ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣಾಭಿವೃದ್ಧಿ ಕೋರ್ಸ್‌ಗಳು: ಮಾಹಿತಿ ಇಲ್ಲಿದೆ...

Last Updated 27 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಗಾಮೀಣಾಭಿವೃದ್ಧಿಗೆ ಸಂಬಂಧಿಸಿದಂತೆ ದೇಶದ ವಿವಿಧ ವಿಶ್ವವಿದ್ಯಾಲಯಗಳು ನಾಲ್ಕು ಹಂತದ ಕೋರ್ಸ್‌ಗಳನ್ನು ಬೋಧಿಸುತ್ತವೆ. ಎರಡು ವರ್ಷದ ಡಿಪ್ಲೊಮಾ, ಮೂರು ವರ್ಷದ ಪದವಿ ಅಧ್ಯಯನ, ಎರಡು ವರ್ಷದ ಸ್ನಾತಕೋತ್ತರ ಪದವಿ ಹಾಗೂ 3ರಿಂದ - 4 ವರ್ಷಗಳ ಪಿಎಚ್‌ಡಿವರೆಗೆ ಅಧ್ಯಯನ ನಡೆಸಬಹುದು.

ಪಠ್ಯಕ್ರಮ:ಈ ಕೋರ್ಸ್‌ನಲ್ಲಿ ಗ್ರಾಮೀಣ ಯೋಜನೆ ಮತ್ತು ಅಭಿವೃದ್ಧಿ, ಪ್ರಾಕೃತಿಕ ಸಂಪನ್ಮೂಲಗಳ ನಿರ್ವಹಣೆ ಮತ್ತು ಅಭಿವೃದ್ಧಿ, ಗ್ರಾಮೀಣ ಮಾರುಕಟ್ಟೆ ನಿರ್ವಹಣೆ, ಸಮುದಾಯ ಸವಲತ್ತು ಮತ್ತು ಸೇವೆ, ಸಾಮಾಜಿಕ ಭದ್ರತೆ, ಯೋಜನೆ ಮತ್ತು ಅನುಷ್ಠಾನ, ಗ್ರಾಮೀಣ ಶಿಕ್ಷಣ, ವಿದ್ಯುದೀಕರಣ, ಸಾಕ್ಷರತೆ, ನೈರ್ಮಲ್ಯದ ಕುರಿತು ವಿಷಯಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಲಾಗಿರುತ್ತದೆ

ಎಲ್ಲೆಲ್ಲಿ ಕೋರ್ಸ್?: ಭಾರತದ ಪ್ರತಿಷ್ಠಿತ ಮ್ಯಾನೇಜ್‌ಮೆಂಟ್ ಕಾಲೇಜುಗಳಿಂದ ಹಿಡಿದು ರಾಜ್ಯ ಸರ್ಕಾರಗಳ ವಿವಿಗಳು ನಡೆಸುವ ಕಾಲೇಜುಗಳಲ್ಲಿ ಗ್ರಾಮೀಣಾಭಿವೃದ್ಧಿ ಕೋರ್ಸ್‌ಗಳಿವೆ. ಅವುಗಳಲ್ಲಿಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ(ಕೆಎಸ್‌ಒಯು), ಬೆಂಗಳೂರು, ಆಂಧ್ರ, ಅಣ್ಣಾಮಲೈನಲ್ಲಿರುವ ಇಗ್ನೊ(ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ), ಐಐಎಂ ಲಖನೌ ಮತ್ತು ಅಹಮದಾಬಾದ್, ಇನ್‌ಸ್ಟಿಟ್ಯೂಟ್‌ ಆಫ್ ರೂರಲ್ ಮ್ಯಾನೇಜ್‌ಮೆಂಟ್, ಗುಜರಾತ್, ಕಳಿಂಗ ಸ್ಕೂಲ್ ಆಫ್ ರೂರಲ್ ಮ್ಯಾನೇಜ್‌ಮೆಂಟ್, ಪಟ್ಣಾ, ಕ್ಸೇವಿಯರ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ ಒಡಿಶಾ ಹಾಗೂ ಜಾರ್ಖಂಡ್‌, ಕಾನ್ಪುರದ ಚಂದ್ರಶೇಖರ್ ಆಜಾದ್ ಯುನಿವರ್ಸಿಟಿ ಆಫ್ ಅಗ್ರಿಕಲ್ಚರ್ ಅಂಡ್ ಟೆಕ್ನಾಲಜಿ, ಪುಣೆಯಲ್ಲಿ ಸಿಂಬಯೋಸಿಸ್ ಇನ್‌ಸ್ಟಿಟ್ಯೂಟ್‌ ಆಫ್ ಇಂಟರ್‌ನ್ಯಾಷನಲ್ ಬ್ಯುಸಿನೆಸ್, ಕೇರಳದ ಕೃಷಿ ವಿವಿ, ಜೈಪುರದ ಎನ್‌ಐಎಎಂ ಮುಖ್ಯವಾದವು.

ಕೋರ್ಸ್ ಪ್ರವೇಶ ಹೇಗೆ?: 2ನೇ ಪಿಯುಸಿಯಲ್ಲಿ ಶೇ 50 ರಷ್ಟು ಅಂಕಗಳಿಸಿದವರು ಡಿಪ್ಲೊಮಾ ಅಥವಾ ಪದವಿ ಅಧ್ಯಯನಕ್ಕೆ ಸೇರಬಹುದು. ಪದವಿಯಲ್ಲಿ ಶೇ 50ರಷ್ಟು ಅಂಕಗಳಿಸಿದವರು ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯ ಬಹುದು. ಆದರೆ ಯಾವುದೇ ಕೋರ್ಸ್ ಸೇರಲು ಪ್ರವೇಶ ಪರೀಕ್ಷೆಗಳನ್ನು ಎದುರಿಸಬೇಕು. ಪ್ರವೇಶ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳಿಸಿದವರ ವಿವಿಗಳಲ್ಲಿ ಅಧ್ಯಯನ ಮುಂದುವರೆಸಬಹುದು. ಕೆಲವು ಪರೀಕ್ಷೆಗಳು ಆನಲೈನ್‌ನಲ್ಲೂ ನಡೆಯುತ್ತವೆ. ಸ್ನಾತಕೋತ್ತರ ಪದವಿ ಅಧ್ಯಯನ ಸೇರ ಬಯಸುವವರಿಗೆ , CAT, MAT, XAT, IRMA, NMIMS, SNAP, ICFAI, CMAT, MH-CET ಹಾಗೂKMAT ನಂತಹ ಪ್ರವೇಶ ಪರೀಕ್ಷೆಗಳಿರುತ್ತವೆ.

ಯಾವ ಯಾವ ಕೆಲಸ?: ಅಧ್ಯಯನ ಮುಗಿಸಿದ ನಂತರ ರೂರಲ್ ಡೆವಲಪ್‌ಮೆಂಟ್ ಆಫೀಸರ್, ವೆಂಡರ್ ಡೆವಲಪ್‌ಮೆಂಟ್ ಮ್ಯಾನೇಜರ್, ಸೇಲ್ಸ್ ಆಫೀಸರ್, ನ್ಯಾಷನಲ್ ಸೇಲ್ಸ್ ಡೆವಲಪ್‌ಮೆಂಟ್ ಮ್ಯಾನೇಜರ್, ಬ್ಯುಸಿನೆಸ್ ಡೆವಲಪ್‌ಮೆಂಟ್ ಎಕ್ಸಿಕ್ಯೂಟಿವ್, ರಿಸರ್ಚ್ ಹೆಡ್, ರೂರಲ್ ಮ್ಯಾನೇಜರ್, ಸೀನಿಯರ್ ಪ್ರೋಗ್ರಾಂ ಆಫೀಸರ್, ಏರಿಯಾ ಎಕ್ಸೆಕ್ಯೂಟಿವ್ ಎಂಬ ಹುದ್ದೆಗಳು ಸಿಗುತ್ತವೆ. ಯುನಿಸೆಫ್‌, ಎನ್‌ಐಆರ್‌ಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸರ್ವ ಶಿಕ್ಷಣ ಅಭಿಯಾನ, ಗ್ರಾಮೀಣ ಬ್ಯಾಂಕ್‌ಗಳು ಮತ್ತು ಸರ್ಕಾರ ಹಮ್ಮಿಕೊಳ್ಳುವ ಸಮಾಜ ಕಲ್ಯಾಣ ಯೋಜನೆಗಳಲ್ಲೂ ಸಾಕಷ್ಟು ಕೆಲಸಗಳಿವೆ.

ಕೋರ್ಸ್‌ ಕುರಿತ ಹೆಚ್ಚಿನ ಮಾಹಿತಿಗೆhttps://cdsaindia.org/certificate-rural-development, https://gramswaraj.nirdpr.in/course/index. ಈ ಲಿಂಕ್‌ಗಳ ಜೊತೆಗೆ, ಆಯಾ ಕಾಲೇಜುಗಳ ಜಾಲತಾಣ ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT