ಐಟಿ ವಲಯದಲ್ಲಿ ಇತ್ತೀಚೆಗೆ ಬೇಡಿಕೆ ಹೆಚ್ಚುತ್ತಿರುವ ಉದ್ಯೋಗಗಳಲ್ಲಿ ಸಾಫ್ಟ್‌ವೇರ್ ಟೆಸ್ಟಿಂಗ್ ಕೂಡ ಒಂದು. ಸಾಫ್ಟ್‌ವೇರ್ ಟೆಸ್ಟಿಂಗ್ ಎಂದರೆ ಈಗಾಗಲೇ ಅಭಿವೃದ್ಧಿಪಡಿಸಿದ ಸಾಫ್ಟ್‌ವೇರ್ ಅಪ್ಲಿಕೇಶನ್‌ಗಳ ಮೇಲೆ ಕೆಲಸ ಮಾಡುವುದು. ಜೊತೆಗೆ ಅಪ್ಲಿಕೇಶನ್‌ನ ಕ್ರಿಯಾತ್ಮಕತೆಯನ್ನು ಮೌಲ್ಯಮಾಪನ ಮಾಡುವುದು ಹಾಗೂ ಲೋಪ–ದೋಷಗಳನ್ನು ಗುರುತಿಸುವ ಕೆಲಸಗಳನ್ನು ಸಾಫ್ಟ್‌ವೇರ್ ಟೆಸ್ಟರ್‌ಗಳು ಮಾಡುತ್ತಾರೆ.

ಕೆಲಸದ ವಿವರಗಳು

ಸಾಫ್ಟ್‌ವೇರ್‌ನ ಅವಶ್ಯಕತೆಗಳನ್ನು ಗುರುತಿಸುವುದು ಹಾಗೂ ಸಾಫ್ಟ್‌ವೇರ್ ಟೆಸ್ಟ್‌ಗೆ ಬೇಕಾದ ತಯಾರಿ ನಡೆಸಬೇಕಾಗುತ್ತದೆ. ಸಾಫ್ಟ್‌ವೇರ್ ಉಪಯುಕ್ತತೆಯ ಕುರಿತು ಪರೀಕ್ಷೆಗಳನ್ನು ಕಾರ್ಯಗತಗೊಳಿಸುವುದು; ಡೇಟಾಬೇಸ್ ಪರಿಣಾಮಗಳು, ದೋಷಗಳು ಮತ್ತು ಉಪಯುಕ್ತತೆ ಕುರಿತು ಪರೀಕ್ಷೆ ನಡೆಸಿ ಫಲಿತಾಂಶಗಳನ್ನು ವಿಶ್ಲೇಷಿಸುವುದು; ಸಾಫ್ಟ್‌ವೇರ್ ಪರೀಕ್ಷೆಗೆ ಸಂಬಂಧಿಸಿದ ಎಲ್ಲಾ ಅಂಶಗಳ ಕುರಿತು ವರದಿಗಳನ್ನು ಸಿದ್ಧಪಡಿಸುವುದು ಮತ್ತು ವಿನ್ಯಾಸ ತಂಡಕ್ಕೆ ವರದಿ ಮಾಡುವುದು; ಸಾಫ್ಟ್‌ವೇರ್ ಅಪ್ಲಿಕೇಶನ್‌ನ ಬಗ್ಗೆ ವಿವರ ತಿಳಿಯಲು ಗ್ರಾಹಕರೊಂದಿಗೆ ಸಂವಹನ ನಡೆಸುವುದು; ವಿನ್ಯಾಸ ವಿಮರ್ಶೆಗಳಲ್ಲಿ ಭಾಗವಹಿಸುವುದು ಮತ್ತು ಅವಶ್ಯಕತೆಗಳು, ಉತ್ಪನ್ನ ವಿನ್ಯಾಸ, ಸಂಭಾವ್ಯ ಸಮಸ್ಯೆಗಳ ಕುರಿತು ಮಾಹಿತಿ ನೀಡುವುದು ಮೊದಲಾದ ಕೆಲಸ ಮಾಡಬೇಕಾಗುತ್ತದೆ.

ಅರ್ಹತೆ

ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಗಣಿತ ವಿಷಯವನ್ನು ಮುಖ್ಯ ವಿಷಯಗಳನ್ನಾಗಿ ಆಯ್ಕೆ ಮಾಡಿಕೊಂಡಿರಬೇಕು.

ಪದವಿ: ಯಾವುದೇ ವಿಷಯದಲ್ಲಿ ಎಂಜಿನಿಯರಿಂಗ್, ಬಿಟೆಕ್, ಬಿಎಸ್‌ಸಿ, ಬಿಸಿಎ ಹಾಗೂ ಐಟಿ ಡಿಪ್ಲೊಮಾ ಕೋರ್ಸ್‌ಗಳುಸ್ನಾತಕೋತ್ತರದ ಪದವಿ: ಎಂಟೆಕ್, ಎಂಸಿಎ ಹಾಗೂ ಐಟಿ ಡಿಪ್ಲೊಮಾ ಕೋರ್ಸ್‌ಗಳು

ಕೌಶಲಗಳು

ತಾಂತ್ರಿಕ ಕೌಶಲ

ಡೇಟಾಬೇಸ್ ಹಾಗೂ ಎಸ್‌ಕ್ಯೂಎಲ್‌ನಲ್ಲಿ ಸಾಮಾನ್ಯ ಜ್ಞಾನ

ಮ್ಯಾನೇಜ್‌ಮೆಂಟ್ ಟೂಲ್ ಟೆಸ್ಟ್ ಕುರಿತು ಜ್ಞಾನ ಹಾಗೂ ಅನುಭವ

ಲೀನಕ್ಸ್ ಕಮಾಂಡ್ ಕುರಿತು ಸಾಮಾನ್ಯ ಜ್ಞಾನ

ಯಾವುದೇ ದೋಷಪೂರಿತ ಟ್ರ್ಯಾಕಿಂಗ್ ಟೂಲ್ ವಿಷಯದಲ್ಲಿ ಜ್ಞಾನ ಹಾಗೂ ಅನುಭವ

ಆಟೊಮೇಷನ್ ಟೂಲ್‌ಗಳ ಕುರಿತು ಜ್ಞಾನ ಹಾಗೂ ಅನುಭವ

ತಾಂತ್ರಿಕೇತರ ಕೋರ್ಸ್‌ಗಳು

ವಿಶ್ಲೇಷಣಾ ಕೌಶಲಗಳು

ಸಂವಹನ ಕೌಶಲ

ಸಮಯ ಪರಿಪಾಲನೆ

ಸಕಾರಾತ್ಮಕ ವರ್ತನೆ

ವೃತ್ತಿಯ ಮೇಲೆ ಒಲವು

ಈ ಬಗ್ಗೆ ಹಲವಾರು ಅಲ್ಪಾವಧಿ ಕೋರ್ಸ್‌ಗಳಿವೆ. ಆಟೊಮೇಟಿವ್ ಸಾಫ್ಟ್‌ವೇರ್ ಟೆಸ್ಟರ್, ಟೆಸ್ಟ್ ಆಟೊಮೇಷನ್ ಎಂಜಿನಿಯರ್, ಯೂಸೆಬಿಲಿಟಿ ಟೆಸ್ಟಿಂಗ್, ಸೆಕ್ಯೂರಿಟಿ ಟೆಸ್ಟರ್, ಫರ್ಫಾಮಿಂಗ್ ಟೆಸ್ಟಿಂಗ್‌ನಲ್ಲಿ ಗ್ಲೋಬಲ್ ಸರ್ಟಿಫಿಕೇಶನ್ ಕೋರ್ಸ್‌ಗಳನ್ನು ಬೆಂಗಳೂರಿನ ಐಎಸ್‌ಟಿಕ್ಯೂಬಿನಲ್ಲಿ ಮಾಡಿಕೊಳ್ಳಬಹುದು. ಪುಣೆಯ ಸಾಫ್ಟ್‌ವೇರ್ ಟೆಸ್ಟಿಂಗ್ ಸೀಡ್ ಇನ್ಫೋಟೆಕ್‌ನಲ್ಲಿ ಡಿಪ್ಲೊಮಾ, ದೆಹಲಿಯ ವೆಬ್‌ಟೆಕ್ ಲ್ಯಾಬ್ಸ್‌ನಲ್ಲಿ ಸಾಫ್ಟ್‌ವೇರ್ ಆಟೊಮೇಷನ್ ಟೆಸ್ಟಿಂಗ್ ಟ್ರೈನಿಂಗ್ ಕೋರ್ಸ್, ಹೈದರಾಬಾದ್‌ನ ಮೈಂಡ್ ಕ್ಯೂನಲ್ಲಿ ಸಾಫ್ಟ್‌ವೇರ್ ಟೆಸ್ಟಿಂಗ್ ಸರ್ಟಿಫಿಕೇಟ್ ಕೋರ್ಸ್ ಸೇರಿದಂತೆ ಹಲವು ಕಡೆ ಇಂತಹ ಕೋರ್ಸ್‌ಗಳು ಲಭ್ಯ.

ಈ ಕೋರ್ಸ್ ಮಾಡಿಕೊಂಡವರು ಸಾಫ್ಟ್‌ವೇರ್‌ಟೆಸ್ಟರ್, ಸೀನಿಯರ್ ಟೆಸ್ಟ್ ಎಂಜಿನಿಯರ್, ಸಾಫ್ಟ್‌ವೇರ್ ಟೆಸ್ಟ್ ಲೀಡರ್ ಆಗಿ ಉದ್ಯೋಗ ಗಿಟ್ಟಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.