ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

UPSC, KPSC Exam: ಬಹು ಆಯ್ಕೆಯ ಪ್ರಶ್ನೆಗಳು

Published 1 ಮೇ 2024, 23:30 IST
Last Updated 1 ಮೇ 2024, 23:30 IST
ಅಕ್ಷರ ಗಾತ್ರ

ಸಂವಿಧಾನ

1. ರಾಜ್ಯದ ಮುಖ್ಯಮಂತ್ರಿಗಳನ್ನು ಈ ಕೆಳಗಿನ ಯಾರು ನೇಮಕ ಮಾಡುತ್ತಾರೆ ?

ಎ) ಪ್ರಧಾನಿ 

ಬಿ) ರಾಷ್ಟ್ರಪತಿ

ಸಿ) ರಾಜ್ಯಪಾಲ ಡಿ) ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಸದಸ್ಯರು

ಉತ್ತರ : ಸಿ

2.ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ ?

ಎ ) ರಾಜ್ಯ ಸರ್ಕಾರದ ಕಾರ್ಯಾಂಗೀಯ ಅಧಿಕಾರಗಳು ರಾಜ್ಯಪಾಲರ ಹೆಸರಿನಲ್ಲಿ ನಡೆಯುತ್ತವೆ.

ಬಿ ) ಆದರೆ ನೈಜ ಕಾರ್ಯಾಂಗ ಮಾತ್ರ ಮುಖ್ಯಮಂತ್ರಿಗಳೇ ಆಗಿರುತ್ತಾರೆ.

ಸಿ) ರಾಜ್ಯ ಸರ್ಕಾರದ ಸಾಂವಿಧಾನಿಕ ಮುಖ್ಯಸ್ಥರು ರಾಜ್ಯಪಾಲರಾಗಿರುತ್ತಾರೆ.

ಡಿ) ಆದರೆ ನೈಜ ಮುಖ್ಯಸ್ಥರು ಮುಖ್ಯಮಂತ್ರಿಗಳೇ ಆಗಿರುತ್ತಾರೆ.

1) ಹೇಳಿಕೆ ಎ,ಬಿ ಸರಿಯಾಗಿದೆ ಆದರೆ ಸಿ,ಡಿ ತಪ್ಪಾಗಿದೆ

2 )ಹೇಳಿಕೆ ಎ,ಬಿ, ಸಿ ಸರಿಯಾಗಿದೆ ಆದರೆ ಡಿ ತಪ್ಪಾಗಿದೆ.

3 )ಎಲ್ಲಾ ಹೇಳಿಕೆಗಳು ತಪ್ಪಾಗಿವೆ.

4 ) ಎಲ್ಲಾ ಹೇಳಿಕೆಗಳು ಸರಿಯಾಗಿದೆ.

ಉತ್ತರ : 4

3. ಭಾರತದ ಸರ್ವೋಚ್ಛ ನ್ಯಾಯಾಲಯವು ಪ್ರಥಮವಾಗಿ ಎಲ್ಲಿ ಸ್ಥಾಪಿತವಾಯಿತು ?

ಎ ) ದೆಹಲಿ  ಬಿ )ಕೋಲ್ಕತ್ತಾ

ಸಿ )ಮದ್ರಾಸ್ ಡಿ ) ಉತ್ತರಾಖಂಡ್

ಉತ್ತರ : ಬಿ

4. ಬಂಗಾಳದ ಮೊದಲ ಗವರ್ನರ್ ಜನರಲ್ ಯಾರಾಗಿದ್ದರು ?

ಎ ) ವಾರನ್ ಹೇಸ್ಟಿಂಗ್ಸ್

ಬಿ ) ಲಾರ್ಡ್ ಮೆಕಾಲೆ

ಸಿ ) ರಾಬರ್ಟ್ ಕ್ಲೈವ್

ಡಿ ) ಲಾರ್ಡ್ ವಿಲಿಯಂ ಬೆಂಟಿಂಕ್

ಉತ್ತರ : ಎ

5 .ಈ ಕೆಳಗಿನ ಯಾವ ಕಾಯ್ದೆಯ ಮೂಲಕ ಭಾರತದಲ್ಲಿದ್ದ ಈಸ್ಟ್ ಇಂಡಿಯಾ ಕಂಪನಿಯ ಭೂಪ್ರದೇಶಗಳನ್ನು ಪ್ರಪ್ರಥಮವಾಗಿ ಬ್ರಿಟಿಷ್ ಸ್ವಾಮ್ಯಕ್ಕೆ ಒಳಪಟ್ಟ ಪ್ರದೇಶಗಳೆಂದು ಕರೆಯಲಾಯಿತು ?

ಎ ) ರೆಗ್ಯುಲೇಟಿಂಗ್ ಕಾಯ್ದೆ 1773

ಬಿ ) ಪಿಟ್ಸ್ ಇಂಡಿಯಾ ಕಾಯ್ದೆ 1784

ಸಿ) ಮಿಂಟೋ ಮಾರ್ಲೆ ಕಾಯಿದೆ 1919

ಡಿ ) 1857 ರ ಭಾರತ ಸರಕಾರದ ಶಾಸನ

ಉತ್ತರ: ಬಿ

6. ಈ ಕೆಳಗಿನ ಯಾವ ಕಾಯ್ದೆಯ ಮೂಲಕ ಬ್ರಿಟಿಷ್ ಸರಕಾರವು ಪ್ರಪ್ರಥಮ ಬಾರಿಗೆ ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿಯ

ವ್ಯವಹಾರಗಳನ್ನು ನಿಯಂತ್ರಿಸಲು ಆರಂಭಿಸಿತು?

ಎ) ಮಿಂಟೋ ಮಾರ್ಲೆ ಕಾಯಿದೆ 1919

ಬಿ) ರೆಗ್ಯುಲೇಟಿಂಗ್ ಕಾಯ್ದೆ 1773

ಸಿ ) ಪಿಟ್ಸ್ ಇಂಡಿಯಾ ಕಾಯ್ದೆ 1784

ಡಿ ) 1853ರ ಭಾರತ ಸರ್ಕಾರದ ಶಾಸನ

ಉತ್ತರ :ಬಿ

7. ಸರಕಾರಿ ಸೇವೆಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಜಾರಿಗೆ ತಂದ ಶಾಸನ ಯಾವುದು ?

ಎ) ಚಾರ್ಟರ್‌ ಕಾಯಿದೆ 1853

ಬಿ) ರೆಗ್ಯುಲೇಟಿಂಗ್ ಕಾಯಿದೆ 1773

ಸಿ )ಮಿಂಟೋ ಮಾರ್ಲೆ ಶಾಸನ 1919

ಡಿ ) 1935ರ ಭಾರತ ಸರ್ಕಾರದ ಕಾಯ್ದೆ

ಉತ್ತರ:ಎ

8. ಈ ಕೆಳಗಿನ ಯಾವ ಕಾಯ್ದೆ ಮೂಲಕ ಭಾರತದಲ್ಲಿ ಚುನಾವಣಾ ಪದ್ಧತಿಯ ಆರಂಭಕ್ಕೆ ನಾಂದಿ ಹಾಡಲಾಯಿತು ?

ಎ. ಭಾರತ ಸರ್ಕಾರ ಕಾಯ್ದೆ 1858

ಬಿ. ಭಾರತದ ಕೌನ್ಸಿಲ್ ಕಾಯ್ದೆ1861

ಸಿ. ಭಾರತದ ಕೌನ್ಸಿಲ್ ಕಾಯ್ದೆ 1892

ಡಿ. ಭಾರತದ ಕೌನ್ಸಿಲ್ ಕಾಯ್ದೆ 1909

ಉತ್ತರ :ಸಿ

9. ಈ ಕೆಳಗಿನ ಯಾವ ಕಾಯ್ದೆಯನ್ನು ಮಾರ್ಲೆ ಮಿಂಟೋ ಸುಧಾರಣೆಗಳು ಎನ್ನುತ್ತಾರೆ ?

ಎ. ಭಾರತದ ಕೌನ್ಸಿಲ್ ಕಾಯ್ದೆ 1892

ಬಿ.ಭಾರತ ಸರ್ಕಾರ ಕಾಯ್ದೆ 1919

ಸಿ. ಭಾರತದಸರ್ಕಾರ ಕಾಯ್ದೆ 1935

ಡಿ. ಭಾರತದ ಕೌನ್ಸಿಲ್ ಕಾಯ್ದೆ 1909

ಉತ್ತರ :ಡಿ

10.ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ?

ಎ. ಭಾರತ ಕೌನ್ಸಿಲ್ ಕಾಯ್ದೆ 1909 ಅನ್ನು ಮಾರ್ಲೆ ಮಿಂಟೋ ಸುಧಾರಣೆಗಳು ಎಂದು ಹೇಳುತ್ತಾರೆ.

ಬಿ. ಈ ಕಾಯ್ದೆ ಜಾರಿಗೆ ಬಂದ ಸಂದರ್ಭದಲ್ಲಿ ಲಾರ್ಡ್ ಮಾರ್ಲೆ ಭಾರತದ ಕಾರ್ಯದರ್ಶಿ ಯಾಗಿದ್ದರು ಮತ್ತು ಲಾರ್ಡ್ ಮಿಂಟೋ

ಭಾರತದ ವೈಸ್‌ರಾಯ್ ಆಗಿದ್ದರು.

1. ಹೇಳಿಕೆ ಎ ಸರಿಯಾಗಿದೆ  ಬಿ ತಪ್ಪಾಗಿದೆ.

2.ಹೇಳಿಕೆ ಬಿ ಸರಿಯಾಗಿದೆ  ಎ ತಪ್ಪಾಗಿದೆ.

3. ಎರಡೂ ಹೇಳಿಕೆಗಳು ತಪ್ಪಾಗಿವೆ

4. ಎರಡೂ ಹೇಳಿಕೆಗಳು ಸರಿಯಾಗಿವೆ.

ಉತ್ತರ : 4

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT