ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ನವೋದಯ' ಪ್ರವೇಶ ಪರೀಕ್ಷೆ: ಮಾನಸಿಕ ಸಾಮರ್ಥ್ಯ ಪರೀಕ್ಷೆ ಮಾದರಿ ಪ್ರಶ್ನೋತ್ತರಗಳು

Last Updated 9 ಅಕ್ಟೋಬರ್ 2022, 20:45 IST
ಅಕ್ಷರ ಗಾತ್ರ

ಹಿಂದಿನ ಸಂಚಿಕೆಯಲ್ಲಿ ಮಾನಸಿಕ ಸಾಮರ್ಥ್ಯ ವಿಭಾಗದ ಮೂರು ಮತ್ತು ನಾಲ್ಕು ಭಾಗಗಳ ಬಗ್ಗೆ ತಿಳಿಸಲಾಗಿತ್ತು. ಈ ಸಂಚಿಕೆಯಲ್ಲಿ ಉಳಿದ ಭಾಗಗಳ ಬಗ್ಗೆ ಅರಿಯೋಣ.

ಹಿಂದಿನ ಮೂರು ಸಂಚಿಕೆಗಳಲ್ಲಿ ಜವಾಹರ ನವೋದಯ ವಿದ್ಯಾಲಯಗಳ ಬಗ್ಗೆ ಕಿರು ಪರಿಚಯ, ಪ್ರವೇಶಾತಿ, ಪ್ರವೇಶ ಪರೀಕ್ಷೆಗಳು, ಮಾದರಿ ಪ್ರಶ್ನೆಪತ್ರಿಕೆಗಳ (ಮಾನಸಿಕ ಸಾಮರ್ಥ್ಯ ಪರೀಕ್ಷೆ, ಅಂಕಗಣಿತ ಹಾಗೂ ಭಾಷೆ) ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಲಾಗಿತ್ತು. 6 ನೆಯ ತರಗತಿ ಪ್ರವೇಶ ಪರೀಕ್ಷೆಯ ‘ಮಾನಸಿಕ ಸಾಮರ್ಥ್ಯ’ ಪರೀಕ್ಷೆಯ ಪ್ರಶ್ನೆಗಳ ಪತ್ರಿಕೆಯ ಕೆಲವು ಉದಾಹರಣೆಗಳನ್ನೂ ನೋಡಿದೆವು. ಈ ಸಂಚಿಕೆಯಲ್ಲಿ ಮಾನಸಿಕ ಸಾಮರ್ಥ್ಯ ಪರೀಕ್ಷೆಯ ಮೂರು ಭಾಗಗಳನ್ನು ನೀಡಲಾಗಿದೆ .

ಭಾಗ 5
ಈ ವಿಭಾಗದಲ್ಲಿ ಪ್ರಶ್ನೆಗಳು ಹೀಗಿರುತ್ತವೆ; ಎಡಭಾಗದಲ್ಲಿ ಮೂರು ಚಿತ್ರಗಳನ್ನು ಕೊಟ್ಟಿರುತ್ತಾರೆ ಮತ್ತು ನಾಲ್ಕನೆಯ ಚಿತ್ರದ ಸ್ಥಳದಲ್ಲಿ ಪ್ರಶ್ನಾರ್ಥಕ ಚಿಹ್ನೆಯನ್ನು ಕೊಟ್ಟಿರುತ್ತಾರೆ. ಮೊದಲ ಎರಡು ಚಿತ್ರಗಳಲ್ಲಿ ಯಾವುದೋ ರೀತಿಯ ಸಂಬಂಧವಿರುತ್ತದೆ. ಹಾಗೆಯೇ ಮೂರನೆಯ ಮತ್ತು ನಾಲ್ಕನೆಯ ಚಿತ್ರಗಳಿಗೂ ಒಂದು ಸಂಬಂಧವಿರುತ್ತದೆ. ಉತ್ತರ ರೂಪದ ಚಿತ್ರಗಳಲ್ಲಿ ಕೊಟ್ಟಿರುವ ನಾಲ್ಕು ಆಯ್ಕೆಗಳಲ್ಲಿ (A,B,C,D) ಯಾವುದೋ ಒಂದು ಆಯ್ಕೆಯು ಪ್ರಶ್ನೆಯ ಮೂರನೆಯ ಚಿತ್ರದೊಂದಿಗೆ ಸಂಬಂಧಿಸಿರುತ್ತದೆ. ಆ ಆಯ್ಕೆಯನ್ನು ಕಂಡುಹಿಡಿದು ಉತ್ತರಿಸಬೇಕು.
ಉದಾಹರಣೆಗೆ,

ಈ ರೀತಿಯ ಪ್ರಶ್ನೆಗಳಲ್ಲಿ, ಮೊದಲ ಎರಡು ಚಿತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿ ಅವುಗಳ ನಡುವಿನ ಸಂಬಂಧಗಳನ್ನು ತಿಳಿಯಿರಿ.

ಈ ಪ್ರಶ್ನೆಯ ಎಡಭಾಗದ ಮೊದಲ ಚಿತ್ರವನ್ನು ಗಮನಿಸಿ. ವೃತ್ತದ ಒಳಭಾಗದಲ್ಲಿ ಮೇಲ್ಗಡೆ ಒಂದು ತ್ರಾಪಿಜ್ಯವೂ ಮತ್ತು ಕಳಗೆ ಒಂದು ತ್ರಿಭುಜವೂ ಇದೆ. ಎರಡನೆಯ ಚಿತ್ರದ ವೃತ್ತದ ಒಳಭಾಗವನ್ನು ಗಮನಿಸಿ, ಇಲ್ಲಿ ಮೇಲಿದ್ದ ತ್ರಾಪಿಜ್ಯದ ಒಳಗೆ ಕೆಳಗಿದ್ದ ತ್ರಿಭುಜವು ಚಲಿಸಿದೆ ಅಲ್ಲವೇ?

ಹಾಗೆಯೇ, ಎಡಭಾಗದ ಮೂರನೆಯ ಚಿತ್ರದಲ್ಲಿ ತ್ರಿಭುಜದ ಒಳಗೆ, ಮೇಲ್ಭಾಗದಲ್ಲಿ ಒಂದು ಚೌಕವೂ ಅದರ ಕೆಳಗೆ ಒಂದು ಸಣ್ಣ ವೃತ್ತವೂ ಇದೆಯಲ್ಲವೇ? ಹಾಗಾದರೆ, ನಾಲ್ಕನೆಯ ಚಿತ್ರ ಯಾವುದಿರಬೇಕು? ಮೊದಲೆರೆಡು ಚಿತ್ರಗಳ ಸಂಬಂಧದಂತೆ, ನಾಲ್ಕನೆಯ ಚಿತ್ರದಲ್ಲಿ, ತ್ರಿಭುಜದ ಒಳಭಾಗದಲ್ಲಿ, ಚೌಕದ ಒಳಗೆ ವೃತ್ತವು ಇರಬೇಕಲ್ಲವೇ? ಹಾಗಾಗಿ (B) ಸರಿ ಉತ್ತರವಾಗುತ್ತದೆ.

2. ಎಡಬದಿಯ ಮೊದಲ ಎರಡು ಚಿತ್ರಗಳನ್ನು ಗಮನಿಸಿ, ಮೂರನೆಯ ಚಿತ್ರಕ್ಕೆ ಹೊಂದುವ ಆಯ್ಕೆಯ ಉತ್ತರವನ್ನು ನೀವೇ ಕಂಡುಹಿಡಿಯಬಹುದೇ? ಪ್ರಯತ್ನಿಸಿ.

ಭಾಗ 6
ಇಲ್ಲಿ, ಎಡಭಾಗದಲ್ಲಿ ಒಂದು ಜ್ಯಾಮಿತೀಯ ಆಕಾರವನ್ನು ಕೊಟ್ಟಿರುತ್ತಾರೆ. ಈ ಆಕೃತಿಯು ಲೋಪವಾಗಿರುತ್ತದೆ (ಅಪೂರ್ಣವಾಗಿರುತ್ತದೆ). ಬಲಭಾಗದಲ್ಲಿ ಕೊಟ್ಟಿರುವA,B,C,D ಉತ್ತರ ರೂಪದ ಆಕೃತಿಗಳಲ್ಲಿ ಒಂದು ಆಕೃತಿಯು ಪ್ರಶ್ನೆ ರೂಪದ ಆಕೃತಿಯಲ್ಲಿ ಲೋಪವಾದ ಭಾಗಕ್ಕೆ ಸರಿಯಾಗಿ ಹೊಂದಿ, ಪ್ರಶ್ನೆರೂಪದ ಆಕೃತಿಯನ್ನು ಪೂರ್ಣಗೊಳಿಸುತ್ತದೆ (ದಿಕ್ಕನ್ನು ಬದಲಿಸದೆ). ಆ ಆಕೃತಿಯನ್ನು ಕಂಡುಹಿಡಿದು ಉತ್ತರಿಸಬೇಕು.

ಉದಾಹರಣೆಗೆ,

1

ದೃಶ್ಯೀಕರಣದ ಸಹಾಯದಿಂದ ಈ ರೀತಿಯ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರಿಸಬಹುದು. ಎಡಭಾಗದ ಅಪೂರ್ಣ ಚಿತ್ರವನ್ನು ಗಮನಿಸಿ. ಬಲಭಾಗದ ಯಾವ ಆಕೃತಿಯು ಎಡಭಾಗದ ಅಪೂರ್ಣ ಚಿತ್ರವನ್ನು (ದಿಕ್ಕನ್ನು ಬದಲಿಸದೆ) ಪೂರ್ಣಗೊಳಿಸುತ್ತದೆ ಎಂದು ಗಮನಿಸಿ. A,B ಮತ್ತು D ಗಳು ಹೊಂದುವುದಿಲ್ಲ ಎಂದು ಮೇಲ್ನೋಟಕ್ಕೇ ತಿಳಿಯುತ್ತದೆ ಅಲ್ಲವೇ? ಅದ್ದರಿಂದ ಸರಿ ಉತ್ತರ C !

2. ಈ ಕೆಳಗಿನ ಪ್ರಶ್ನೆಗೆ ಸರಿಯಾದ ಆಯ್ಕೆ ಏನು?

ಭಾಗ 7
ಇಲ್ಲಿ, ಒಂದು ಪ್ರಶ್ನೆರೂಪದ ಅಕೃತಿಯನ್ನು ಎಡಬದಿಗೆ ಕೊಡಲಾಗಿರುತ್ತದೆ. A,B,C,D ಎಂಬ ನಾಲ್ಕು ಉತ್ತರ ರೂಪದ ಆಕೃತಿಗಳನ್ನು ಬಲಬದಿಗೆ ಕೊಡಲಾಗಿರುತ್ತದೆ. ಪ್ರಶ್ನೆಯಲ್ಲಿ ತೋರಿಸಿದ X,Y ಜಾಗಕ್ಕೆ ಕನ್ನಡಿಯನ್ನು ಹಿಡಿದಾಗ, ಬಲಭಾಗದ ನಾಲ್ಕು A,B,C,D ಆಯ್ಕೆಗಳಲ್ಲಿ ಯಾವುದೋ ಒಂದು ಆಯ್ಕೆಯು ಎಡಭಾಗದ ಚಿತ್ರದ ಸರಿಯಾದ ಪ್ರತಿಬಿಂಬವಾಗಿರುತ್ತದೆ. ಆ ಸರಿಹೊಂದುವ ಪ್ರತಿಬಿಂಬವನ್ನು ಕಂಡುಹಿಡಿಯಬೇಕು.

ಈ ರೀತಿ ಪ್ರಶ್ನೆಗಳಿಗೆ ಉತ್ತರಿಸಲು, ಕನ್ನಡಿಯಲ್ಲಿ ಪ್ರತಿಬಿಂಬಗಳು ಹೇಗೆ ಕಾಣಿಸುತ್ತವೆ ಎಂದು ತಿಳಿದಿರಬೇಕು. ನಿಮಗೆ ತಿಳಿದಿರುವಂತೆ ಕನ್ನಡಿಯ ಪ್ರತಿಬಿಂಬದಲ್ಲಿ ಎಡ ಮತ್ತು ಬಲ ಭಾಗಗಳು ಅದಲು-ಬದಲಾಗಿರುತ್ತವೆ ಅಲ್ಲವೇ? ಚಿಕ್ಕಂದಿನಲ್ಲಿ ನಾವು ‘ಕನ್ನಡಿ’ ಆಟ ಆಡುತ್ತಿದ್ದೆವು. ಕೆಲವು ಬಾರಿ ಈ ‘ಕನ್ನಡಿ’ ಆಟವೂ ಈ ರೀತಿಯ ಪ್ರಶ್ನೆಗಳಿಗೆ ಉತ್ತರಿಸಲು ಸಹಾಯವಾಗಬಹುದು ! ನಿಮಗೆ ಈ ಆಟದ ಬಗ್ಗೆ ತಿಳಿದಿರದಿದ್ದರೆ, ಮುಂದಿನ ಸಂಚಿಕೆಗಳಲ್ಲಿ ತಿಳಿಸುತ್ತೇನೆ.

ಈ ಭಾಗದ, ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ಅಕ್ಷರಗಳ ಪ್ರತಿಬಿಂಬಗಳು ಕನ್ನಡಿಯಲ್ಲಿ ಹೇಗೆ ಕಾಣಿಸುತ್ತವೆ ಎಂದು ತಿಳಿದಿರಬೇಕಾಗುತ್ತದೆ. ಅದಕ್ಕಾಗಿ ಪ್ರತಿಯೊಂದು ಅಕ್ಷರವನ್ನೂ ಒಂದು ಹಾಳೆಯಲ್ಲಿ ಬರೆದು ಕನ್ನಡಿಯಲ್ಲಿ ಅದರ ಪ್ರತಿಬಿಂಬವನ್ನು ಗಮನಿಸಿ.

1. ಉದಾಹರಣೆಗೆ,

ಇಲ್ಲಿ, ಎಡಭಾಗದ ಪ್ರಶ್ನೆಯ ಆಕೃತಿಯನ್ನು ಕನ್ನಡಿಯ ಮುಂದೆ ( X,Y ಜಾಗಕ್ಕೆ) ಹಿಡಿದು ನೋಡಿರಿ. ಮತ್ತು ಸರಿಯಾದ ಆಯ್ಕೆಯನ್ನು ತಿಳಿಸಿ.

2. ಕೆಲವು ಪ್ರಶ್ನೆಗಳು ಅಕ್ಷರಗಳ ಜೊತೆ ಕೆಲವು ಆಕೃತಿಗಳನ್ನೂ ಹೊಂದಿರುತ್ತವೆ ಹಾಗೆಯೇ ಕೆಲವು ಪ್ರಶ್ನೆಗಳಲ್ಲಿ ಕೇವಲ ಆಕೃತಿಗಳೇ ಇರುತ್ತವೆ. ಈ ಕೆಳಗಿನ ಉದಾಹರಣೆಯನ್ನು ಗಮನಿಸಿ.

ಈ ರೀತಿಯ ಪ್ರಶ್ನೆಗಳಿಗೆ ಉತ್ತರಿಸುವ ವಿಧಾನವನ್ನು ಮುಂದಿನ ಸಂಚಿಕೆಯಲ್ಲಿ ತಿಳಿಯೋಣ. ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ಜಾಲತಾಣವನ್ನು ನೋಡಿ.

(ಲೇಖಕರು: ನಿರ್ದೇಶಕರು, ಸ್ಮಾರ್ಟ್ ಸೆರೆಬ್ರಮ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು)

ಮುಂದುವರಿಯುವುದು

ಪ್ರಶ್ನೆ ಕಳಿಸಬಹುದು

ಜವಾಹರ ನವೋದಯ ವಿದ್ಯಾಲಯಗಳ ಪ್ರವೇಶ ಪರೀಕ್ಷೆ ಕುರಿತು ಏನಾದರೂ ಪ್ರಶ್ನೆಗಳು, ಅಭಿಪ್ರಾಯಗಳಿದ್ದರೆ, shikshana@prajavani.co.in ಮೇಲ್‌ಗೆ ಬರೆದು ಕಳುಹಿಸಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT