ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT