ರಾಜ್ಯ ಅಥವಾ ದೇಶದಲ್ಲಿ ಸದಾ ಕಾಲ ಬೇಡಿಕೆ ಹೊಂದಿರುವ ಬಿಸಿನೆಸ್ ಎಂದರೆ ಅದು ಜವಳಿ ಉದ್ಯಮ. ಈ ಉದ್ಯಮ ಪ್ರವೇಶಿಸಬೇಕೆಂಬ ಆಸೆ ಇದ್ದರೂ, ಸರಿಯಾದ ಮಾಹಿತಿ ಮತ್ತು ಮಾರ್ಗದರ್ಶನವಿಲ್ಲದೆ ಅದು ಕೈಗೂಡಿರುವುದಿಲ್ಲ. ಆದರೆ, ಈ ಸರ್ಕಾರಿ ಸಂಸ್ಥೆಯು ಜವಳಿ ಉದ್ಯಮದಲ್ಲಿ ಬೆಳೆಯಬಯಸುವವರ ಕನಸಿಗೆ ನೀರೆರೆಯುತ್ತಿದೆ. ಇಲ್ಲಿ ಕಲಿತಿರುವ ಎಷ್ಟೋ ವಿದ್ಯಾರ್ಥಿಗಳು ಈಗ ವಿದೇಶಗಳಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಅದು, ಹುಬ್ಬಳ್ಳಿಯ ಬೆಂಗೇರಿ ಖಾದಿ ಗ್ರಾಮೋದ್ಯೋಗ ವಿದ್ಯಾಲಯ.