ವಿದ್ಯಾರ್ಥಿಗಳು ಯಾವುದಾದರೂ ವಿಷಯವನ್ನು ತಿಳಿದುಕೊಳ್ಳುತ್ತಾರೆ ಎಂದುಕೊಳ್ಳೋಣ. ಆದರೆ ಅದನ್ನು ನೆನಪಿನಲ್ಲಿ ಇಟ್ಟುಕೊಳ್ಳದೇ ಬಹುಬೇಗ ಮರೆತು ಬಿಡುತ್ತಾರೆ. ಆಗ ಅದನ್ನು ತೋರಿಸಿದರೆ, ನೆನಪಿನಲ್ಲಿ ಬರುತ್ತದೆ. ಅದರಲ್ಲಿ ಸ್ವತಃ ಭಾಗಿಯಾದರಂತೂ ಸಮಗ್ರವಾಗಿ ಅರ್ಥವಾಗುತ್ತದೆ. ಭಾಗಿಯಾಗುವುದೆಂದರೆ ಕುತೂಹಲಿಗಳಾಗಿರಬೇಕು ಮತ್ತು ಅನೇಕ ಪ್ರಶ್ನೆಗಳನ್ನು ಕೇಳಬೇಕು.

ಈ ಪ್ರಶ್ನೆಗಳನ್ನು ಕೇಳುವ ಪದ್ಧತಿಯನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕಾಗುತ್ತದೆ. ಪ್ರಶ್ನೆಗಳನ್ನು ಕೇಳುತ್ತ ಹೋದಂತೆ ಹಲವು ವಿಷಯಗಳು ಅರಿವಾಗುತ್ತ ಹೋಗುತ್ತವೆ. ಮಾಹಿತಿಯ ಸಂಗ್ರಹ ಅಗಾಧವಾಗುತ್ತದೆ. ಈ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡಿದಾಗ ತಕ್ಷಣ ಬರೆದಿಟ್ಟುಕೊಂಡರೆ ನೆನಪಿನಲ್ಲಿರುತ್ತದೆ. ಇಲ್ಲದಿದ್ದರೆ ಸಹಜ ಮರೆವಿನಿಂದಾಗಿ ಆ ಪ್ರಶ್ನೆಗಳೂ ಎಲ್ಲೋ ಮರೆಯಾಗಿಬಿಡುತ್ತವೆ. ಹೀಗಾಗಿ ಮನೆಯಲ್ಲಿಯೇ ಆಗಿರಲಿ, ಪ್ರವಾಸದಲ್ಲಿಯೇ ಇರಲಿ, ಶಾಲೆಯಲ್ಲಿಯೇ ಆಗಿರಲಿ ವಿದ್ಯಾರ್ಥಿಗಳು ತಮ್ಮ ಮನಸ್ಸಿನಲ್ಲಿ ಮೂಡುವ ಪ್ರಶ್ನೆಗಳನ್ನು ಡೈರಿಯಲ್ಲಿ ನಮೂದಿಸುತ್ತಾ ಸಾಗಬೇಕು ಹಾಗೂ ಅಂತಹ ಪ್ರಶ್ನೆಗಳಿಗೆ ತಾವೇ ಸಾಕಷ್ಟು ಯೋಚಿಸಿ ಉತ್ತರ ಬರೆಯುವ ಪ್ರಯತ್ನ ಮಾಡಿ ನಂತರ ಶಿಕ್ಷಕರ ಮಾರ್ಗದರ್ಶನದ ಮೂಲಕ ಉತ್ತರದ ಅವಲೋಕನ ಮಾಡಬೇಕು.

ಅದರಲ್ಲೂ ವಿಜ್ಞಾನವು ಪ್ರಶ್ನೆಗಳನ್ನು ಹುಟ್ಟು ಹಾಕಿ ಸಂಶೋಧನೆಗೆ ದಾರಿ ಮಾಡಿಕೊಡುತ್ತದೆ. ಇದು ಕಲಿಕೆಗೆ ಬೇಕಾದ ದಾರಿ ಹಾಗೂ ಮನಃಸ್ಥಿತಿಯನ್ನು ಬೆಳೆಸಲು ಸಹಾಯಕ. ಪ್ರತಿದಿನವೂ ವಿದ್ಯಾರ್ಥಿಗಳು ವಿಜ್ಞಾನದ ಕುತೂಹಲಕಾರಿ ಸಂಗತಿಗಳನ್ನು ಕಲಿಯಬಹುದು. ಈ ಕುತೂಹಲವು ತಾನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಂತೆ ಪ್ರೇರೇಪಿಸುವುದರ ಜೊತೆಗೆ ಅವರಲ್ಲಿ ತಾರ್ಕಿಕ ಆಲೋಚನೆಗೆ ಹಚ್ಚುತ್ತದೆ. ವಿದ್ಯಾರ್ಥಿಗಳ ನಿಜವಾದ ಆಸಕ್ತಿ ಹಾಗೂ ಅವರ ಮನೋಭಾವವನ್ನು ತಿಳಿಯಬೇಕಾದರೆ ಅವರನ್ನು ಕ್ರಿಯಾತ್ಮಕವಾಗಿ ವಿವಿಧ ಕೆಲಸಗಳಲ್ಲಿ ತೊಡಗಿಸಬೇಕು ಮತ್ತು ಪ್ರಕೃತಿಯಲ್ಲಿ ನಡೆಯುವ ಎಲ್ಲಾ ವಿದ್ಯಮಾನಗಳನ್ನು ಅತಿ ಸೂಕ್ಷ್ಮವಾಗಿ ಅವಲೋಕಿಸಿ ಸೂಕ್ತ ಪ್ರಶ್ನೆಗಳನ್ನು ಕೇಳುವ ಅಭ್ಯಾಸವನ್ನು ರೂಢಿಸಿಕೊಳ್ಳಲು ಪ್ರೋತ್ಸಾಹಿಸಬೇಕು.

ಡೈರಿ ತಯಾರಿಸಿಕೊಳ್ಳುವುದು ಹೇಗೆ?

ಒಂದು ವರ್ಷಕ್ಕೆ ಹನ್ನೆರಡು ತಿಂಗಳುಗಳಿರುವುದರಿಂದ ಡೈರಿಯಲ್ಲಿ ಜನವರಿಯಿಂದ- ಡಿಸೆಂಬರ್ವರೆಗೆ ತಿಂಗಳುಗಳನ್ನು ಬರೆದು, ಆಯಾ ತಿಂಗಳಲ್ಲಿ ಬರುವ ಒಟ್ಟು ದಿನಗಳನ್ನು ನಮೂದಿಸಿ. ಒಟ್ಟಾರೆಯಾಗಿ ಒಂದು ವರ್ಷಕ್ಕೆ ಬರುವ 365 ದಿನಗಳಿಗೆ ಅನುಗುಣ
ವಾಗಿ 365 ಪುಟಗಳುಳ್ಳ ಅಥವಾ ಹೆಚ್ಚಿಗೆ ಬೇಕೆಂದರೆ ಇನ್ನೂ ಹೆಚ್ಚಿನ ಪುಟಗಳನ್ನು ಸೇರಿಸಿ ಡೈರಿ ತಯಾರಿಸಿಕೊಳ್ಳಬಹುದು. ಈ ಡೈರಿ ತಯಾರಿಸಿಕೊಳ್ಳಲು ಯಾವುದೇ ಹಣಕಾಸಿನ ಅಗತ್ಯ ಬೀಳುವುದಿಲ್ಲ. ಮುಗಿದು ಹೋಗಿರುವ ಶೈಕ್ಷಣಿಕ ವರ್ಷದಲ್ಲಿನ ನೋಟ್ ಪುಸ್ತಕದಲ್ಲಿರುವ ಖಾಲಿ ಹಾಳೆಗಳನ್ನು ಒಂದೆಡೆ ಸೇರಿಸಿ ಅದಕ್ಕೆ ಸ್ಪೈರಲ್ ಬೈಂಡಿಂಗ್ ಮಾಡಿಸಿದರೆ ಮುಗಿಯಿತು, ಡೈರಿ ತಯಾರಾದ ಹಾಗೆ.

ಡೈರಿಯಿಂದಾಗುವ ಪ್ರಯೋಜನಗಳು

ವಿಜ್ಞಾನ ಪಾಠದಲ್ಲಿ ಬರುವ ವಿಜ್ಞಾನಿಗಳ ಸಂಶೋಧನೆಗಳು, ಸಂಶೋಧನೆ ಕೈಗೊಳ್ಳುವಲ್ಲಿ ಅವರು ಶ್ರಮಿಸಿದ ದಾರಿ ಕುರಿತ ಸ್ವಾರಸ್ಯಕರ ಅಂಶಗಳನ್ನು ಬರೆದಿಡುವುದು. ಇದರಿಂದ ಅದನ್ನು ಓದಿದ ವಿದ್ಯಾರ್ಥಿಗಳಿಗೂ ಸಂಶೋಧನೆ ಕುರಿತ ಆಸಕ್ತಿ ಹುಟ್ಟುವುದು. ವಿಜ್ಞಾನದ ಪರಿಣಾಮಕಾರಿ ಕಲಿಕೆಗೆ ಬೆಲೆ ಬಾಳುವ ಉಪಕರಣಗಳಿಗಿಂತಲೂ ಸ್ವತಂತ್ರವಾಗಿ ಆಲೋಚಿಸುವ ಶಕ್ತಿ, ತಾರ್ಕಿಕ ಶಕ್ತಿ, ಕಲ್ಪನಾ ಶಕ್ತಿ, ಆಸಕ್ತಿಗಳಂತಹ ಉಪಕರಣಗಳಿದ್ದರೆ ಸಾಕು ಬೇಕಾದ್ದನ್ನು ಮಾಡಬಹುದು ಎಂಬ ಭಾವನೆ ಮೂಡಲು ಇಂತಹ ಘಟನೆಗಳು ಸಹಾಯಕ.

ವಿದ್ಯಾರ್ಥಿ ಮನೆಯಿಂದ ಶಾಲೆಗೆ ತೆರಳುವಾಗ ಹಲವು ಸಂಗತಿಗಳನ್ನು ವೀಕ್ಷಿಸುತ್ತಾನೆ. ಉದಾಹರಣೆಗೆ: ಆಕಾಶದಲ್ಲಿ ಹಾರಾಡುವ ಹಕ್ಕಿಗಳು, ನೆಲದಲ್ಲಿ ತೆವಳುವ ಹುಳುಗಳು, ಗಿಡದಲ್ಲಿ ಕುಪ್ಪಳಿಸುವ ಕೀಟಗಳು..

ಇವುಗಳ ಚಲನೆ, ಬದುಕು, ಆಹಾರದ ಕುರಿತು ಪ್ರಶ್ನೆಗಳನ್ನು ಬರೆದಿಟ್ಟುಕೊಂಡರೆ ಅವುಗಳಿಗೆ ಮುಂದೆ ಸ್ವತಃ ತಾನೇ ಉತ್ತರಗಳನ್ನು ಪುಸ್ತಕಗಳ ಸಹಾಯದಿಂದ ಪಡೆದುಕೊಳ್ಳಬಹುದು ಅಥವಾ ಶಿಕ್ಷಕರು, ಪೋಷಕರಿಂದ ಕೇಳಿ ತಿಳಿದುಕೊಳ್ಳಬಹುದು.

ಮನೆಯಲ್ಲಿ ಮಾಡಬಹುದಾದ ಚಿಕ್ಕ ಚಿಕ್ಕ ಪ್ರಯೋಗಗಳನ್ನು ಮಾಡಿ ಅವುಗಳ ಹಿಂದಿರುವ ವ್ಶೆಜ್ಞಾನಿಕ ಕಾರಣಗಳನ್ನು ಪತ್ತೆ ಹಚ್ಚಿ ಡೈರಿಯಲ್ಲಿ ನಮೂದಿಸಬಹುದು.

ಉದಾಹರಣೆಗೆ: ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಸ್ವಲ್ಪ ನೀಲಿ ಪುಡಿಯನ್ನು ಹಾಕಿದಾಗ, ನೀರಿನ ಬಣ್ಣ ಬದಲಾಗುವುದನ್ನು ನಿತ್ಯ ಮನೆಯಲ್ಲಿ ಗಮನಿಸಿ. ಇದಕ್ಕೆ ಕಾರಣವೇನು ಎಂಬುದನ್ನು ವೀಕ್ಷಿಸಿದಾಗ ನೀಲಿ ಪುಡಿಯ ಹರಳುಗಳು ನೀರಿನಲ್ಲಿ ಹಂಚಿಹೋಗಿರುತ್ತದೆ. ಅಣುಗಳ ಈ ರೀತಿಯ ಚಲನೆಗೆ ವಿಸರಣೆ ಎನ್ನುವರು. ಅಣುಗಳು ಹೆಚ್ಚಿನ ಸಾರತೆಯ ಪ್ರದೇಶದಿಂದ ಕಡಿಮೆ ಸಾರತೆಯ ಪ್ರದೇಶದ ಕಡೆಗೆ ಚಲಿಸುವ ಕ್ರಿಯೆಯೇ ವಿಸರಣೆ ಎನ್ನುವರು.

ವಿಸರಣೆಯ ಬಗ್ಗೆ ಪ್ರಯೋಗ ಮಾಡಿದ ವಿದ್ಯಾರ್ಥಿಯು ನಿತ್ಯ ಜೀವನದಲ್ಲಿ ಅಂತಹ ವಿದ್ಯಮಾನಗಳಿಗೆ ಉದಾಹರಣೆಗಳನ್ನು ಬರೆಯಲು ತಿಳಿಸುವುದು. ಉದಾಹರಣೆಗೆ: ಸುಗಂಧ ದ್ರವ್ಯಗಳ ವಾಸನೆ ಹರಡುವುದು, ಅಡುಗೆ ಮನೆಯಲ್ಲಿ ಆಹಾರದ ವಾಸನೆ ಹರಡುವುದು, ಬಿಸಿ ನೀರಿನಲ್ಲಿ ಟೀ ಪುಡಿಯ ಚಿಕ್ಕ ಪ್ಯಾಕ್ ಅನ್ನು ಅದ್ದಿದಾಗ ಚಹಾ ತಯಾರಾಗುವುದು, ಇಂತಹ ಅನೇಕ ಉದಾಹರಣೆಗಳನ್ನು ಬರೆದಿಡಬಹುದು.

ಇಂತಹ ಸಾಮಾನ್ಯ ಜ್ಞಾನ ಸಂಗ್ರಹಗಳಿಂದ ವಿದ್ಯಾರ್ಥಿ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನೇರವಾಗಿ ವಿಶೇಷ ಪರಿಶ್ರಮವಿಲ್ಲದೇ ತಯಾರಾಗುತ್ತಾರೆ.

(ಲೇಖಕರು ಸಹ ಸಂಪಾದಕರು, ಜೀವನ ಶಿಕ್ಷಣ ಮಾಸ ಪತ್ರಿಕೆ, ಧಾರವಾಡ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.