ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧಾ ವಾಣಿ: ಬಹುಆಯ್ಕೆಯ ಪ್ರಶ್ನೆಗಳು

ಸ್ಪರ್ಧಾ ವಾಣಿ
Published 24 ಏಪ್ರಿಲ್ 2024, 22:15 IST
Last Updated 24 ಏಪ್ರಿಲ್ 2024, 22:15 IST
ಅಕ್ಷರ ಗಾತ್ರ

1.ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ
ಎ. ಭಾರತದ ಮೂರು ಪರ್ವತ ರೈಲುಮಾರ್ಗಗಳನ್ನು ಮೌಂಟೇನ್ ರೈಲ್ವೇಸ್ ಆಫ್ ಇಂಡಿಯಾ ಎಂಬ ಹೆಸರಿನಲ್ಲಿ UNESCO ವಿಶ್ವ ಪರಂಪರೆಯ ತಾಣವೆಂದು ಒಟ್ಟಾರೆಯಾಗಿ ಹೆಸರಿಸಲಾಗಿದೆ.

ಬಿ. ನಾಲ್ಕನೇ ರೈಲುಮಾರ್ಗ, ಮಾಥೆರಾನ್ ಹಿಲ್ ರೈಲ್ವೇ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ತಾತ್ಕಾಲಿಕ ಪಟ್ಟಿಯಲ್ಲಿದೆ.

ಮೇಲಿನ ಹೇಳಿಕೆಗಳಲ್ಲಿ ಸರಿಯಾದ/ವುಗಳನ್ನು ಗುರುತಿಸಿ

1.ಹೇಳಿಕೆ ಎ ಸರಿಯಾಗಿದೆ

2.ಹೇಳಿಕೆ ಬಿ ಸರಿಯಾಗಿದೆ

3. ಎರಡೂ ಹೇಳಿಕೆಗಳು ತಪ್ಪಾಗಿವೆ

4. ಎರಡೂ ಹೇಳಿಕೆಗಳು ಸರಿಯಾಗಿವೆ

⇒ಉತ್ತರ: (4)

2. ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ

ಎ. ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೇ ಪರ್ವತಪ್ರದೇಶದ ಮೊದಲ ಪ್ರಯಾಣಿಕ ರೈಲುಮಾರ್ಗವಾಗಿದೆ.

ಬಿ. ಇದನ್ನು ಡಾರ್ಜಿಲಿಂಗ್ ಸ್ಟೀಮ್ ಟ್ರಾಮ್‌ವೇ ಕಂಪನಿಯು 1881 ರಲ್ಲಿ ನಿರ್ಮಿಸಿತು.

ಮೇಲಿನ ಹೇಳಿಕೆಗಳಲ್ಲಿ ಸರಿಯಾದ/ವುಗಳನ್ನು ಗುರುತಿಸಿ
1. ಹೇಳಿಕೆ ಎ ಸರಿಯಾಗಿದೆ
2. ಹೇಳಿಕೆ ಬಿ ಸರಿಯಾಗಿದೆ
3. ಎರಡೂ ಹೇಳಿಕೆಗಳು ತಪ್ಪಾಗಿವೆ
4. ಎರಡೂ ಹೇಳಿಕೆಗಳು ಸರಿಯಾಗಿವೆ
⇒ಉತ್ತರ: (4)

3.ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ

ಎ. ಡಾರ್ಜಿಲಿಂಗ್ ಹಿಮಾಲಯನ್ ರೈಲುಮಾರ್ಗವು ಟಾಯ್ ಟ್ರೈನ್ ಎಂದು ಜನಪ್ರಿಯವಾಗಿದೆ.

ಬಿ. ಈ ಮಾರ್ಗವನ್ನು ಭಾರತೀಯ ರೈಲ್ವೇ ನಿರ್ವಹಿಸುತ್ತದೆ.

ಮೇಲಿನ ಹೇಳಿಕೆಗಳಲ್ಲಿ ಸರಿಯಾದ/ವುಗಳನ್ನು ಗುರುತಿಸಿ

1.ಹೇಳಿಕೆ ಎ ಸರಿಯಾಗಿದೆ

2.ಹೇಳಿಕೆ ಬಿ ಸರಿಯಾಗಿದೆ

3. ಎರಡೂ ಹೇಳಿಕೆಗಳು ತಪ್ಪಾಗಿವೆ

4. ಎರಡೂ ಹೇಳಿಕೆಗಳು ಸರಿಯಾಗಿವೆ

⇒ಉತ್ತರ: (4)

4.ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ

ಎ. ಮಾಥೆರಾನ್ ಹಿಲ್ ರೈಲ್ವೆಯು 2 ಅಡಿ (610 ಮಿಮೀ) ನ್ಯಾರೋ-ಗೇಜ್ ರೈಲುಮಾರ್ಗವಾಗಿದೆ ಮತ್ತು ಪಶ್ಚಿಮ ಘಟ್ಟಗಳಲ್ಲಿನ ನೆರಲ್ ಮತ್ತು ಮಾಥೆರಾನ್ ನಡುವೆ 21 ಕಿಮೀ
(13 ಮೈಲಿ) ದೂರ ಸಾಗುತ್ತದೆ.

ಬಿ.ಇದರ ನಿರ್ಮಾಣದ ನೇತೃತ್ವ ವನ್ನು ಅಬ್ದುಲ್ ಪೀರ್‌ಭಾಯ್ ವಹಿಸಿದ್ದರು.

ಮೇಲಿನ ಹೇಳಿಕೆಗಳಲ್ಲಿ ಸರಿಯಾದ/ವುಗಳನ್ನು ಗುರುತಿಸಿ

1.ಹೇಳಿಕೆ ಎ ಸರಿಯಾಗಿದೆ

2.ಹೇಳಿಕೆ ಬಿ ಸರಿಯಾಗಿದೆ

3. ಎರಡೂ ಹೇಳಿಕೆಗಳು ತಪ್ಪಾಗಿವೆ

4. ಎರಡೂ ಹೇಳಿಕೆಗಳು ಸರಿಯಾಗಿವೆ

⇒ಉತ್ತರ: (4)

4. ವಡ್ಡಾರಾಧನೆಯು ಕನ್ನಡದ ಪ್ರಥಮ ಕಥಾಗುಚ್ಛವಾಗಿದ್ದು
ಶಿವಕೋಟ್ಯಾಚಾರ್ಯನು ಇದರ ಕರ್ತೃ.

ಎ. ಶಬ್ದಮಣಿದರ್ಪಣವು ವ್ಯಾಕರಣ ಸಂಬಂಧಿಕೃತಿಯಾಗಿದ್ದು
ಕೇಶೀರಾಜನು ಇದನ್ನು ಬರೆದನು.

ಈ ಹೇಳಿಕೆಗಳಿಗೆ ಸಂಬಂಧಿಸಿದಂತೆ ಸರಿಯಾದ ಉತ್ತರ ಯಾವುದು.

1 )ಹೇಳಿಕೆ a ಸರಿ ಮತ್ತು b ತಪ್ಪಾಗಿವೆ.
2 ) ಹೇಳಿಕೆ b ಸರಿ ಮತ್ತು a ತಪ್ಪಾಗಿವೆ.
3) ಎರಡೂ ಹೇಳಿಕೆಗಳು ಸರಿಯಾಗಿವೆ.
4) ಎರಡೂ ಹೇಳಿಕೆಗಳು ತಪ್ಪಾಗಿವೆ.

⇒ಉತ್ತರ (3)

5.ಕನ್ನಡದಲ್ಲಿ ರತ್ನತ್ರಯರು ಎಂದು ಈ ಕೆಳಗಿನವರಲ್ಲಿ ಯಾರನ್ನು ಕರೆಯಲಾಗುತ್ತದೆ ?

a ) ಪಂಪ,ಪೊನ್ನ,ರನ್ನ

b ) ಪೊನ್ನ,ರನ್ನ,ಜನ್ನ

c ) ಪಂಪ,ರನ್ನ,ಜನ್ನ

d ) ಪಂಪ,ಪೊನ್ನ,ಜನ್ನ

⇒ಉತ್ತರ : a

6.ಕನ್ನಡದ ಕವಿ ಚಕ್ರವರ್ತಿಗಳು ಎಂದು ಯಾರನ್ನು ಕರೆಯಲಾಗುತ್ತದೆ ?

a)ರನ್ನ ,ಪೊನ್ನ,ಪಂಪ

b ) ಪೊನ್ನ,ರನ್ನ,ಜನ್ನ

c ) ಪಂಪ,ರನ್ನ,ಜನ್ನ

d ) ಪಂಪ,ಪೊನ್ನ,ಜನ್ನ

⇒ಉತ್ತರ : b

7.ಗ್ರೀನಿಂಗ್ ಅಂಡ್ ರಿಸ್ಟೋರೇಶನ್ ಆಫ್ ವೇಸ್ಟ್ ಲ್ಯಾಂಡ್ ವಿತ್ ಆಗ್ರೋಫಾರೆಸ್ಟ್ರಿ (GROW) ವರದಿಯನ್ನು ಈ ಕೆಳಗಿನ

ಯಾವ ಸಂಸ್ಥೆಯು ಬಿಡುಗಡೆ ಮಾಡಿತು ?

(1) ಭಾರತೀಯ ವನ್ಯಜೀವಿ ಸಂಸ್ಥೆ

(2) ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ

(3) NITI ಆಯೋಗ

(4) ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ

⇒ಉತ್ತರ: (3)

8. ಭಾರತದಲ್ಲಿ ರಾಷ್ಟ್ರೀಯ ಕೃಷಿ ಅರಣ್ಯ ನೀತಿಯನ್ನು ಯಾವಾಗ ಪರಿಚಯಿಸಲಾಯಿತು ?

(1) 2005 (2) 2010

(3) 2014 (4) 2018

⇒ಉತ್ತರ: (3)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT