ನವದೆಹಲಿ: 2024ರಲ್ಲಿ ನಡೆದ ಕೇಂದ್ರ ಲೋಕಸೇವಾ ಆಯೋಗ ನಡೆಸಿದ ಕೇಂದ್ರ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, ಇದರಲ್ಲಿ ಅಗ್ರ ರ್ಯಾಂಕ್ ಪಡೆದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ವಿವಿಧ ವಿಷಯಗಳನ್ನು ಐಚ್ಛಿಕ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ.

ಅಗ್ರ 25 ರ್ಯಾಂಕ್ ಪಡೆದವರು ಮುಖ್ಯ ಪರೀಕ್ಷೆಗೆ ಆಯ್ಕೆ ಮಾಡಿಕೊಂಡ ವಿಷಯಗಳಲ್ಲಿ ಆಂಥ್ರಪಾಲಜಿ, ವಾಣಿಜ್ಯ ಮತ್ತು ಅಕೌಂಟೆನ್ಸಿ, ಜಿಯಾಗ್ರಫಿ, ಗಣಿತ, ತತ್ವಶಾಸ್ತ್ರ, ಭೌತವಿಜ್ಞಾನ, ರಾಜಕೀಯ ವಿಜ್ಞಾನ, ಅಂತರರಾಷ್ಟ್ರೀಯ ವ್ಯವಹಾರ, ಸಾರ್ವಜನಿಕ ಆಡಳಿತ ಮತ್ತು ತಮಿಳು ಸಾಹಿತ್ಯವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಆಯೋಗ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಮೊದಲ ಹಾಗೂ 2ನೇ ರ್ಯಾಂಕ್ ಅನ್ನು ಕ್ರಮವಾಗಿ ಪಡೆದ ಶಕ್ತಿ ದುಬೆ ಮತ್ತು ಹರ್ಷಿತಾ ಗೋಯಲ್ ಅವರು ರಾಜಕೀಯ ವಿಜ್ಞಾನ ಮತ್ತು ಅಂತರರಾಷ್ಟ್ರೀಯ ವ್ಯವಹಾರ ವಿಷಯಗಳನ್ನು ಆಯ್ಕೆ ಮಾಡಿಕೊಂಡಿದ್ದರು.
.UPSC Results: ಶಕ್ತಿ ದುಬೆಗೆ ಪ್ರಥಮ ರ್ಯಾಂಕ್; 1009 ಅಭ್ಯರ್ಥಿಗಳು ಆಯ್ಕೆ.UPSC Results: ಯುಪಿಎಸ್ಸಿ ಫಲಿತಾಂಶ ಪ್ರಕಟ, 50ರ ಒಳಗೆ ರಾಜ್ಯದ ಇಬ್ಬರು ವೈದ್ಯರು.
ಅಗ್ರ ರ್ಯಾಂಕ್ನ 25 ಅಭ್ಯರ್ಥಿಗಳಲ್ಲಿ 11 ಮಹಿಳೆಯರು ಹಾಗೂ 14 ಪುರುಷರು ಇದ್ದಾರೆ. ಇವರಲ್ಲಿ ಹಲವರು ಎಂಜಿನಿಯರಿಂಗ್, ಮಾನವ ವಿಜ್ಞಾನ, ವಾಣಿಜ್ಯ, ವೈದ್ಯಕೀಯ ವಿಜ್ಞಾನ, ವಾಸ್ತುಶಿಲ್ಪ ವಿಷಯಗಳಾಧಾರಿತ ಪದವಿಯನ್ನು ಹೊಂದಿದ್ದಾರೆ.

ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ಐಐಟಿ, ಎನ್ಐಟಿ, ವಿಐಟಿ, ಜೆಎನ್ಯು, ದೆಹಲಿ ವಿಶ್ವವಿದ್ಯಾಲಯ, ಅಲಹಾಬಾದ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ.

ಈ ಬಾರಿ 45 ಅಂಗವಿಕಲ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇವರಲ್ಲಿ ಮೂಳೆಗೆ ಸಂಬಂಧಿಸಿದ 12 ಅಂಗವಿಕಲರು, ದೃಷ್ಟಿ ದೋಷ ಹೊಂದಿರುವ 8, ಶ್ರವಣದೋಷವುಳ್ಳ 16 ಹಾಗೂ ಇನ್ನಿತರ ದೈಹಿಕ ನ್ಯೂನತೆ ಇರುವ ಒಂಬತ್ತು ಅಭ್ಯರ್ಥಿಗಳು ಇದ್ದಾರೆ.

2024ರ ಕೇಂದ್ರ ಲೋಕಸೇವಾ ಆಯೋಗದ ಪೂರ್ವಭಾವಿ ಪರೀಕ್ಷೆಯು ಜೂನ್ 16ರಂದು ನಡೆದಿತ್ತು. 9,92,599 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಇವರಲ್ಲಿ 5,83,213 ಅಭ್ಯರ್ಥಿಗಳು ಮಾತ್ರ ಪರೀಕ್ಷೆ ಬರೆದಿದ್ದರು. ಮುಖ್ಯ ಪರೀಕ್ಷೆಗೆ 14,627 ಅಭ್ಯರ್ಥಿಗಳು ಆಯ್ಕೆಯಾಗಿದ್ದರು.

ಕಳೆದ ಸೆಪ್ಟೆಂಬರ್ನಲ್ಲಿ ಮುಖ್ಯ ಪರೀಕ್ಷೆ ನಡೆದಿತ್ತು. ಇವರಲ್ಲಿ 2,845 ಅಭ್ಯರ್ಥಿಗಳು ಸಂದರ್ಶನ ಹಂತಕ್ಕೆ ಆಯ್ಕೆಯಾಗಿದ್ದರು. ಐಎಎಸ್, ಐಎಫ್ಎಸ್, ಐಪಿಎಸ್ ಸೇರಿದಂತೆ ಕೇಂದ್ರ ಲೋಕಸೇವಾ ಆಯೋಗ ನಡೆಸುವ ಕೇಂದ್ರ ನಾಗರಿಕ ಸೇವಾ ಪರೀಕ್ಷೆಯ ವಿವಿಧ ಹುದ್ದೆಗಳಿಗೆ ಅಂತಿಮವಾಗಿ 1,009 ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಇವರಲ್ಲಿ 725 ಪುರುಷರು ಹಾಗೂ 284 ಮಹಿಳೆಯರು ಸೇರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.