ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಟ್‌: ಭೌತವಿಜ್ಞಾನ ಪತ್ರಿಕೆ ಕ್ಲಿಷ್ಟಕರ ಎಂದ ವಿದ್ಯಾರ್ಥಿಗಳು, ತಜ್ಞರು

Last Updated 12 ಸೆಪ್ಟೆಂಬರ್ 2021, 16:52 IST
ಅಕ್ಷರ ಗಾತ್ರ

ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್ ಕೋರ್ಸ್‍ಗಳ ಪ್ರವೇಶಕ್ಕೆ ಭಾನುವಾರ ನಡೆದ ರಾಷ್ಟ್ರೀಯ ಅರ್ಹ
ತಾ ಪ್ರವೇಶ ಪರೀಕ್ಷೆಯಲ್ಲಿ (ನೀಟ್) ಭೌತವಿಜ್ಞಾನ ಪತ್ರಿಕೆ ಕ್ಲಿಷ್ಟಕರವಾಗಿತ್ತು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

ರಸಾಯನವಿಜ್ಞಾನ ಮತ್ತು ಜೀವವಿಜ್ಞಾನ ಪತ್ರಿಕೆಗಳಲ್ಲಿ ನೇರವಾದ ಪ್ರಶ್ನೆಗಳಿದ್ದರೆ, ಭೌತವಿಜ್ಞಾನ ಪತ್ರಿಕೆಯಲ್ಲಿನ ಪ್ರಶ್ನೆಗಳು ಕಷ್ಟಕರ ಆಗಿದ್ದವು ಎಂದು ವಿದ್ಯಾರ್ಥಿಗಳು ಮತ್ತು ವಿಷಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ (ಎನ್‌ಟಿಎ) ನಿರ್ದೇಶನ ಮತ್ತು ಕೋವಿಡ್‌ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ರಾಜ್ಯದಲ್ಲಿ ಬೆಂಗಳೂರು, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಕಲಬುರ್ಗಿ, ಮೈಸೂರು, ಮಂಗಳೂರು, ಉಡುಪಿ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದರು.

‘ಬಹುತೇಕ ಪ್ರಶ್ನೆಗಳು ಎನ್‌ಸಿಇ ಆರ್‌ಟಿ ಪಠ್ಯ ಪುಸ್ತಕದಿಂದ ಇದ್ದವು. ಒಟ್ಟಿನಲ್ಲಿ ವಿದ್ಯಾರ್ಥಿ ಸ್ನೇಹಿ ಪ್ರಶ್ನೆಗಳೇ ಇದ್ದವು’ ಎಂದೂ ದೀಕ್ಷಾ ಸಂಸ್ಥೆಯ ಅಕಾಡೆಮಿಕ್‌ ವಿಭಾಗದ ಮುಖ್ಯಸ್ಥರಾದ ಮಿಲಿಂದ್‌ ಚಿಪ್ಪಲಿಕಟ್ಟಿ ಹೇಳಿದರು.

‘ಜೀವವಿಜ್ಞಾನದಲ್ಲಿ 69 ಸುಲಭ ಪ್ರಶ್ನೆಗಳು, 27 ಸಾಮಾನ್ಯ, 9 ಕಷ್ಟದ ಪ್ರಶ್ನೆಗಳು ಇದ್ದವು. ಸಾಮಾನ್ಯ ವಿದ್ಯಾರ್ಥಿ ಜೀವವಿಜ್ಞಾನದಲ್ಲಿ 250ರಿಂದ 260 ಅಂಕ ಗಳಿಸಬಹುದು. ಭೌತವಿಜ್ಞಾನದ ಪತ್ರಿಕೆಯ ಪ್ರಶ್ನೆಗಳು ಕ್ಲಿಷ್ಟಕರವಾಗಿದ್ದರಿಂದ 50ರಿಂದ 60 ಅಂಕ, ರಸಾಯನವಿಜ್ಞಾನದಲ್ಲಿ 110ರಿಂದ 110 ಅಂಕ ಪಡೆಯಬಹುದು. ಪಠ್ಯದಿಂದ ಹೊರತಾದ ಪ್ರಶ್ನೆಗಳು ಇರಲಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಭೌತವಿಜ್ಞಾನದ ಪರೀಕ್ಷೆ ಸ್ವಲ್ಪ ಕಷ್ಟ ಇತ್ತು’ ಎಂದೂ ಮಿಲಿಂದ್‌ ತಿಳಿಸಿದರು.

ನೀಟ್ ಪರೀಕ್ಷಾರ್ಥಿಗಳಿಗೆ ಮೊದಲ ಡೋಸ್ ಲಸಿಕೆ ಕಡ್ಡಾಯವಾಗಿತ್ತು. ಲಸಿಕೆ ಪಡೆದ ವರದಿ ಪರಿಶೀಲಿಸಿ ಅವಕಾಶ ಕಲ್ಪಿ
ಸಲಾಗಿತ್ತು. ಕೋವಿಡ್‌ ಸೋಂಕಿನ ಲಕ್ಷಣ ಇದ್ದವರಿಗೆ ಪ್ರತ್ಯೇಕ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿತ್ತು. ಪರೀಕ್ಷಾ ಕೇಂದ್ರಗಳ ಪ್ರವೇಶ ದ್ವಾರದಲ್ಲೇ ಸ್ಯಾನಿಟೈಸರ್ ನೀಡಿ, ಥರ್ಮಲ್‌ ಸ್ಕ್ಯಾನಿಂಗ್ ಮಾಡಲಾಯಿತು.

ಒಂದು ಬೆಂಚ್‌ನಲ್ಲಿ ಒಬ್ಬರೇ ಅಭ್ಯರ್ಥಿ ಕುಳಿತುಕೊಳ್ಳಲು ಮಾತ್ರ ಅವಕಾಶ ಮಾಡಿಕೊಡಲಾಗಿತ್ತು. ದಾಖಲೆಗಳನ್ನು ಪರೀಕ್ಷಿಸಿ ಅಭ್ಯರ್ಥಿಗಳನ್ನು ಪರೀಕ್ಷಾ ಕೇಂದ್ರದೊಳಗೆ ಬಿಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT