ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಡಿಎಂ ಸ್ವಾಯತ್ತ ಕಾಲೇಜು: ಪ್ರಾಧ್ಯಾಪಕಿಯರ ಸಂಶೋಧನೆಗೆ ಅಮೆರಿಕನ್ ಪೇಟೆಂಟ್

Published 21 ಮಾರ್ಚ್ 2024, 12:30 IST
Last Updated 21 ಮಾರ್ಚ್ 2024, 12:30 IST
ಅಕ್ಷರ ಗಾತ್ರ

ಉಜಿರೆ: ಇಲ್ಲಿನ ಎಸ್‌ಡಿಎಂ ಸ್ವಾಯತ್ತ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ರಾಸಾಯನ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿಯರಾದ ನೆಫಿಸತ್ ಮತ್ತು ಶಶಿಪ್ರಭಾ ಅವರ ಸಂಶೋಧನೆಗೆ ಅಮೆರಿಕನ್ ಪೇಟೆಂಟ್ ಮನ್ನಣೆ ಲಭಿಸಿದೆ.

ಕಾಲೇಜಿನ ಪ್ರಯೋಗಾಲಯದಲ್ಲಿಯೇ ಸಂಶೋಧನೆ ಮಾಡಿರುವ ಅವರನ್ನು ವಿಭಾಗದ ಮುಖ್ಯಸ್ಥ, ಸ್ನಾತಕೋತ್ತರ ಕೇಂದ್ರದ ಡೀನ್ ಪಿ.ವಿಶ್ವನಾಥ್ ಗೌರವಿಸಿದ್ದಾರೆ.

ದೈಹಿಕ ನೋವು ನಿವಾರಕ ಔಷಧೀಯ ಪ್ರಯೋಗಗಳನ್ನು ವಿಸ್ತರಿಸಲು ಬೇಕಾದ ಪ್ರಾಯೋಗಿಕ ಮಾರ್ಗದರ್ಶಿ ಪರಿಕಲ್ಪನೆಯಾಗಿ ಈ ಸಂಶೋಧನೆಗೆ ವಿಶೇಷ ಮಹತ್ವವಿದೆ. ವೈದ್ಯಕೀಯರಂಗದ ಚಿಕಿತ್ಸೆಯ ವಿಧಾನಗಳನ್ನು ಮರು ರೂಪಿಸುವುದಕ್ಕೆ ಈ ಸಂಶೋಧನೆ ನೆರವಾಗಲಿದೆ ಎಂದು ನೆಫಿಸೆತ್ ಮತ್ತು ಶಶಿಪ್ರಭಾ ತಿಳಿಸಿದ್ದಾರೆ.

ಸೌದಿಅರೇಬಿಯಾದ ಕಿಂಗ್‌ಫೈಸಲ್ ವಿ.ವಿ.ಸಹಭಾಗಿತ್ವದೊಂದಿಗೆ ಕೈಗೊಂಡಿದ್ದ ಈ ಸಂಶೋಧನೆಗೆ ಲಭಿಸಿರುವ ಅಮೆರಿಕನ್‌ ಪೇಟೆಂಟ್ 20 ವರ್ಷಗಳ ಅವಧಿಗೆ ಚಾಲ್ತಿಯಲ್ಲಿದ್ದು, ಆವಿಷ್ಕಾರ, ಬಳಕೆ ಮತ್ತು ಮಾರಾಟದ ಹಕ್ಕುಸ್ವಾಮ್ಯ ಪ್ರಾಧ್ಯಾಪಕರಿಗೆ ಸೇರಿದೆ.

ಉಪನ್ಯಾಸ

ಉಜಿರೆ: ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾಗಿದ್ದ ದಿ.ಬಿ.ಯಶೋವರ್ಮ ಅವರ ಸಂಸ್ಮರಣಾ ಉಪನ್ಯಾಸ ಮಾರ್ಚ್‌ 22ರಂದು ಬೆಳಿಗ್ಗೆ 11ಕ್ಕೆ ಇಲ್ಲಿನ ಎಸ್‌ಡಿಎಂ ಪಾಲಿಟೆಕ್ನಿಕ್‌ನಲ್ಲಿ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಸಂಯೋಜಕರಾದ ಚಂದ್ರನಾಥ್ ಜೈನ್, ಮಿಥುನ್ ಜೈನ್ ತಿಳಿಸಿದ್ದಾರೆ.

ಸೋನಿಯಾ ಯಶೋವರ್ಮ ಉಪಸ್ಥಿತಿಯಲ್ಲಿ ನಡೆಯುವ ಸಮಾರಂಭದಲ್ಲಿ ಸಂಸ್ಥೆಯ ಪ್ರಾಂಶುಪಾಲ ಸಂತೋಷ ಅಧ್ಯಕ್ಷತೆ ವಹಿಸುವರು.
ಲೇಖಕ ಯೋಗೀಂದ್ರ ಮರವಂತೆ ಅವರು ‘ತಾಂತ್ರಿಕ ವಿಷಯಗಳ ವಿನಿಮಯ’ಕುರಿತು ವಿಶೇಷ ಉಪನ್ಯಾಸ ನೀಡುವರು.

ನೆಫಿಸತ್

ನೆಫಿಸತ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT