ಶನಿವಾರ, ಅಕ್ಟೋಬರ್ 16, 2021
22 °C
ಬೋಧಕರ ಕೊರತೆ, ತಗ್ಗಿದ ಸಂಶೋಧನೆ

ಮೈಸೂರು ವಿಶ್ವವಿದ್ಯಾಲಯ: ನ್ಯಾಕ್‌ ಶ್ರೇಯಾಂಕ ‘ಎ’ಗೆ ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮೈಸೂರು ವಿಶ್ವವಿದ್ಯಾಲಯಕ್ಕೆ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್‌ (ನ್ಯಾಕ್‌) ‘ಎ’ ಮಾನ್ಯತೆ ನೀಡಿದೆ. ಈ ಹಿಂದೆ ‘ಎ +’ ಗ್ರೇಡ್‌ ಲಭಿಸಿತ್ತು. 

‘ವಿಶ್ವವಿದ್ಯಾಲಯದಲ್ಲಿ ಅತ್ಯುತ್ತಮ ಸೌಲಭ್ಯಗಳಿರುವ ಕಾರಣ ಎ+ ಶ್ರೇಯಾಂಕ ಉಳಿಸಿಕೊಳ್ಳುವ ಭರವಸೆ ಇತ್ತು. ಆದರೆ, ಬೋಧಕರ ಕೊರತೆ ಹಾಗೂ ಸಂಶೋಧನೆ ಪ್ರಮಾಣ ತಗ್ಗಿದ ಕಾರಣ ಅಂಕಗಳು ಕಡಿಮೆಯಾದವು. ಹೀಗಾಗಿ, ‘ಎ’ ಮಾನ್ಯತೆ ಸಿಕ್ಕಿದೆ. ಬಂದಿದ್ದನ್ನು ಒಪ್ಪಿಕೊಳ್ಳಬೇಕು ಅಷ್ಟೆ’ ಎಂದು ಕುಲಪತಿ ಪ್ರೊ.ಜಿ.ಹೇಮಂತಕುಮಾರ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಓದಿ: 

ಕಳೆದ ವಾರ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದ ನ್ಯಾಕ್‌ ಸಮಿತಿಯ ಆರು ಸದಸ್ಯರು ಸತತ ಮೂರು ದಿನ 30 ಇಲಾಖೆ ಹಾಗೂ ವಿವಿಧ ಸೌಲಭ್ಯ ಪರಿಶೀಲನೆ ನಡೆಸಿದ್ದರು. ಕುಲಪತಿ, ಕುಲಸಚಿವರಿಂದ ಆಡಳಿತಾತ್ಮಕ ವಿಚಾರಗಳ ಬಗ್ಗೆ ಮಾಹಿತಿ ಪಡೆದಿದ್ದರು. ಅಲ್ಲದೇ, ಬೋಧಕರು, ಪೋಷಕರು ಹಾಗೂ ವಿದ್ಯಾರ್ಥಿಗಳನ್ನು ಮಾತನಾಡಿಸಿದ್ದರು.  

ಸದಸ್ಯರು ವಿವಿಧ ಹಂತಗಳಲ್ಲಿ ವಿಭಿನ್ನ ಮಾನದಂಡಗಳನ್ನು ಮುಂದಿಟ್ಟುಕೊಂಡು ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿ, ನ್ಯಾಕ್‌ಗೆ ವಿಸ್ತೃತ ವರದಿ ಸಲ್ಲಿಸಿದ್ದರು. 

ಈ ಮಾನ್ಯತೆಯು ಸೆ.20ರಿಂದ ಐದು ವರ್ಷಗಳ ಅವಧಿಗೆ ಇರಲಿದೆ ಎಂದು ಕುಲಪತಿ ಪ್ರೊ.ಆರ್‌.ಶಿವಪ್ಪ ತಿಳಿಸಿದರು.

‘ವಿಶ್ವವಿದ್ಯಾಲಯದಲ್ಲಿ 400 ಸಿಬ್ಬಂದಿ ಕೊರತೆ ಇದೆ. ಅತಿಥಿ ಉಪನ್ಯಾಸಕರನ್ನು ಬಳಸಿಕೊಂಡು ನಿರ್ವಹಿಸುತ್ತಿರುವ ವಿಚಾರ ತಿಳಿಸಿದ್ದೆವು. ಹೆಚ್ಚು ಅಂಕ ಪಡೆದು, ಶ್ರೇಯಾಂಕ ಉತ್ತಮಪಡಿಸಿಕೊಳ್ಳಲು ನಾವು ಪೂರ್ಣ ಪ್ರಯತ್ನ ಹಾಕಿದ್ದೆವು‌’ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು