NTA JEE Main 2021: ಜುಲೈ 20ರಿಂದ ಜೆಇಇ ಮೇನ್ಸ್ ಪರೀಕ್ಷೆ ಆರಂಭ

ನವದೆಹಲಿ: ಜೆಇಇ ಮೇನ್ಸ್ 2021 ಪರೀಕ್ಷೆಗಳು ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ನಡೆಯಲಿವೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ತಿಳಿಸಿದ್ದಾರೆ.
ಮೂರನೇ ಸೆಷನ್‌ನ ಜಿಇಇ ಮೇನ್ಸ್ ಜುಲೈ 20ರಿಂದ ಜುಲೈ 25ರ ವರೆಗೆ ನಡೆಯಲಿದೆ. ನಾಲ್ಕನೇ ಸೆಷನ್ ಪರೀಕ್ಷೆಯು ಜುಲೈ 27ರಿಂದ ಆಗಸ್ಟ್ 2ರ ವರೆಗೆ ನಡೆಯಲಿದೆ. ಕೋವಿಡ್ ಕಾರಣದಿಂದ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ಪುನಃ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಜುಲೈ 6ರಿಂದ ಜುಲೈ 8ರ ರಾತ್ರಿಯ ವರೆಗೆ ಅರ್ಜಿಗಳು ಎನ್‌ಟಿಎನಲ್ಲಿ ಲಭ್ಯವಿರಲಿವೆ. ನಾಲ್ಕನೇ ಸೆಷನ್ ಜೆಇಇ ಮೇನ್ಸ್ ಆಕಾಂಕ್ಷಿಗಳಿಗೆ ಅರ್ಜಿ ಸಲ್ಲಿಸಲು ಜುಲೈ 9 ರಿಂದ ಜುಲೈ 12 ವರೆಗೆ ಅವಕಾಶವಿದೆ ಎಂದು ಪೋಖ್ರಿಯಾಲ್ ತಿಳಿಸಿದ್ದಾರೆ.
ಪದವೀಧರರೇ ಗಮನಿಸಿ: ಆಗಸ್ಟ್ 13ರಿಂದ ಎಸ್ಎಸ್ಸಿ ಸಿಜಿಎಲ್ ಪರೀಕ್ಷೆ
ಪರೀಕ್ಷೆ ನೋಂದಣಿ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರವನ್ನು ಬದಲಿಸುವ ಅವಕಾಶವನ್ನು ನೀಡಲಾಗಿದೆ. 'ಅಭ್ಯರ್ಥಿಗಳಿಗೆ ಹತ್ತಿರದ ಅಥವಾ ಅನುಕೂಲಕರ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳುವುದಿದ್ದರೆ ಮೂರು ದಿನಗಳಲ್ಲಿ ಮಾಹಿತಿ ನೀಡುವಂತೆ ಕೋರಲಾಗಿದೆ. ಅಭ್ಯರ್ಥಿಗಳ ಆಯ್ಕೆಯಂತೆ ಪರೀಕ್ಷಾ ಕೇಂದ್ರವನ್ನು ನೀಡಲು ಪ್ರಯತ್ನಿಸುತ್ತೇವೆ ಎಂದು ಸಚಿವರು ವಿವರಿಸಿದ್ದಾರೆ.
ಜೆಇಇ ಮೇನ್ಸ್ ಪರೀಕ್ಷೆ 2021: ನೋಂದಣಿ, ಅಪ್ಲಿಕೇಷನ್ ಮತ್ತಿತರ ವಿವರಗಳಿಗೆ ಕ್ಲಿಕ್ ಮಾಡಿ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.