ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಿಶಾದ ದಾನ ಮಜ್ಹಿ ಪುತ್ರಿ ಚಾಂದಿನಿ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣ

ಪತ್ನಿಯನ್ನು ಹೆಗಲ ಮೇಲೆ ಹೊತ್ತುಕೊಂಡು 10 ಕಿ.ಮೀ. ದೂರ ನಡೆದು ದೇಶಾದ್ಯಂತ ಸುದ್ದಿಯಾಗಿದ್ದ ದಾನ ಮಜ್ಹಿ
Last Updated 26 ಜೂನ್ 2021, 11:45 IST
ಅಕ್ಷರ ಗಾತ್ರ

ಭುವನೇಶ್ವರ: ಅನಾರೋಗ್ಯಪೀಡಿತ ಪತ್ನಿಯನ್ನುಹೆಗಲ ಮೇಲೆ ಹೊತ್ತುಕೊಂಡು 10 ಕಿ.ಮೀ. ದೂರ ನಡೆದು ದೇಶಾದ್ಯಂತ ಸುದ್ದಿಯಾಗಿದ್ದ ಒಡಿಶಾದ ದಾನ ಮಜ್ಹಿ ಅವರ ಪುತ್ರಿ ಚಾಂದಿನಿ ಮಜ್ಹಿ ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ.

ಬುಡಕಟ್ಟು ಜನಾಂಗದ ದಾನ ಮಜ್ಹಿ, ಪತ್ನಿಯನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲು ಆ್ಯಂಬುಲೆನ್ಸ್‌ ನಿರಾಕರಿಸಿದಾಗ ತಾನೇ ಪತ್ನಿಯನ್ನು ಹೆಗಲ ಮೇಲೆ ಹೊತ್ತುಕೊಂಡು 10 ಕಿ.ಮೀ.ದೂರ ನಡೆದಿದ್ದರು. ಈ ಸುದ್ದಿ ದೇಶದ ಗಮನ ಸೆಳೆದಿತ್ತು. ಬಳಿಕ ದಾನ ಮಜ್ಹಿ ಅವರಮೂವರು ಹೆಣ್ಣು ಮಕ್ಕಳಿಗೆ ಶಿಕ್ಷಣ ಒದಗಿಸಲು ಕಳಿಂಗ ಸಮಾಜ ವಿಜ್ಞಾನಗಳ ಸಂಸ್ಥೆ 'ಕೆಐಎಸ್‌ಎಸ್‌' ಮುಂದೆ ಬಂದಿತ್ತು.

ಮಜ್ಹಿ ಪುತ್ರಿಯರಾದ ಚಾಂದಿನಿ, ಸೋನಿ ಮತ್ತು ಪ್ರಮೀಳಾ ಅವರಿಗೆ ಕಳಿಂಗ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಲು ಪ್ರವೇಶ ಕಲ್ಪಿಸಲಾಗಿತ್ತು. ಇದೀಗ ಚಾಂದಿನಿ ಹತ್ತನೇ ತರಗತಿಯಲ್ಲಿ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ ಎಂದು ಕಳಿಂಗ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.

ದಾನ ಮಜ್ಹಿ ಅವರುಒಡಿಶಾ ರಾಜ್ಯದ ಕಾಳಹಂಡಿ ಜಿಲ್ಲೆಯ ಮಾಲೇಗಾರ್‌ ಗ್ರಾಮದಬುಡಕಟ್ಟು ಜನಾಂಗದವರು. ಆ ಘಟನೆಯ ಬಳಿಕ ಈ ಗ್ರಾಮದಲ್ಲಿ ಶಾಲೆಯನ್ನು ಆರಂಭಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT